ಪುದುಚೇರಿ : ದಕ್ಷಿಣ ಭಾರತದ (South India) ಕಾಂಗ್ರೆಸಿನ ಕಟ್ಟಕಡೆಯ ಕೋಟೆ ಅಲುಗಾಡುತ್ತಿದೆ. ಹೌದು, ಪುದುಚೇರಿಯ ಕಾಂಗ್ರೆಸ್ (Congress) ಸರ್ಕಾರ ಬಹುತೇಕ ಪತನದ ಅಂಚಿನಲ್ಲಿದೆ.  ಸಿಎಂ ನಾರಾಯಣಸ್ವಾಮಿ (Narayanaswamy) ನೇತೃತ್ವದ ಸರ್ಕಾರ ಉಳಿಯುತ್ತಾ ಉರುಳುತ್ತಾ..? ಅನ್ನೋದು ಸ್ವಲ್ಪ ಸಮಯದಲ್ಲಿ ಗೊತ್ತಾಗಲಿದೆ.  ಇವತ್ತು ಸರ್ಕಾರಕ್ಕೆ ಅಗ್ನಿಪರೀಕ್ಷೆ. 


COMMERCIAL BREAK
SCROLL TO CONTINUE READING

ನಂಬರ್ ಲೆಕ್ಕಾಚಾರ  ಏನು ಹೇಳುತ್ತೆ..?
ಪುದುಚೇರಿ ವಿಧಾನಸಭೆಯ  ಒಟ್ಟು ಶಾಸಕರ (Total MLA’s) ಸಂಖ್ಯೆ 33.   ಇದರಲ್ಲಿ ಚುನಾವಣೆಯಿಂದ  (election) ಗೆದ್ದು ಬಂದ ಶಾಸಕರ ಸಂಖ್ಯೆ 30. ನಾಮಿನೇಟೆಡ್ (Nominated) ಶಾಸಕರ ಸಂಖ್ಯೆ 3. ಒಟ್ಟು 33 ಶಾಸಕರಿದ್ದಾರೆ. ಬಿಜೆಪಿಯ (BJP) ಮೂವರು ಶಾಸಕರು ನಾಮಿನೇಟೆಡ್ ಆದವರು. ಚುನಾವಣೆಯಲ್ಲಿ ಗೆದ್ದು ಬಂದವರಲ್ಲ. ನೆನಪಿರಲಿ, ನಾಮಿನೇಟೆಡ್ ಶಾಸಕರಿಗೂ ವಿಶ್ವಾಸಮತ ವೇಳೆ ಮತದಾನಕ್ಕೆ ಅವಕಾಶ  ಇದೆ. 


ಇದನ್ನೂ ಓದಿ : Puducherry Political Crisis: ಬಹುಮತ ಸಾಬೀತಿಗೂ ಮುನ್ನವೇ 2 ಶಾಸಕರ ರಾಜೀನಾಮೆ


ಇನ್ನು,  ಏಳು ಮಂದಿ ಶಾಸಕರು ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ 33 ಸಂಖ್ಯೆಯ ಸದನದ ಬಲ 26ಕ್ಕೆ ಕುಸಿದಿದೆ.   ವಿಶ್ವಾಸ ಮತ ಗೆಲ್ಲಬೇಕಾದರೆ ನಾರಾಯಣಸ್ವಾಮಿ (Narayanaswamy) ಬೆಂಬಲಕ್ಕೆ 14 (Magic Margin) ಶಾಸಕರು ನಿಲ್ಲಲೇ ಬೇಕು.  


ಆಡಳಿತ ಪಕ್ಷದ (Ruling Party) ಬಲ ಹೀಗಿದೆ : 
- ಕಾಂಗ್ರೆಸ್  : 09 
-ಡಿಎಂಕೆ     : 2 
-ಪಕ್ಷೇತರ    : 1
-ಒಟ್ಟು       : 12


ಪ್ರತಿಪಕ್ಷದ (Opposition Party) ಬಲ ಹೀಗಿದೆ:
-AINRC       : 07 
-AIADMK    : 04
-BJP           :   03 
-ಒಟ್ಟು         : 14. 


ಇದನ್ನೂ ಓದಿ :ತೈಲ ಇಂಧನಗಳ ಬೆಲೆ ಹೆಚ್ಚಳ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ


ಈ ನಂಬರ್ ಗೇಮ್ ನೋಡಿದರೆ  ಪುದುಚೇರಿಯಲ್ಲಿ (Puducherry) ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರದ ಗೇಮ್ ಕೊನೆಯಾಗುವ ಎಲ್ಲಾ ಸಾಧ್ಯತೆಗಳಿವೆ.  ಆಡಳಿತಾರೂಢ ಕಾಂಗ್ರೆಸ್ ತೆಕ್ಕೆಯಲ್ಲಿ 12 ಶಾಸಕರು ಮತ್ತು ಪ್ರತಿಪಕ್ಷದ ಬಳಿ 14 ಶಾಸಕರು ಲೆಕ್ಕಕ್ಕೆ ಸಿಗುತ್ತಿದ್ದಾರೆ. ಗಣಿತ ಹಾಕಿ ನೋಡಿದರೆ ಕಾಂಗ್ರೆಸ್ಸಿನ ದಕ್ಷಿಣದ ಕಟ್ಟಡ ಕಡೆಯ ಕೋಟೆ ಛಿದ್ರವಾಗುವ ಲಕ್ಷಣ ಕಂಡುಬರುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.