Universal Health Cover: ಪ್ರತಿ ಭಾರತೀಯರಿಗೂ ಸಿಗಲಿದೆ ವೈದ್ಯಕೀಯ ವಿಮಾ ರಕ್ಷಣೆ, ಈ ಯೋಜನೆಯ ವಿಸ್ತಾರಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ
PMJAY Clone Medical Cover - ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸರ್ಕಾರದ ಹಿರಿಯ ಅಧಿಕಾರಿಯೋಬ್ಬರು ಇದಕ್ಕಾಗಿ ಸರ್ಕಾರ (Modi Government)ಒಟ್ಟು 21 ವಿಮಾ ಕಂಪನಿಗಳ ಜೊತೆಗೆ ಮಾತುಕತೆ ನಡೆಸುತಿದ್ದು, 40 ಕೋಟಿ ಹೆಚ್ಚುವರಿ ಜನರಿಗೆ ಸ್ವಇಚ್ಚೆಯ ಆಧಾರದ ಮೇಲೆ ಸರ್ಕಾರ `PMJAY Claim Cover`ನೀಡಲಿದೆ. ಯಾವುದೇ ಆರೋಗ್ಯ ವಿಮಾ ಪಾಲಸಿ ಹೊಂದಿಲ್ಲದವರಿಗೆ ಈ ಗ್ರೂಪ್ ಕವರ್ ಇರಲಿದೆ ಎಂದು ಅವರು ಹೇಳಿದ್ದಾರೆ.
PMJAY Clone Medical Cover -
ದೇಶದ ಎಲ್ಲಾ ನಾಗರಿಕರಿಗೆ ಸರ್ಕಾರ ಈ ಯೋಜನೆಯ ಲಾಭ ನೀಡಲಿದೆ.
ದೇಶದಲ್ಲಿ ವೈದ್ಯಕೀಯ ವಿಮೆಯ ಸೌಲಭ್ಯಗಳಿಂದ ವಂಚಿತರಾಗಿರುವ 40 ಕೋಟಿಗೂ ಅಧಿಕ ಜನರಿಗೆ ಸರ್ಕಾರ ಹೊಸ ಆರೋಗ್ಯ ಯೋಜನೆಯನ್ನು ನೀಡುವ ಸಿದ್ಧತೆಯಲ್ಲಿದೆ. ಸರ್ಕಾರವು ಇದಕ್ಕಾಗಿ 21 ವಿಮಾ ಕಂಪನಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಸರ್ಕಾರವು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಮತ್ತು ವಿಮಾ ಕಂಪನಿಗಳ ನಡುವಿನ ಒಡಂಬಡಿಕೆಗೆ ಸಹಿ ಹಾಕಲು ಯೋಜಿಸುತ್ತಿದೆ. ಈ ಕಂಪನಿಗಳು ಕುಟುಂಬಗಳಿಗೆ ಹೆಚ್ಚಿನ ಸಬ್ಸಿಡಿ ಕವರ್ ನೀಡಲಿವೆ.
ಪ್ರಸ್ತುತ, ದೇಶದ ಸುಮಾರು 50 ಕೋಟಿ ಬಡ ಕುಟುಂಬಗಳು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (PMJAY) ಲಾಭವನ್ನು ಪಡೆಯುತ್ತಿವೆ. ಇದರಲ್ಲಿ, ಇಡೀ ಕುಟುಂಬವು 5 ಲಕ್ಷ ರೂ.ಗಳ ವಿಮಾ ರಕ್ಷಣೆ ಪಡೆಯುತ್ತದೆ. ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿರುವ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, ಕಂಪನಿಗಳು ಸ್ವಯಂಪ್ರೇರಿತ ಆಧಾರದ ಮೇಲೆ 40 ಕೋಟಿ ಹೆಚ್ಚುವರಿ ಜನರಿಗೆ 'PMJAY ಕ್ಲೋನ್ ಕವರ್' ನೀಡಲಿವೆ ಎಂದು ಹೇಳಿದ್ದಾರೆ. ಯಾವುದೇ ವೈದ್ಯಕೀಯ ವಿಮೆ ಇಲ್ಲದ ಕುಟುಂಬಗಳಿಗೆ ಈ ಗ್ರೂಪ್ ಕವರ್ ಇರಲಿದೆ ಎಂದು ಅವರು ಹೇಳಿದ್ದಾರೆ. ಇದು 'ಯುನಿವರ್ಸಲ್ ಹೆಲ್ತ್ ಕವರೇಜ್' (UHC) ದಿಕ್ಕಿನೆಡೆಗೆ ಸರ್ಕಾರ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
PMJAY ಯೋಜನೆಯ 50 ಕೋಟಿ ಬಡ ಜನರನ್ನು ಹೊರತುಪಡಿಸಿ, 3 ಕೋಟಿ ಜನರು ರಾಜ್ಯಗಳ ವಿವಿಧ ಯೋಜನೆಗಳಲ್ಲಿ ವಿಮಾ ರಕ್ಷಣೆ ಪಡೆಯುತ್ತಿದ್ದಾರೆ. 15-17 ಕೋಟಿ ಜನರನ್ನು ECHS, ESCI ಮತ್ತು CGHS ನಂತಹ ಕೇಂದ್ರ ಯೋಜನೆಗಳಲ್ಲಿ ಸೇರಿಸಲಾಗಿದೆ. ಆದರೆ, 14 ಕೋಟಿ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಕಂಪನಿಗಳಲ್ಲಿ ವಿಮೆಯನ್ನು ಪಡೆಯುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ.
