ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳಿಗೆ (Agriculture Bill) ರಾಜ್ಯಸಭೆ (Rajyasabha) ಯಲ್ಲಿ ಈಗಾಗಲೇ ಅಂಗೀಕಾರ ನೀಡಲಾಗಿದೆ. ಇದೇ ವೇಳೆ MSPಗೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದದ ನಡುವೆಯೇ ಸೋಮವಾರ ಮೋದಿ ಸರ್ಕಾರದ (Modi Government) ಸಂಪುಟ ಸಭೆ ರಾಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಕ್ಯಾಬಿನೆಟ್ ನ ಆರ್ಥಿಕ ವ್ಯವಹಾರಗಳ ಸಮಿತಿ ಈ ಅನುಮತಿ ನೀಡಿದೆ.
ಇದನ್ನು ಓದಿ- ಲೋಕಸಭೆಯಲ್ಲಿ 2 ಪ್ರಮುಖ ಕೃಷಿ ಬಿಲ್ ಅಂಗೀಕಾರ, ಟ್ವೀಟ್ ಮೂಲಕ ಪ್ರಧಾನಿ ನೀಡಿದ್ರು ಈ ಭರವಸೆ
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ಲೋಕಸಭೆಯಲ್ಲಿ 2021- 22 ವರ್ಷದ ರಾಬಿ ಬೆಳೆಗಳ ಕನಿಷ್ಠ ಬೆಂಬಲ ಬೆಳೆಗಳನ್ನು ಘೋಷಿಸಿದ್ದಾರೆ. ಈ ವೇಳೆ ಮಾತನಾಡಿರುವ ತೋಮರ್, ಇದರಿಂದ ರೈತರಿಗೆ ಸಾಗುವಳಿ ಮೌಲ್ಯದ ಮೇಲೆ ಶೇ.106ರಷ್ಟು ಲಾಭ ಸಿಗಲಿದೆ ಹಾಗೂ ಕನಿಷ್ಠ ಬೆಂಬಲ ಬೆಲೆಯ ಖರೀದಿ ಕೂಡ ಜಾರಿಯಲ್ಲಿರಲಿದೆ.
ಇದನ್ನು ಓದಿ- ದೇಶದ ಅನ್ನದಾತನಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ PM Modi Government
ಕಡಲೆ
ಬೆಂಬಲ ಬೆಲೆ - 5100 ರೂ. ಪ್ರತಿ ಕ್ವಿಂಟಾಲ್
ವೃದ್ಧಿ - ಶೇ.4.6 ರಂತೆ ರೂ. 225 ಪ್ರತಿ ಕ್ವಿಂಟಾಲ್ ವೃದ್ಧಿ.
ಲಾಭ - ಶೇ.78
ಜೋಳ
ಬೆಂಬಲ ಬೆಲೆ - ಪ್ರತಿ ಕ್ವಿಂಟಲ್‌ಗೆ 1600 ರೂ
ಬೆಳವಣಿಗೆಯ ದರ - ಶೇಕಡಾ 4.9 ಅಂದರೆ ಕ್ವಿಂಟಲ್‌ಗೆ 75 ರೂ
ಲಾಭ - 65 ಪ್ರತಿಶತ
ಮಸೂರ್ ಅಥವಾ ಚನ್ನಂಗಿ ಬೆಳೆ
ಬೆಳವಣಿಗೆಯ ದರ - ಶೇಕಡಾ 6.3 ಅಂದರೆ ಕ್ವಿಂಟಲ್‌ಗೆ 300 ರೂ
ಲಾಭ - 78 ಪ್ರತಿಶತ
ಸಾಸಿವೆ ಹಾಗೂ ರೆಡ್ ಸೀಡ್
ಬೆಂಬಲ ಬೆಲೆ - ಪ್ರತಿ ಕ್ವಿಂಟಲ್‌ಗೆ 4650 ರೂ
ಬೆಳವಣಿಗೆಯ ದರ - 5.1 ಪ್ರತಿಶತ ಅಂದರೆ ಪ್ರತಿ ಕ್ವಿಂಟಲ್‌ಗೆ 225 ರೂ
ಲಾಭ - 93 ಶೇಕಡಾ
ಕುಸುಬಿ
ಬೆಂಬಲ ಬೆಲೆ - ಪ್ರತಿ ಕ್ವಿಂಟಲ್‌ಗೆ 5327 ರೂ
ಬೆಳವಣಿಗೆಯ ದರ - ಶೇಕಡಾ 2.1 ಅಂದರೆ ಕ್ವಿಂಟಲ್‌ಗೆ 112 ರೂ
ಲಾಭ - 50 ಪ್ರತಿಶತ
ಗೋದಿ
ಬೆಂಬಲ ಬೆಲೆ - ಕ್ವಿಂಟಲ್‌ಗೆ 1975
ಬೆಳವಣಿಗೆಯ ದರ - ಶೇಕಡಾ 2.6 ಅಂದರೆ ಕ್ವಿಂಟಲ್‌ಗೆ 50 ರೂ
ಲಾಭ - 106 ಶೇಕಡಾ
ಧಾನ್ಯ
ಬೆಂಬಲ ಬೆಲೆ - 1868 / ಕ್ವಿಂಟಾಲ್