EPFO : ಒಂದು ಗಂಟೆಯಲ್ಲಿ PF ಖಾತೆಯಿಂದ ಹಿಂಪಡೆಯಬಹುದು ಒಂದು ಲಕ್ಷ ರೂಪಾಯಿ ..!

ಕೊರೊನಾವೈರಸ್ ಅವಧಿಯಲ್ಲಿ, ವೈದ್ಯಕೀಯ ಅವಶ್ಯಕತೆಗಳಿಗೆ ಹಣದ ಅಗತ್ಯವಿದ್ದರೆ, ಈ ಸೇವೆಯ ಲಾಭವನ್ನು ಪಡೆಯಬಹುದು. ಆದರೆ ಇದಕ್ಕಾಗಿ ಖರ್ಚನ್ನು ತೋರಿಸಬೇಕಾಗುತ್ತದೆ.

Written by - Ranjitha R K | Last Updated : Jul 25, 2021, 11:24 AM IST
  • ಇಪಿಎಫ್‌ಒ ಚಂದಾದಾರರಿಗೆ ಒಳ್ಳೆಯ ಸುದ್ದಿ
  • ಇಪಿಎಫ್‌ಒ ತನ್ನ ಚಂದಾದಾರರಿಗೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ
  • ಈಗ 1 ಲಕ್ಷ ರೂ. ವರೆಗೆ ಮೆಡಿಕಲ್ ಅಡ್ವಾನ್ಸ್ ಪಡೆಯಬಹುದು
EPFO : ಒಂದು ಗಂಟೆಯಲ್ಲಿ PF ಖಾತೆಯಿಂದ ಹಿಂಪಡೆಯಬಹುದು ಒಂದು ಲಕ್ಷ ರೂಪಾಯಿ ..! title=
ಇಪಿಎಫ್‌ಒ ತನ್ನ ಚಂದಾದಾರರಿಗೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ (photo zee news)

ನವದೆಹಲಿ : ಇಪಿಎಫ್‌ಒ (EPFO) ಚಂದಾದಾರರಿಗೆ ಒಳ್ಳೆಯ ಸುದ್ದಿ ಇದೆ. ನಿಮಗೆ ಹಣ ಬೇಕಾದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಪಿಎಫ್ ಖಾತೆಯಿಂದ (PF account) ಹಣವನ್ನು ಹಿಂಪಡೆಯಬಹುದು. ಹೌದು ,ಇಪಿಎಫ್‌ಒ ತನ್ನ ಚಂದಾದಾರರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ  ನೌಕರರ ಭವಿಷ್ಯ ನಿಧಿಯ (EPF) ಅಡ್ವಾನ್ಸ್ ಪಿಎಫ್ ಬ್ಯಾಲೆನ್ಸ್‌ನಿಂದ ಒಂದು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. 

ವೈದ್ಯಕೀಯ ವೆಚ್ಚಗಳಿಗಾಗಿ ಪಡೆಯಬಹುದು ನಗದು : 
ಕೊರೊನಾವೈರಸ್ (Coronavirus) ಅವಧಿಯಲ್ಲಿ, ವೈದ್ಯಕೀಯ ಅವಶ್ಯಕತೆಗಳಿಗೆ ಹಣದ ಅಗತ್ಯವಿದ್ದರೆ, ಈ ಸೇವೆಯ ಲಾಭವನ್ನು ಪಡೆಯಬಹುದು. ಆದರೆ ಇದಕ್ಕಾಗಿ ಖರ್ಚನ್ನು ತೋರಿಸಬೇಕಾಗುತ್ತದೆ.

ಇದನ್ನೂ ಓದಿ :  PM Kisan: ಪಿಎಂ ಕಿಸಾನ್ ಫಲಾನುಭವಿಗಳು ಕೈಗೆಟುಕುವ ದರದಲ್ಲಿ ಸಾಲ ಪಡೆಯಲು ಇಲ್ಲಿದೆ ಸುಲಭ ಪ್ರಕ್ರಿಯೆ

1 ಲಕ್ಷ ರೂ. ವರೆಗಿನ ಮೆಡಿಕಲ್ ಅಡ್ವಾನ್ಸ್ : 
ನೌಕರರು 1 ಲಕ್ಷ ರೂ.ವರೆಗೆ ವೈದ್ಯಕೀಯ ಮುಂಗಡವನ್ನು ಹಿಂಪಡೆಯಬಹುದು ಎಂದು ಇಪಿಎಫ್‌ಒ (EPFO) ಸುತ್ತೋಲೆ ಹೊರಡಿಸಿದೆ. ಕರೋನವೈರಸ್ ಹೊರತುಪಡಿಸಿ, ಇತರ ಕಾಯಿಲೆಗಳ ತುರ್ತು ಪರಿಸ್ಥಿತಿಯಲ್ಲಿಯೂ,  ಆಸ್ಪತ್ರೆಗೆ ದಾಖಲಾದ ನಂತರ ಪಿಎಫ್‌ನಿಂದ ಹಣವನ್ನು ಹಿಂಪಡೆಯಬಹುದು.

