Punjab Election 2022ರಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ 18+ ಮಹಿಳೆಯರಿಗೆ ತಿಂಗಳಿಗೆ ರೂ.1000 ನೀಡುವುದಾಗಿ ಘೋಷಿಸಿದ ಕೆಜ್ರಿವಾಲ್
Punjab Election 2022 - 2022ರ ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೊಡ್ಡ ಚುನಾವಣಾ ಘೋಷಣೆಯೊಂದನ್ನು ಮೊಳಗಿಸಿದ್ದಾರೆ. ಈ ಹೆಜ್ಜೆ ಮಹಿಳಾ ಸಬಲೀಕರಣದ ದೊಡ್ಡ ಅಭಿಯಾನಗಾಬಲಿದೆ ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ.
ಮೋಗಾ: Punjab Election 2022 - ಪಂಜಾಬ್‌ನ (Punjab) ಮೋಗಾದಲ್ಲಿನ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Aravind Kejriwal) ಅವರು ದೊಡ್ಡ ಚುನಾವಣಾ ಭರವಸೆಯೊಂದನ್ನು (Election Promise) ನೀಡಿದ್ದಾರೆ. ಪಂಜಾಬ್‌ನಲ್ಲಿ (Punjab Election) ಆಮ್ ಆದ್ಮಿ ಪಕ್ಷದ (AAP) ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪ್ರತಿ ಮಹಿಳೆಗೆ ತಿಂಗಳಿಗೆ 1000 ರೂಪಾಯಿ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ಹಣ ಅವರ ಮಾಸಿಕ ಪಿಂಚಣಿ ಹೊರತಾಗಿ ಇರಲಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ಮಹಿಳಾ ಸಬಲೀಕರಣ ಅಭಿಯಾನವಾಗಲಿದೆ ಎಂದಿದ್ದಾರೆ. ಒಂದು ಕುಟುಂಬದಲ್ಲಿ ಮೂವರು ಮಹಿಳೆಯರಿದ್ದರೆ ಮೂವರಿಗೂ ತಲಾ ಒಂದು ಸಾವಿರ ರೂ. ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಪಂಜಾಬ್ ಭವಿಷ್ಯ ಬದಲಾಗಲಿದೆ - ಸಿಎಂ ಕೇಜ್ರಿವಾಲ್
ಹಣ ಎಲ್ಲಿಂದ ಬರುತ್ತೆ ಎಂದು ತಮ್ಮ ವಿರೋಧಿಗಳು ಪ್ರಶ್ನೆ ಕೇಳುತ್ತಾರೆ. ಆದರೆ, ಪಂಜಾಬ್‌ನಿಂದ ಮಾಫಿಯಾವನ್ನು ತೊಡೆದುಹಾಕಲು ನಾನು ಬಯಸುತ್ತೇನೆ. ಹಣ ತಾನಾಗಿಯೇ ಹರಿದು ಬರಲಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ವಿಮಾನವನ್ನು ಖರೀದಿಸುತ್ತಾರೆ. ನಾನು ಖರೀದಿಸಲಿಲ್ಲ. ನನಗೆ ಟಿಕೆಟ್ ಉಚಿತವಾಗಿಸಿದೆ. ಕೇಜ್ರಿವಾಲ್ ಹೇಳಿದ್ದನ್ನು ಮಾಡುತ್ತಾರೆ. ಈ ಚುನಾವಣೆಯು ಪಂಜಾಬ್‌ನ ಭವಿಷ್ಯವನ್ನು ಬದಲಾಯಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-MP Pratap Simha: ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಅಪಘಾತ!
ಒಮ್ಮೆ ಅವಕಾಶ ಕೊಡಿ- ಸಿಎಂ ಕೇಜ್ರಿವಾಲ್
ಈ ಬಾರಿ ಪೋಷಕರಾಗಲಿ ಅಥವಾ ಪತಿ ಆಗಲಿ ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ ಯಾರಿಗೆ ಮತ ಹಾಕಬೇಕೆಂದು ಮಹಿಳೆಯರು ನಿರ್ಧರಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬಾರಿ ಕೇಜ್ರಿವಾಲ್‌ಗೆ ಅವಕಾಶ ನೀಡಿ ನೋಡಿ ಎಂದು ಮಹಿಳೆಯರೆಲ್ಲ ತಮ್ಮ ಮನೆಯಲ್ಲಿ ಎಲ್ಲರಿಗೂ ಹೇಳಬೇಕು ಎಂದು ಕೆಜ್ರಿವಾಲ್ ಹೇಳಿದ್ದಾರೆ.
Farm Laws: 'ಸಂಸತ್ತಿನ ಮೇಲೆ ಖಾಲಿಸ್ತಾನಿ ಧ್ವಜ ಹಾರಿಸಿ, $125,000 ಬಹುಮಾನ ನೀಡುತ್ತೇವೆ'
ಪಂಜಾಬ್‌ನಲ್ಲಿ ನಕಲಿ ಕೇಜ್ರಿವಾಲ್ ತಿರುಗಾಟ - ಸಿಎಂ ಕೇಜ್ರಿವಾಲ್
ಪಂಜಾಬ್ ನಲ್ಲಿ ನಕಲಿ ಕೇಜ್ರಿವಾಲ್ ತಿರುಗಾಗುತ್ತಿದ್ದಾನೆ ಎಂದು ಕೆಜ್ರಿವಾಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ತಾವು ನೀಡಿರುವ ಭರವಸೆಯನ್ನು ಎರಡು ದಿನಗಳ ನಂತರ ಆತನೂ ನೀಡುತ್ತಾನೆ. ಏಕೆಂದರೆ ಆತ ನಕಲಿಯಾಗಿದ್ದಾನೆ. ಉಚಿತ ವಿದ್ಯುತ್ ನೀಡುವ ಹೇಳಿಕೆ ನೀಡಿದ್ದೆ. ಇದೀಗ ಲುಧಿಯಾನದಲ್ಲಿ ಭಾಷಣ ಮಾಡಿದ ಆತ 400 ಯೂನಿಟ್ ವಿದ್ಯುತ್ ಉಚಿತ ಮಾಡಲಾಗಿದೆ ಎಂದಿದ್ದಾನೆ. ಯಾರಾದ್ರ ವಿದ್ಯುತ್ ಬಿಲ್ ಶೂನ್ಯವಾಗಿದ್ದರೆ ಹೇಳಿ. ಇಡೀ ದೇಶದಲ್ಲಿ ವಿದ್ಯುತ್ ಬಿಲ್ ಅನ್ನು ಶೂನ್ಯ ಮಾಡಲು ಕೇಜ್ರಿವಾಲ್ ನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಕಣ್ಣು ನೋವಿನ ನೆವ ಹೇಳಿದ್ದ ಸಿದ್ದರಾಮಯ್ಯ ಸೋನಿಯಾ ಎದುರು ಕೈಕಟ್ಟಿ ಕುಳಿತಿದ್ದರು: ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.