`ರೈತರ ಪ್ರತಿಭಟನೆಯನ್ನು 5 ನಿಮಿಷದಲ್ಲಿ ಕೊನೆಗೊಳಿಸಬಹುದು`
ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ಕಾರ ಬಯಸಿದರೆ ನಿಮಿಷಗಳಲ್ಲಿ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಬುಧವಾರ ಹೇಳಿದ್ದಾರೆ.
ನವದೆಹಲಿ: ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಸರ್ಕಾರ ಬಯಸಿದರೆ ನಿಮಿಷಗಳಲ್ಲಿ ಒಂದು ತೀರ್ಮಾನಕ್ಕೆ ಬರಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಬುಧವಾರ ಹೇಳಿದ್ದಾರೆ.
Farmers Protest: ಸಿಂಗು ಗಡಿಯಲ್ಲಿಂದು ರೈತರ ಉಪವಾಸ ಸತ್ಯಾಗ್ರಹ
'ಸರ್ಕಾರ ಬಯಸಿದರೆ, ಅದು ಅರ್ಧ ಘಂಟೆಯಲ್ಲಿ ರೈತರೊಂದಿಗೆ ಕುಳಿತುಕೊಳ್ಳುವ ಮೂಲಕ ಸಮಸ್ಯೆಯನ್ನು ಕೊನೆಗೊಳಿಸಬಹುದು" ಎಂದು ರೌತ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹಸ್ತಕ್ಷೇಪದ ಮೂಲಕ ಐದು ನಿಮಿಷಗಳಲ್ಲಿ ಸಮಸ್ಯೆಯನ್ನು ಪರಿಹರಿಸಲು ರೌತ್ ಸಲಹೆ ನೀಡಿದರು.
Farmers Protest: ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು
'ಪ್ರಧಾನಿ ಸ್ವತಃ ಮಧ್ಯಪ್ರವೇಶಿಸಿದರೆ, ಅದನ್ನು ಐದು ನಿಮಿಷಗಳಲ್ಲಿ ಪರಿಹರಿಸಲಾಗುವುದು. ಮೋದಿ ಜಿ ಅಂತಹ ದೊಡ್ಡ ನಾಯಕ, ಎಲ್ಲರೂ ಅವರ ಮಾತನ್ನು ಕೇಳುತ್ತಾರೆ. ನೀವು ಮಾತಕತೆಯನ್ನು ಪ್ರಾರಂಭಿಸಿ ಮತ್ತು ಮುಂದೆ ಸಂಭವಿಸುವ ಪವಾಡವನ್ನು ನೋಡಿ' ಎಂದು ಶಿವಸೇನೆ ಮುಖಂಡ ರೌತ್ ಹೇಳಿದರು.ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಂಜಾಬ್ ಮತ್ತು ಹರಿಯಾಣ ಮೂಲದ ಸಾವಿರಾರು ರೈತರು ದೆಹಲಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನೂತನ ಕಾನೂನುಗಳು ತಮ್ಮ ಗಳಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಗಮಗಳಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಎಂದು ರೈತರು ಆರೋಪಿಸಿದ್ದಾರೆ.
ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ
ಪ್ರತಿಭಟನೆಯು ಈಗ ಮೂರನೇ ವಾರವನ್ನು ಪ್ರವೇಶಿಸಿದೆ, ಆದರೆ ರೈತ ಸಂಘಗಳು ಮತ್ತು ಸರ್ಕಾರದ ನಡುವಿನ ಮಾತುಕತೆ ಇನ್ನೂ ಕೂಡ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದೆ.ಮಾತುಕತೆ ಮೂಲಕ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಸರ್ಕಾರ ಹೇಳುತ್ತಿದ್ದರೆ, ರೈತರು ವಿವಾದಿತ ಮೂರು ಕಾನೂನುಗಳನ್ನು ರದ್ದುಪಡಿಸಬೇಕೆನ್ನುವ ಬೇಡಿಕೆಯನ್ನು ಇಟ್ಟಿವೆ.