ಇಂದೋರ್: ರಾಜ್ಯದ ಉಪಚುನಾವಣೆಗೂ ಮುನ್ನ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ (Shivaraj Singh Chauhan) ತಮ್ಮ ರಾಜ್ಯದ ರೈತರಿಗೆ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮಧ್ಯ ಪ್ರದೇಶ ಸರ್ಕಾರ ಕೂಡ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಯ ಅಡಿ ತಮ್ಮ ರಾಜ್ಯದ ರೈತರಿಗೆ ವಾರ್ಷಿಕ ರೂ.4000 ನೀಡಲಿದೆ ಎಂದು ಘೋಷಿಸಿದ್ದಾರೆ.  ಇದರ ಜೊತೆಗೆ ವರ್ಷ 2022 ರವರೆಗೆ ರಾಜ್ಯದ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಅವರ ಸರ್ಕಾರ ಸಾಕಷ್ಟು ಹೆಜ್ಜೆಗಳನ್ನು ಇಡಲಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- PM KISAN YOJNA: ನವೆಂಬರ್ ಕಂತಿನ ಮೊದಲು ಈ ಕೆಲಸವನ್ನು ಮಾಡಿ, ಇಲ್ಲದಿದ್ದರೆ...


ಮುಖ್ಯಮಂತ್ರಿಯವರ ಈ ಘೋಷಣೆಯ ಬಳಿಕ, ಪಿಎಂ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿರುವ ರಾಜ್ಯದ  ರುಮಾರು 80 ಲಕ್ಷ ರೈತರಿಗೆ ಇದೀಗ ವಾರ್ಷಿಕವಾಗಿ 10,000 ರೂ. ಸಿಗಲಿದೆ.  ರೈತರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ ಮತ್ತು ರಾಜ್ಯ ಸರ್ಕಾರವು ವಾರ್ಷಿಕವಾಗಿ 4 ಸಾವಿರ ರೂಪಾಯಿಗಳನ್ನು ನೀಡಲಿದೆ. 2 ಸಾವಿರ ರೂಪಾಯಿಗಳ ಮೂರು ಕಂತುಗಳನ್ನು ಕೇಂದ್ರ ಸರ್ಕಾರವು ರೈತರಿಗೆ ನೀಡಿದರೆ, ರಾಜ್ಯ ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದೆ.


ಇದನ್ನು ಓದಿ- ರೈತರಿಗೆ Modi Government ಕೊಡುಗೆ, ರಾಬಿ ಬೆಳೆಗಳ MSPಯಲ್ಲಿ ಹೆಚ್ಚಳ


ಭೋಪಾಲ್‌ನಲ್ಲಿ ರಾಜ್ಯದ ರೈತರಿಗಾಗಿ ಆಯೋಜಿಸಲಾಗಿದ್ದ ಜಾಥಾ ಉದ್ದೇಶಿಸಿ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾನ್, “ಮುಖ್ಯಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆ ಮಧ್ಯಪ್ರದೇಶದಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ವಾರ್ಷಿಕವಾಗಿ 4 ಸಾವಿರ ರೂಪಾಯಿ ನೀಡಲಾಗುವುದು." ಎಂದು ಘೋಷಣೆ ಮಾಡಿದ್ದಾರೆ.


ಇದನ್ನು ಓದಿ- ರೈತರಿಗಾಗಿ Modi Government ಹೊತ್ತು ತಂದಿದೆ ಲಾಭದ ಯೋಜನೆ, ಸಿಗಲಿದೆ ಶೇ.80 ರಷ್ಟು ಸಬ್ಸಿಡಿ


ಇದಲ್ಲದೆ, "ಕಂದಾಯ ಸುತ್ತೋಲೆ ಪುಸ್ತಕದ ಅಡಿ  ಪಿಎಂ ಕಿಸಾನ್ ಸಮ್ಮಾನ್ ನಿಧಿ, ಶೇ.0 ರಷ್ಟು  ಬಡ್ಡಿಗೆ ಸಾಲ, ಪ್ರಧಾನ್ ಮಂತ್ರಿ ಬೆಳೆ ವಿಮಾ ಯೋಜನೆ ಇತ್ಯಾದಿಗಳನ್ನು ರೈತರಿಗೆ ಪರಿಹಾರದಂತಹ ಎಲ್ಲಾ ಯೋಜನೆಗಳನ್ನು ಪ್ಯಾಕೇಜ್ ಆಗಿ ಜಾರಿಗೆ ತರಲು ನಾವು ನಿರ್ಧರಿಸಿದ್ದೇವೆ, ಇದರಿಂದ ರೈತರ ಸರ್ವತೋಮುಖ ಬೆಳವಣಿಗೆಯಾಗಲಿದೆ" ಎಂದು ಚೌಹಾನ್ ಹೇಳಿದ್ದಾರೆ.