ಈ ಎಲ್ಲಾ ಯೊಜನೆಗಳ ಹೊರತಾಗಿಯೂ ಕೂಡ ಮೆಡಿಕಲ್ ಕವರ್ ಇಲ್ಲದೆ ಇರುವ 40 ಕೋಟಿ ಜನರಿದ್ದಾರೆ. ಅವರನ್ನು 'ಮಿಸ್ಸಿಂಗ್ ಮಿಡ್ಲ್' ಎಂದು ಕರೆಯಲಾಗುತ್ತದೆ. ಇದರರ್ಥ ವಿಮೆ ಖರೀದಿಸಲು ಸಾಧ್ಯವಾಗದ ಜನರು ಅಥವಾ ಅವರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲದ ಜನರು ಈ ಪಟ್ಟಿಗೆ ಸೇರುತ್ತಾರೆ. ಕೋವಿಡ್‌ನ ದೃಷ್ಟಿಯಿಂದ ವೈದ್ಯಕೀಯ ರಕ್ಷಣೆಯ ಕೊರತೆಯಿಂದಾಗಿ, ಈ 'ಮಿಸ್ಸಿಂಗ್ ಮಿಡಲ್ ' ಆರೋಗ್ಯ ವೆಚ್ಚದಿಂದಾಗಿ ಬಡತನಕ್ಕೆ ಬಲಿಯಾಗಬಹುದು ಎಂದು ಸರ್ಕಾರ ಭಾವಿಸಿದೆ. ಇತ್ತೀಚಿನ ಪ್ರಸ್ತುತಿಯಲ್ಲಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹಿರಿಯ ಸಲಹೆಗಾರರು ವೈದ್ಯಕೀಯ ವಿಮಾ ರಕ್ಷಣೆಯನ್ನು ಖರೀದಿಸದಿರಲು, ಅರಿವಿನ ಕೊರತೆ, ಕಡಿಮೆ ವ್ಯಾಪ್ತಿ, ದುಬಾರಿ ಉತ್ಪನ್ನಗಳು, ವೆಚ್ಚಗಳು ಸೇರಿದಂತೆ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಶಾರ್ಟ್‌ಲಿಸ್ಟ್ ಮಾಡಲಾಗಿರುವ 21 ಕಂಪನಿಗಳ ಹೆಸರುಗಳಲ್ಲಿ ಮ್ಯಾಕ್ಸ್ ಬುಪಾ ಆರೋಗ್ಯ ವಿಮಾ ಕಂಪನಿ ಲಿಮಿಟೆಡ್, ರಾಯಲ್ ಸುಂದರಂ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸೇರಿದಂತೆ ಹಲವು ದೊಡ್ಡ ಕಂಪನಿಗಳು ಶಾಮೀಲಾಗಿವೆ. ಈ ಕಂಪನಿಗಳಿಗೆ ಮಾಹಿತಿ ನೀಡಲು ಕೋರಲಾಗಿದೆ. ಅವರು ಒಳಗೊಂಡಿರುವ ಉದ್ದೇಶಿತ ಗುಂಪಿನ ಮಾಹಿತಿ, ಅವರ ಭೌಗೋಳಿಕ ಸ್ಥಳ, ಉತ್ಪನ್ನ ಮಾಹಿತಿ, ಪ್ರೀಮಿಯಂಗಳು, ಆಸ್ಪತ್ರೆಗಳು, ಇತರ ಹಲವು ವಿಷಯಗಳನ್ನು ಇದು ಒಳಗೊಂಡಿದೆ.
