ನವದೆಹಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya)ಕೆಲವು ರಾಜಕಾರಣಿಗಳು ಮತ್ತು ಆಡಳಿತ ಅಧಿಕಾರಿಗಳು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಈ ಹಗರಣದ ಆರೋಪ ಮಾಡಿದೆ. ಈ ವಿಷಯವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಜನರ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ್ದಾರೆ.  


COMMERCIAL BREAK
SCROLL TO CONTINUE READING

ದಲಿತರ ಭೂಮಿ ಕಬಳಿಸಲಾಗಿದೆ: ಪ್ರಿಯಾಂಕಾ ಗಾಂಧಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ (Priyanaka Gandhi), 'ದೇಶದ ಪ್ರತಿಯೊಂದು ಮನೆಯವರು ರಾಮಮಂದಿರ ಟ್ರಸ್ಟ್ ಗೆ  ದೇಣಿಗೆ ನೀಡಿದ್ದಾರೆ. ಮನೆ ಮನೆಗೆ ತೆರಳಿ ಈ ಬಗ್ಗೆ ಪ್ರಚಾರ ನಡೆಸಲಾಯಿತು. ಬಡ ಕುಟುಂಬಗಳು ಮತ್ತು ಮಹಿಳೆಯರು ತಮ್ಮ ಉಳಿತಾಯದಿಂದ ದೇಣಿಗೆ ನೀಡಿದ್ದಾರೆ. ಇದು ಭಕ್ತಿಯ ವಿಷಯವಾಗಿದ್ದು, ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಖರೀದಿಸಲು ಸಾಧ್ಯವಾಗದ ದಲಿತರ ಜಮೀನನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಆಪಾದಿಸಿದ್ದಾರೆ. 
 
ಇದನ್ನೂ ಓದಿ : 
ಎಚ್ಚರ..! ಚಾಲನೆ ವೇಳೆ ಮಾಡುವ ಈ ಸಣ್ಣ ತಪ್ಪಿಗೆ ಬೀಳಲಿದೆ 5 ಸಾವಿರ ರೂ.ಗಳ ದಂಡ


ದೇಣಿಗೆ ಹಣದಲ್ಲಿ ಹಗರಣ : ಪ್ರಿಯಾಂಕಾ ಗಾಂಧಿ
ಕಡಿಮೆ ಬೆಲೆ ಬಾಳುವ ಜಮೀನನ್ನು ಅತಿ ಹೆಚ್ಚಿನ ಹಣಕ್ಕೆ ಟ್ರಸ್ಟ್ಗೆ ನೀಡಲಾಗಿದೆ. ಅಂದರೆ ದೇಣಿಗೆ ಕಾಣಿಕೆ ಹಣದಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ರಾಮ ಮಂದಿರದ (Ram Mandir) ಸುತ್ತಲಿನ ಭೂಮಿಯನ್ನು ಲೂಟಿ ಮಾಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ. ಈ ಲೂಟಿಯಲ್ಲಿ ಬಿಜೆಪಿ (BJP) ಮುಖಂಡರು, ಅಧಿಕಾರಿಗಳು, ಟ್ರಸ್ಟ್ ನವರು ಶಾಮೀಲಾಗಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.


ಸುಪ್ರೀಂ ಕೋರ್ಟ್ ಮಟ್ಟದಲ್ಲಿ ತನಿಖೆ ನಡೆಯಬೇಕು: ಪ್ರಿಯಾಂಕಾ ಗಾಂಧಿ
'ಉತ್ತರ ಪ್ರದೇಶ ಸರ್ಕಾರವು ತನಿಖಾ ಆಯೋಗವನ್ನು ನೇಮಿಸುತ್ತಿದೆ ಎಂದು ಹೇಳಿದೆ, ಆದರೆ ತನಿಖೆಯನ್ನು ಯಾರು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಮಟ್ಟದ ಜನರು ತನಿಖೆ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ಆದೇಶದ ಮೇಲೆ ರಾಮಮಂದಿರ ಟ್ರಸ್ಟ್ (Ram Mandir Trust) ರಚನೆಯಾಗಿದ್ದರೆ, ಈ ವಿಚಾರಣೆಯನ್ನು ಕೂಡಾ ಸುಪ್ರೀಂ ಕೋರ್ಟ್ ಕೂಡ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. 


ಇದನ್ನೂ ಓದಿ : ಹಿಂದೂಗಳು ಸತ್ಯದ ಮಾರ್ಗ ಅನುಸರಿಸುತ್ತಾರೆ, ಹಿಂದುತ್ವ ಧರ್ಮದ ನೆಪದಲ್ಲಿ ಲೂಟಿ ಮಾಡುತ್ತಿದೆ: ರಾಹುಲ್ ಗಾಂಧಿ


ತನಿಖೆಗೆ ಆದೇಶಿಸಿದ ಸಿಎಂ ಯೋಗಿ ಆದಿತ್ಯನಾಥ್  :
ಅಯೋಧ್ಯೆಯಲ್ಲಿ ಕೆಲವು ರಾಜಕಾರಣಿಗಳು ಮತ್ತು ಆಡಳಿತಾತ್ಮಕ ಅಧಿಕಾರಿಗಳು ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Aadityanath)ತನಿಖೆಗೆ ಆದೇಶಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.