`ಪಿಎಂ ಸೂರ್ಯ ಘರ್` : ಮುಫ್ತ್ ಬಿಜ್ಲಿ ಯೋಜನೆ ಆರಂಭ : ಪಿಎಂ ಮೋದಿ
Prime minister : ಕೇಂದ್ರ ಸರ್ಕಾರವು `ಪಿಎಂ ಸೂರ್ಯ ಘರ್` : ಮುಫ್ತ್ ಬಿಜ್ಲಿ ಯೋಜನೆಯನ್ನು ಸೌರ್ ವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಆರಂಭಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.
PM Scheme : ಸೌರ್ ವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ 'ಪಿಎಂ ಸೂರ್ಯ ಘರ್' : ಮುಫ್ತ್ ಬಿಜ್ಲಿ ಯೋಜನೆಯನ್ನು ಆರಂಭಿಸುತ್ತಿದೆ ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರತಿ ತಿಂಗಳು ತಲಾ 300 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನ್ನು ಒಂದು ಕೋಟಿ ಮನೆಗಳಿಗೆ ಪೂರೈಸುವ ಉದ್ದೇಶವನ್ನು ಈ ಗುರಿ ಹೊಂದಿದೆ. ಒಟ್ಟು 75 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಈ ಯೋಜನೆಗಾಗಿ ವಿನಿಯೋಗಿಸಲಾಗಿದೆ. ಜನರ ಹಿತದೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದನ್ನು ಓದಿ : ಖ್ಯಾತ ನಟಿ ಜಯಪ್ರದಾ ಬಂಧನಕ್ಕೆ ಕೋರ್ಟ್ ಆದೇಶ!
ಈ ಯೋಜನೆಯು ಗಣನೀಯ ಪ್ರಮಾಣದ ಸಬ್ಸಿಡಿಯನ್ನು ಹೊಂದಿದ್ದು, ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ತಲಾ 300 ಯುನಿಟ್ ವರೆಗೆ ಉಚಿತವಾಗಿ ವಿದ್ಯುತ್ ನ್ನು ಪೂರೈಸುವ ಉದ್ದೇಶವನ್ನು ಈ ಗುರಿ ಹೊಂದಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ :83ನೇ ವಯಸ್ಸಿಗೆ 29ರ ಗರ್ಲ್ ಫ್ರೆಂಡ್‌ನಿಂದ ತಂದೆಯಾದ ಖ್ಯಾತ ನಟ.!
ಸಬ್ಸಿಡಿ ಮೊತ್ತವನ್ನು ಯೋಜನೆಗೆ ಸೇರುವವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಈ ಮೂಲಕ ಜನರ ಮೇಲೆ ವೆಚ್ಚದ ಹೊರೆ ಬೀಳದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಮತ್ತು ಈ ಕುರಿತಂತೆ ಬ್ಯಾಂಕ್ ಸಾಲವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಈ ಯೋಜನೆಯಿಂದ ಜನರ ಆದಾಯ ಮಟ್ಟವನ್ನು ಹೆಚ್ಚಿಸುವ , ವಿದ್ಯುತ್ ಬಿಲ್ ಮೊತ್ತವನ್ನು ತಗ್ಗಿಸುವ ಮತ್ತು ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.