ಇದನ್ನೂ ಓದಿ- Aryan Khan Drug Case: ಕುಸಿಯುತ್ತಿದೆ ಶಾರುಖ್ ಖಾನ್ Brand Value, ಜಾಹೀರಾತಿಗೆ ಬ್ರೇಕ್ ಹಾಕಿದ ದೊಡ್ಡ ದೊಡ್ಡ ಬ್ರಾಂಡ್ ಗಳು
ವಿದೇಶದ ಉದಾಹರಣೆ
UHCಗೆ ಸಂಬಂಧಿಸಿದಂತೆ ಭಾರತವು ವಿದೇಶಗಳಿಂದ ಅನೇಕ ಉದಾಹರಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದೆ. ಸರ್ಕಾರಕ್ಕೆ ಇತ್ತೀಚಿನ ಪ್ರಸ್ತುತಿಯಲ್ಲಿ, ಬ್ರೆಜಿಲ್, ಬ್ರಿಟನ್, ನಾರ್ವೆ, ಡೆನ್ಮಾರ್ಕ್, ಗ್ರೀಸ್, ಪೋರ್ಚುಗಲ್, ಇಟಲಿ ಮತ್ತು ಸ್ಪೇನ್ ಅರ್ಹತೆಯನ್ನು ಸಾರ್ವತ್ರಿಕಗೊಳಿಸಿದೆ ಮತ್ತು ಬಡವರಿಗೆ ತೆರಿಗೆ-ಹಣಕಾಸು ಮತ್ತು ಸಬ್ಸಿಡಿ ವ್ಯಾಪ್ತಿಯನ್ನು ಒದಗಿಸಿದೆ ಎಂದು ಹೇಳಲಾಗಿದೆ. ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳು ಬಡವರಿಗೆ ಮತ್ತು ಅಪಾಯದಲ್ಲಿರುವವರಿಗೆ ಸಬ್ಸಿಡಿ ವ್ಯಾಪ್ತಿಯನ್ನು ವಿಸ್ತರಿಸಿದೆ. ಆದರೆ, ವಿಮೆ ಸ್ಥಿತಿಯಿಲ್ಲದೆ ಎಲ್ಲರಿಗೂ ಸೇವಾ ಪ್ಯಾಕೇಜ್‌ಗಳನ್ನು ನೀಡಲು ಚಿಲಿ ನಿರ್ಧರಿಸಿದೆ.
ಇದನ್ನೂ ಓದಿ-Viral Video: ಅಳಿಲು-ಹಾವಿನ ಕಿತ್ತಾಡದಲ್ಲಿ ತೊಂದರೆ ಆಗಿದ್ದು ಯಾರಿಗೆ ಗೊತ್ತಾ? ನೀವೇ ನೋಡಿ
ರಷ್ಯಾ ಮತ್ತು ಕಜಾಕಿಸ್ತಾನ ಕೂಡ ಉದ್ಯೋಗದ ಸ್ಥಿತಿಯನ್ನು ಲೆಕ್ಕಿಸದೆ ಆರೋಗ್ಯ ಹಕ್ಕುಗಳನ್ನು ಹೆಚ್ಚಿಸಲು ಆದಾಯದ ಮಾರ್ಗಗಳನ್ನು ಬಳಸಿಕೊಂಡಿವೆ. ಆದರೆ 130 ಕೋಟಿ ಜನಸಂಖ್ಯೆಯನ್ನು ಹೊಂದಿರುವುದು ಭಾರತಕ್ಕೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ-ದೆಹಲಿ ಮಾಲಿನ್ಯ ತಡೆಗೆ ಸಿಎಂ ಕೇಜ್ರಿವಾಲ್ ಕಠಿಣ ಹೆಜ್ಜೆ, 'ರೆಡ್ ಲೈಟ್ ಆನ್ ಕಾರ್ ಆಫ್' ಅಭಿಯಾನಕ್ಕೆ ಚಾಲನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.