ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (PSB) 19,964 ಕೋಟಿ ರೂ.ಗಳನ್ನು ಒಳಗೊಂಡ 2,867 ವಂಚನೆ ಪ್ರಕರಣಗಳು ವರದಿಯಾಗಿವೆ. ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕೋರಿರುವ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದೆ. ಆರ್‌ಟಿಐ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಈ ಮಾಹಿತಿಯನ್ನು ರಿಸರ್ವ್ ಬ್ಯಾಂಕಿನಿಂದ ಕೋರಿದ್ದರು. ಅಂಕಿ-ಅಂಶಗಳ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಅತಿ ಹೆಚ್ಚು ವಂಚನೆ ಪ್ರಕರಣಗಳು ನಡೆದಿವೆ. ಇದೇ ವೇಳೆ  ಮೌಲ್ಯದ ವಿಚಾರದಲ್ಲಿ ಬ್ಯಾಂಕ್ ಆಫ್ ಇಂಡಿಯಾ (BOI) ಅತಿ ಹೆಚ್ಚು ಪ್ರಭಾವಿತಕ್ಕೆ ಒಳಗಾದ ಬ್ಯಾಂಕ್ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- FDಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಿದ SBI


ಅಂಕಿಅಂಶಗಳ ಪ್ರಕಾರ, 2020 ರ ಏಪ್ರಿಲ್-ಜೂನ್ ತಿಂಗಳಲ್ಲಿ 12 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಎಸ್‌ಬಿಐ ಅತಿ ಹೆಚ್ಚು 2,050 ವಂಚನೆ ಪ್ರಕರಣಗಳನ್ನು ಹೊಂದಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಮೊತ್ತ 2,325.88 ಕೋಟಿ ರೂ. ಮೌಲ್ಯದ ವಿಚಾರದಲ್ಲಿ ವಂಚನೆಯಿಂದ ಬ್ಯಾಂಕ್ ಆಫ್ ಇಂಡಿಯಾ ಮೇಲೆ ಹೆಚ್ಚು ಪ್ರಭಾವ ಉಂಟಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5,124.87 ಕೋಟಿ ರೂ.ಗಳ ವಂಚನೆ ನಡೆದಿದೆ.


ಇದನ್ನೂ ಓದಿ- ಇನ್ಮುಂದೆ Debit Card ಅಲ್ಲ, Watch ಬಳಸಿ ಈ ಕೆಲಸ ಮಾಡಿ, SBI ಆರಂಭಿಸಿದೆ ಈ ಅದ್ಭುತ ಸೇವೆ


ಬ್ಯಾಂಕ್ ಆಫ್ ಬಡೋದಾನಲ್ಲಿ 60 ಪ್ರಕರಣಗಳು
ಇದಲ್ಲದೆ, ಕೆನರಾ ಬ್ಯಾಂಕಿನಲ್ಲಿ 3,885.26 ಕೋಟಿ ರೂ.ಗಳ ವಂಚನೆಯ 33, ಬ್ಯಾಂಕ್ ಆಫ್ ಬರೋಡಾದಲ್ಲಿ 2,842.94 ಕೋಟಿ ರೂ. ವಂಚನೆಯ 60, ಇಂಡಿಯನ್ ಬ್ಯಾಂಕಿನಲ್ಲಿ 1,469.79 ಕೋಟಿ ರೂ.ಗಳ 45 ವಂಚನೆ ಪ್ರಕರಣಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 1, 207.65 ಕೋಟಿ ರೂ.ಗಳ 37 ಪ್ರಕರಣಗಳು ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 1,140.37 ಕೋಟಿ ರೂ. ಗಳ ಒಟ್ಟು 9 ಪ್ರಕರಣಗಳು ಬಂದಿವೆ.


ಇದನ್ನೂ ಓದಿ-SBI Jobs: ನೌಕರಿ ಹೆಸರಿನಲ್ಲಿ ವಂಚನೆ, ಈ ಎಚ್ಚರಿಕೆಯನ್ನು ತಪ್ಪದೆ ಓದಿ


PNB ನಲ್ಲಿ 270.65 ಕೋಟಿ ರೂ.ಗಳ ಫ್ರಾಡ್
ಇದೇ ಅವಧಿಯಲ್ಲಿ ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಕೇವಲ 270.65 ಕೋಟಿ ರೂಗಳ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ. ಬ್ಯಾಂಕ್ ಗಳ ಜೊತೆ ವಂಚನೆಯ ಪ್ರಕರಣ ಗಳ ಸಂಖ್ಯೆ 240 ರಷ್ಟಿದೆ. ಇತರೆ ಬ್ಯಾಂಕ್ ಗಳ ಕುರಿತು ಹೇಳುವುದಾದರೆ, ಯುಕೋ ಬ್ಯಾಂಕ್ ನಲ್ಲಿ 831.35 ಕೋಟಿ ರೂ.ಗಳ 130 ಪ್ರಕರಣಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 655.84 ಕೋಟಿ ರೂ.ಗಳ 149 ಪ್ರಕರಣಗಳು, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ನಲ್ಲಿ 163.3 ಕೋಟಿ ರೂ.ಗಳ 18 ಹಾಗೂ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 46.52 ರೂ.ಗಳ ಒಟ್ಟು 49 ಪ್ರಕರಣಗಳು ಪತ್ತೆಯಾಗಿವೆ.


ಇದನ್ನೂ ಓದಿ- ATM Fraud ತಡೆಗಟ್ಟಲು ನೂತನ ವೈಶಿಷ್ಟ್ಯ ಜಾರಿಗೊಳಿಸಿದ SBI


ಆದರೆ ಇವುಗಳು ಬ್ಯಾಂಕ್ ಗಳು ನೀಡಿರುವ ಆರಂಭಿಕ ಅಥವಾ ಪ್ರಾಥಮಿಕ ಅಂಕಿ-ಅಂಶಗಳಾಗಿವೆ ಎಂದು ತನ್ನ ಹೇಳಿಕೆಯಲ್ಲಿ ಹೇಳಿದೆ. ಇದರಲ್ಲಿ ಬದಲಾವಣೆ ಅಥವಾ ಸುಧಾರಣೆಯಾಗುವ ಸಾಧ್ಯತೆ ಕೂಡ ಇದೆ. ವಂಚನೆಗೆ ಸಂಬಂಧಿಸಿದ ರಾಶಿಯ ಅರ್ಥ ಬ್ಯಾಂಕ್ ಗೆ ಇಷ್ಟೊಂದು ದೊಡ್ಡ ಮೊತ್ತದ ಹಾನಿಯಾಗಿದೆ ಎಂಬುದಲ್ಲ ಎಂದು RBI ಸ್ಪಷ್ಟಪಡಿಸಿದೆ.