ಹಣವನ್ನು ಪಡೆಯುವುದು ಹೇಗೆ?
ಮೊದಲು ಕೂಡಾ ವೈದ್ಯಕೀಯ ತುರ್ತು (Medical emergency) ಸಮಯದಲ್ಲಿ, ಇಪಿಎಫ್‌ನಿಂದ ಹಣವನ್ನು ಹಿಂಪಡೆಯಬಹುದಾಗಿತ್ತು. ಆದರೆ ಇದಕ್ಕಾಗಿ ನೀವು ವೈದ್ಯಕೀಯ ಬಿಲ್ ಅನ್ನು ಸಲ್ಲಿಸಬೇಕಿತ್ತು. ಬಿಲ್ ಸಲ್ಲಿಸಿದ ಬಳಿಕವಷ್ಟೇ ಅಡ್ವಾನ್ಸ್ ಪಡೆಯಬಹುದಾಗಿತ್ತು. ಈ ಹೊಸ ನಿಯಮದಲ್ಲಿ, ಮೊದಲೇ ಬಿಲ್ ನೀಡಬೇಕಾಗಿಲ್ಲ.  ನೀವು ಪಿಎಫ್ ಅಡ್ವಾನ್ಸ್ ಗೆ ಅರ್ಜಿ ಸಲ್ಲಿಸಿದ ತಕ್ಷಣ ಮೊತ್ತ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ. 

ಇದನ್ನೂ ಓದಿ : Corona Third Wave: ಈ ನಿಯಮಗಳನ್ನು ಅನುಸರಿಸಿದರೆ ಕರೋನಾ ಮೂರನೇ ತರಂಗ ತಪ್ಪಿಸಬಹುದು- ಏಮ್ಸ್ ಮುಖ್ಯಸ್ಥ ಡಾ. ಗುಲೇರಿಯಾ

ಇಡೀ ಪ್ರಕ್ರಿಯೆ ಇಲ್ಲಿದೆ :
1. ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು, ನೀವು ಮೊದಲು www.epfindia.gov.in ವೆಬ್‌ಸೈಟ್‌ನ ಮುಖಪುಟಕ್ಕೆ ಹೋಗಿ.

2. ಈಗ COVID-19 ಟ್ಯಾಬ್ ಅಡಿಯಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಆನ್‌ಲೈನ್ ಅಡ್ವಾನ್ಸ್ ಕ್ಲೈಮ್ ಅನ್ನು ಕ್ಲಿಕ್ ಮಾಡಿ.
3. ಆನ್‌ಲೈನ್ ಸೇವೆಗಳಿಗೆ ಹೋಗಿ ಕ್ಲೈಂ ಮಾಡಿ  (ಫಾರ್ಮ್ -31,19,10 ಸಿ ಮತ್ತು 10 ಡಿ)
4. ಈಗ ನಿಮ್ಮ ಬ್ಯಾಂಕ್ ಖಾತೆಯ ಕೊನೆಯ 4 ಅಂಕೆಗಳನ್ನು ನಮೂದಿಸಿ ಮತ್ತು ದೃಡೀಕರಿಸಿ.
4. ಇದರ ನಂತರ Proceed for Online Claim  ಕ್ಲಿಕ್ ಮಾಡಿ.
5. ಈಗ ಡ್ರಾಪ್ ಡೌನ್ ನಿಂದ PF Advance ಆಯ್ಕೆಮಾಡಿ (ಫಾರ್ಮ್ 31).
6. ಇದರ ನಂತರ ಕಾರಣವನ್ನು ಆರಿಸಿಕೊಳ್ಳಿ.
7. ಈಗ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು ಚೆಕ್‌ನ ಸ್ಕ್ಯಾನ್ ಮಾಡಿದ ನಕಲನ್ನು ಅಪ್‌ಲೋಡ್ ಮಾಡಿ ಮತ್ತು ನಿಮ್ಮ ವಿಳಾಸವನ್ನು ನಮೂದಿಸಿ.
8. ಇದರ ನಂತರ Get Aadhaar OTP' ' ಕ್ಲಿಕ್ ಮಾಡಿ ಮತ್ತು ಆಧಾರ್ ಲಿಂಕ್ಡ್ ಮೊಬೈಲ್‌ ಗೆ ಬಂದ ಒಟಿಪಿಯನ್ನು ಹಾಕಿ. 9. ಇಲ್ಲಿಗೆ ಕ್ಲೈಂ ಪ್ರಕ್ರಿಯೆ ಪೂರ್ಣ ಗೊಳ್ಳುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News