ನವದೆಹಲಿ / ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ (ಪಿಎನ್‌ಬಿ ಹಗರಣ) ಪ್ರಕರಣದಲ್ಲಿ ನೀರವ್ ಮೋದಿ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. PNB ಪ್ರಕರಣದಲ್ಲಿ ದೇಶದಿಂದ ಪಲಾಯನಗೈದ ವಜ್ರ ವ್ಯಾಪಾರಿ ನೀರವ್ ಮೋದಿ ಅವರನ್ನು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಯ 'ಪರಾರಿಯಾದ ಆರ್ಥಿಕ ಅಪರಾಧಿ' ಎಂದು ಘೋಷಿಸಿದೆ. ಈ ಹಿನ್ನೆಲೆ ಶೀಘ್ರದಲ್ಲೇ, ನೀರವ್ ಮೋದಿ ಅವರ ಆಸ್ತಿ ವಶಕ್ಕೆ ಆದೇಶ ಸಹ ನೀಡಲಾಗುವುದು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಬುಧವಾರ ಈ ಕುರಿತು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯವು ನೀರವ್ ಸೇರಿದಂತೆ ಇತರೆ ಮೂವರು ಆರೋಪಿಗಳ ವಿರುದ್ಧ ನೋಟಿಸ್ ಜಾರಿಗೊಳಿಸಿ, ಜನವರಿ 15ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡಿತ್ತು. ಅಷ್ಟೇ ಅಲ್ಲ ಈ ಮೂವರು ಆರೋಪಿಗಳು ಒಂದು ವೇಳೆ  ನ್ಯಾಯಾಲಯಕ್ಕೆ ಹಾಜರಾಗದೆ ಹೋದಲ್ಲಿ ಅವರನ್ನು ಪರಾರಿ ಎಂದು ಘೋಷಿಸಲಾಗುವುದು ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿತ್ತು.


ವಿಶೇಷ ಸಿಬಿಐ ನ್ಯಾಯಾಲಯವು ನೀರವ್ ಮೋದಿ ಮತ್ತು ಅವರ ಆಪ್ತ ಸಹಾಯಕರಾದ ನಿಶಾಲ್ ಮೋದಿ ಮತ್ತು ಸುಭಾಷ್ ಪರಬ್ ವಿರುದ್ಧ ಸಮನ್ಸ್ ಜಾರಿಗೊಳಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು. ಆದರೆ, ಈ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ಅವರನ್ನು 'ಪರಾರಿಯಾದ ಆರ್ಥಿಕ ಅಪರಾಧಿಗಳು' ಎಂದು ಘೋಷಿಸಿದೆ.


ಕಾನೂನು ಯಾವುದೇ ಓರ್ವ ಆರೋಪಿಯನ್ನು ಪರಾರಿ ಎಂದು ಘೋಷಿಸಿದರೆ, ತನಿಖಾ ಸಂಸ್ಥೆಗಳು ಆತನಿಗೆ ಸಂಬಂಧಪಟ್ಟ ಆಸ್ತಿಗಳನ್ನು ಸಹ ಪ್ರಕರಣಕ್ಕೆ ಲಗತ್ತಿಸಲು ಕ್ರಮ ಕೈಗೊಳ್ಳಬಹುದಾಗಿದೆ. ಇದಕ್ಕೂ ಮೊದಲು ವಿಶೇಷ ಇಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಜಾರಿ ನಿರ್ದೇಶನಾಲಯ, ನಿರವ್ ಮೋದಿಯನ್ನು 'ಪರಾರಿ' ಎಂದು ಘೋಷಿಸುವಂತೆ ಮನವಿ ಮಾಡಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ನಿಂದ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.