ಎಚ್ಚರ..! ಚಾಲನೆ ವೇಳೆ ಮಾಡುವ ಈ ಸಣ್ಣ ತಪ್ಪಿಗೆ ಬೀಳಲಿದೆ 5 ಸಾವಿರ ರೂ.ಗಳ ದಂಡ

ಶಾರ್ಟ್ ಕಟ್ ಬಳಸುವುದು ತಪ್ಪಲ್ಲ. ಆದರೆ ಶಾರ್ಟ್ ಕಟ್ ನೆಪದಲ್ಲಿ ರಾಂಗ್ ಸೈಡ್ ನಲ್ಲಿ ವಾಹನ ಚಾಲನೆ ಅಪರಾಧವಾಗಿ ಬಿಡುತ್ತದೆ. ನೀವು ಹಾಗೆ ಮಾಡುತ್ತಿದ್ದರೆ ನಿಮ್ಮ ತಪ್ಪು ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ. 

Written by - Ranjitha R K | Last Updated : Dec 23, 2021, 10:55 AM IST
  • ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕ್ರಮ
  • ಹೊಸ ಮೋಟಾರು ವಾಹನ ಕಾಯ್ದೆಯಡಿ 5000 ರೂ. ದಂಡ
  • ರಾಂಗ್ ಸೈಡ್ ನಲ್ಲಿ ವಾಹನ ಚಾಲನೆ ಅಪಾಯಕಾರಿ
ಎಚ್ಚರ..! ಚಾಲನೆ ವೇಳೆ ಮಾಡುವ ಈ ಸಣ್ಣ ತಪ್ಪಿಗೆ ಬೀಳಲಿದೆ 5 ಸಾವಿರ ರೂ.ಗಳ ದಂಡ title=
ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕ್ರಮ (file photo)

ನವದೆಹಲಿ : ಸಮಯವನ್ನು ಉಳಿಸುವ ಸಲುವಾಗಿ ವಾಹನ ಚಾಲನೆ ವೇಳೆ ಶಾರ್ಟ್ ಕಟ್ ಬಳಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ಶಾರ್ಟ್ ಕಟ್ ಬಳಸುವುದು ತಪ್ಪಲ್ಲ. ಆದರೆ ಶಾರ್ಟ್ ಕಟ್ ನೆಪದಲ್ಲಿ ರಾಂಗ್ ಸೈಡ್ ನಲ್ಲಿ ( wrong side driving) ವಾಹನ ಚಾಲನೆ ಅಪರಾಧವಾಗಿ ಬಿಡುತ್ತದೆ. ನೀವು ಹಾಗೆ ಮಾಡುತ್ತಿದ್ದರೆ ನಿಮ್ಮ ತಪ್ಪು ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ. ರಾಂಗ್ ಸೈಡ್ ನಲ್ಲಿ ವಾಹನ ಚಾಲನೆ ವಾಹನ ಚಾಲಕರಿಗೆ ಮಾತ್ರವಲ್ಲ ಪಾದಚಾರಿಗಳಿಗೂ ಅಪಾಯವನ್ನು ತಂದೊಡ್ಡುತ್ತದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು (traffic police) ಈ ಬಗ್ಗೆ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಈ ತಪ್ಪಿಗೆ ಭಾರೀ ದಂಡವನ್ನು ತೆರಬೇಕಾಗುತ್ತದೆ. 

ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕ್ರಮ : 
ಹೊಸ ಮೋಟಾರು ವಾಹನ ಕಾಯ್ದೆ 2019 ರ ನಿಯಮಗಳ ಪ್ರಕಾರ, ಚಾಲಕ ರಾಂಗ್ ಸೈಡ್ (wrong side driving) ಮೂಲಕ ಪ್ರಯಾಣಿಸಿ ಸಿಕ್ಕಿಬಿದ್ದರೆ, 5000 ರೂಪಾಯಿಗಳ ದಂಡ ಪಾವತಿಸಬೇಕಾಗುತ್ತದೆ. ಸಮಯ ಉಳಿಸುವ ಭರದಲ್ಲಿ ವಾಹನ ಚಾಲಕರು ವನ್ ವೇಯಲ್ಲಿ ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸುವ ತಪ್ಪನ್ನು ಹೆಚ್ಚಾಗಿ ಮಾಡುತ್ತಾರೆ. ಇದರಿಂದಾಗಿ ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಂಚಾರಿ ಪೊಲೀಸರು (traffic police) ತಪ್ಪಿತಸ್ಥ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ವಾಹನ ಚಾಲಕರ  ನಿರ್ಲಕ್ಷ್ಯದ ವಿರುದ್ಧ ದೆಹಲಿ ಪೊಲೀಸರು (Delhi police) ಈಗಾಗಲೇ ಕಠಿಣ ಕ್ರಮವನ್ನು ಪ್ರಾರಂಭಿಸಿದ್ದಾರೆ. ಚಾಲಕರು ಯಾವ ಸ್ಥಳಗಳಲ್ಲಿ ಇಂಥಹ ಕೃತ್ಯವನ್ನು ಎಸಗುತ್ತಾರೆಯೋ ಅಂಥಹ ಸ್ಥಳಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ. 

