ನವದೆಹಲಿ : ದೆಹಲಿಯ ಮಾಲಿನ್ಯವು ಕಳೆದ ಒಂದು ತಿಂಗಳಿನಿಂದ ಸುರಕ್ಷಿತ ಮಿತಿಯಲ್ಲಿತ್ತು. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮಾಲಿನ್ಯ (Delhi's Pollution) ಹೆಚ್ಚಾಗಿದೆ. ಏಕೆಂದರೆ ಹತ್ತಿರದ ರಾಜ್ಯಗಳ ರೈತರು ಹುಲ್ಲು ಸುಡಲು ಆರಂಭಿಸಿದ್ದಾರೆ. ನಾಸಾದ ಫೋಟೋ ಕೂಡ ಹೊರ ಬಂದಿದೆ. ದೆಹಲಿಯ ಜನರು ನಮ್ಮೊಂದಿಗಿದ್ದಾರೆ. ಮಾಲಿನ್ಯದಲ್ಲಿ 25 ಪ್ರತಿಶತದಷ್ಟು ಇಳಿಕೆ ಕಂಡುಬಂದಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.
ಹುಲ್ಲು ಸುಡುವುದರಿಂದ ಹೆಚ್ಚಿದ ಮಾಲಿನ್ಯ :
ಹುಲ್ಲು ಸುಡುವುದರಿಂದ ಮಾಲಿನ್ಯ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಹೇಳಿದ್ದಾರೆ. ದೆಹಲಿಯ ಮಾಲಿನ್ಯವನ್ನು ಕಡಿಮೆ ಮಾಡಬೇಕು ಇದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೆಡ್ ಲೈಟ್ ಆನ್ ಗಾಡಿ ಆಫ್ (Red Light On Gaadi Off) ಅಭಿಯಾನವನ್ನು ಅಕ್ಟೋಬರ್ 18 ರಿಂದ ನಡೆಸಲಾಗುವುದು. ಇದು ತೈಲವನ್ನು ಉಳಿಸುತ್ತದೆ ಮತ್ತು ಮಾಲಿನ್ಯವನ್ನು (Delhi Pollution)ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷವೂ ನಾವು ಈ ಅಭಿಯಾನವನ್ನು ನಡೆಸಿದ್ದೇವೆ. ಆದರೆ ಎಲ್ಲರೂ ಇದನ್ನು ಇಂದಿನಿಂದಲೇ ಅನುಸರಿಸಲು ಆರಂಭಿಸುವಂತೆ ಅವರು ವಿನಂತಿ ಮಾಡಿದ್ದಾರೆ.
ಇದನ್ನೂ ಓದಿ : Pakistani Terrorist Arrested In Delhi: ದೆಹಲಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕನ ಬಂಧನ, AK-47, ಮದ್ದುಗುಂಡುಗಳು ವಶಕ್ಕೆ
We had started the 'Red Light on, Gaadi off' initiative last year. This will begin again from 18th October, as soon as you stop at a Red signal, turn down the engines of your vehicle. You can begin today itself, though it'll be formally launched on 18th: Delhi CM Arvind Kejriwal pic.twitter.com/cWCmeRCAqo
— ANI (@ANI) October 12, 2021
ಒಂದು ದಿನ ಕಾರನ್ನು ಬಳಸಬೇಡಿ :
ವೈಯಕ್ತಿಕ ವಾಹನವನ್ನು ವಾರದಲ್ಲಿ ಒಂದು ದಿನವಾದರೂ ಬಳಸದಿರುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕ ವಾಹನ ಮೆಟ್ರೋ (Metro) ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಂತೆ ಹೇಳಿದ್ದಾರೆ.
ಗ್ರೀನ್ ದೆಹಲಿ ಆಪ್ ಡೌನ್‌ಲೋಡ್ ಮಾಡಿ :
ಗ್ರೀನ್ ದೆಹಲಿ ಆಪ್ (Green Delhi app) ಬಿಡುಗಡೆ ಮಾಡಿದ್ದು, ಅದನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ, ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಎಲ್ಲಿಯಾದರೂ ಮಾಲಿನ್ಯ, ಕೈಗಾರಿಕಾ ಮಾಲಿನ್ಯ ಅಥವಾ ಯಾರಾದರೂ ಕಸವನ್ನು ಸುಡುವುದನ್ನು ನೋಡಿದರೆ, ಈ ಬಗ್ಗೆ ಗ್ರೀನ್ ದೆಹಲಿ ಆಪ್‌ನಲ್ಲಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ. ದೂರಿನ ನಂತರ, ನಮ್ಮ ತಂಡವು ಮಾಲಿನ್ಯಕ್ಕೆ ಕಾರನರಾಗುವವರನ್ನು ತಡೆಯುತ್ತದೆ. ಇದುವರೆಗೆ ಗ್ರೀನ್ ದೆಹಲಿ ಆಪ್ ಮೂಲಕ 23 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ 3 ಟಿಆರ್‌ಎಫ್ ಭಯೋತ್ಪಾದಕರ ಹತ್ಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