ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ.ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ? ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಅಧಿಕಾರ ನಡೆಸಿ ತೋರಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ @BSYBJP ಅವರು ಯಾವ ಅಭಿವೃದ್ಧಿ ಕಾರ್ಯಗಳಿಗೂ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತಾರೆ. ಸರ್ಕಾರ ನಡೆಸೋಕೆ ಆಗಲ್ಲ ಅಂದಮೇಲೆ ಮುಖ್ಯಮಂತ್ರಿಯಾಗಿ ಯಾಕಿದೀರ? ದುಡ್ಡಿಲ್ಲದಿದ್ದರೆ ಖುರ್ಚಿ ಬಿಟ್ಟು ಇಳಿಯಿರಿ. ನಾವು ಯಾರಾದರೂ ಅಧಿಕಾರ ನಡೆಸಿ ತೋರಿಸುತ್ತೇವೆ. 3/3#BJPFailsIndia
— Siddaramaiah (@siddaramaiah) February 21, 2021
ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, ಜನಸಾಮಾನ್ಯರು ಕಷ್ಟದಲ್ಲಿ ದಿನ ದೂಡುವಂತಾಗಿದೆ.ದೇಶದ ಈ ದುಸ್ಥಿತಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನರಿಗೆ ತಮ್ಮ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿಕೊಂಡಿದ್ದಾರೆ.
ಸುಳ್ಳಿಗೆ ಪರ್ಯಾದ ಪದವೆಂದರೆ ಅದು ನರೇಂದ್ರ ಮೋದಿ. ಅವರ ಚುನಾವಣಾ ಪೂರ್ವದ ಭಾಷಣ ಹಾಗೂ ಇಂದಿನ ಆಡಳಿತ ಒಂದಕ್ಕೊಂದು ತದ್ವಿರುದ್ಧವಾಗಿದೆ.ಮೋದಿ, ಮೋದಿ ಅಂತ ಘೋಷಣೆ ಕೂಗುತ್ತಾ, ಅಧಿಕಾರ ಕೊಟ್ಟ ಜನರೇ ಇಂದು ಮೋಸಹೋಗಿದ್ದಾರೆ. ಮೋದಿಯವರ ನಿಜ ಬಣ್ಣವನ್ನು ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.