ಇದನ್ನೂ ಓದಿ : ಈ ನಂಬರ್ ನಿಮ್ಮದಾದರೆ ಪೊಲೀಸರು ತಡೆಯುವುದಿಲ್ಲ ನಿಮ್ಮ ವಾಹನ, ಪಡೆಯುವುದು ಹೇಗೆ ತಿಳಿಯಿರಿ

ಯು ಟರ್ನ್ ತೆಗೆದುಕೊಂಡರೂ ಕ್ರಮ ತಪ್ಪಿದ್ದಲ್ಲ : 
ಅನೇಕ ಜನರು ನಿಯಮ ಬಾಹಿರಾವಗಿ ಯು ಟರ್ನ್ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸಂಚಾರಿ ಪೊಲೀಸರು ಆಗಾಗ ಆಗಾಗ ಅಭಿಯಾನಗಳನ್ನು ನಡೆಸಿ ಮಾಹಿತಿಗಳನ್ನು ನೀಡುತ್ತಲೇ ಇರುತ್ತಾರೆ. ಇದಲ್ಲದೆ, ರಸ್ತೆಯಲ್ಲಿರುವ ಸೂಚನಾ ಫಲಕಗಳ (traffic rules) ಮೂಲಕವೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಆದರೂ ವಾಹನ ಚಾಲಕರು ಮಾತ್ರ ತಪ್ಪು ಮಾಡುವುದನ್ನು ಮುಂದುವರೆಸುತ್ತಾರೆ. ಈ ಹಿನ್ನೆಲೆಯಲ್ಲಿ ಇದೀಗ ದೆಹಲಿ ಟ್ರಾಫಿಕ್ ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಬೀಳಲಿದೆ 5000 ರೂ.ಗಳ ದಂಡ : 
ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನು (traffic rules) ಪಾಲಿಸುವಂತೆ ಜನರಿಗೆ ನಿರಂತರವಾಗಿ ಅರಿವು ಮೂಡಿಸುತ್ತಲೆ ಬಂದಿದ್ದಾರೆ. ಇದೀಗ ಜನರು  ತಪ್ಪನ್ನು ಹೆಚ್ಚಾಗಿ ಮಾಡುವ ಸ್ಥಳಗಳನ್ನು ಸಂಚಾರಿ ಪೊಲೀಸರು ಗುರುತಿಸಿದ್ದಾರೆ. ಈ ರೀತಿ ಯಾರೂ ನಡೆದುಕೊಳ್ಳದಂತೆ ದೆಹಲಿ ಟ್ರಾಫಿಕ್ ಪೊಲೀಸರು ಟ್ವಿಟರ್‌ (twitter) ಮೂಲಕ ಜನತೆಯಲ್ಲಿ ಮನವಿ ಕೂಡಾ ಮಾಡಿಕೊಳ್ಳಲಾಗಿದೆ. ಇದರೊಂದಿಗೆ, ಹೊಸ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ರಾಂಗ್ ಸೈಡ್ ನಿಂದ ವಾಹನ ಚಲಾಯಿಸುವುದನ್ನು ಅಪಾಯಕಾರಿ ಚಾಲನೆಯ ವರ್ಗದಲ್ಲಿ ಇರಿಸಲು ಸಲಹೆ ನೀಡಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, 5000 ರೂ. ವರೆಗೆ ದಂಡವನ್ನು ವಿಧಿಸಬಹುದು. ಇದಲ್ಲದೆ, ಸಿಕ್ಕಿಬಿದ್ದ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಬಹುದು.

ಇದನ್ನೂ ಓದಿ : EPFO Alert: ಪಿಎಫ್ ಸಂಬಂಧಿತ ಈ ಮಹತ್ವದ ಕೆಲಸವನ್ನು ಡಿಸೆಂಬರ್ 31 ರೊಳಗೆ ಮಾಡಿ, ಇಲ್ಲದಿದ್ದರೆ 7 ಲಕ್ಷ ರೂ. ನಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News