Punjab Exit Poll Update 2022: ಪಂಜಾಬ್ ನಲ್ಲಿ AAP ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ!
Punjab Exit Poll Update 2022: ಈ ಬಾರಿ ಪಂಜಾಬ್ ನಲ್ಲಿ ಅಧಿಕಾರ ಬದಲಾವಣೆ (Punjab Assembly Election 2022) ಆಗಲಿದೆ. ಎಕ್ಸಿಟ್ ಪೋಲ್ (Punjab Exit Poll 2022) ಪ್ರಕಾರ ಈ ಬಾರಿ ಆಮ್ ಆದ್ಮಿ ಪಕ್ಷ ಬಹುಮತ ಪಡೆಯಬಹುದು. ಆಡಳಿತಾರೂಢ ಕಾಂಗ್ರೆಸ್ ಮತ್ತು ಅಮರೀಂದರ್ ಸಿಂಗ್ ಜೊತೆ ಸ್ಪರ್ಧಿಸುತ್ತಿರುವ ಬಿಜೆಪಿ ಯಾವುದೇ ಗಮನಾರ್ಹ ಲಾಭ ಗಳಿಸುವ ನಿರೀಕ್ಷೆಯಿಲ್ಲ ಎನ್ನಲಾಗುತ್ತಿದೆ.
ನವದೆಹಲಿ: Punjab Exit Poll Result - ಈ ಬಾರಿಯ ಪಂಜಾಬ್ ಚುನಾವಣೆಗಳು (Five State Election 2022) ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ದೊಡ್ಡ ಸವಾಲಾಗಿತ್ತು. ಒಂದೆಡೆ, ಚುನಾವಣೆಗೆ ಮುನ್ನವೇ ಕಾಂಗ್ರೆಸ್ ತನ್ನ ಮುಖ್ಯಮಂತ್ರಿಯನ್ನು ಬದಲಾಯಿಸಿದರೆ, ಬಿಜೆಪಿ ಈ ಬಾರಿ ಹಳೆಯ ಮಿತ್ರಪಕ್ಷ ಅಕಾಲಿದಳವನ್ನು ತೊರೆದು ಅಮರಿಂದರ್ ಸಿಂಗ್ ಅವರೊಂದಿಗೆ ಸ್ಪರ್ಧಿಸಿದೆ. ಇದಲ್ಲದೇ ಆಮ್ ಆದ್ಮಿ ಪಕ್ಷ (Bhagwant Mann) ಕೂಡ ರಾಜ್ಯದಲ್ಲಿ ಉತ್ತಮ ಜನಸ್ಪಂದನವನ್ನು ಪಡೆದುಕೊಂಡಿದೆ.
ಇದನ್ನೂ ಓದಿ-ಪ್ರಿಯಕರನೊಂದಿಗೆ ತಮಿಳುನಾಡಿನ ಮಂತ್ರಿ ಮಗಳು ಎಸ್ಕೇಪ್; ಕರ್ನಾಟಕದಲ್ಲಿ ಮದುವೆ..!
ಪಂಜಾಬ್ ನಲ್ಲಿ ನಾಲ್ಕೂ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿ
ಈ ಬಾರಿ ಪಂಜಾಬ್ ನಲ್ಲಿ ದ್ವಿಮುಖ ಸ್ಪರ್ಧೆ ನಡೆಯುತ್ತಿಲ್ಲ. ಒಟ್ಟು ನಾಲ್ಕು ನಾಲ್ಕು ಮುಖಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್ ಮುಂದಿರುವ ದೊಡ್ಡ ಸವಾಲಾಗಿದೆ. ಇನ್ನೊಂದೆಡೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು AAP ಹೇಳಿಕೊಂಡಿದೆ. ಬಿಜೆಪಿ ಹಾಗೂ ಕ್ಯಾ.ಅಮರಿಂದರ್ ಸಿಂಗ್ ಯಾವುದೇ ದೊಡ್ಡ ಹಕ್ಕು ಮಂಡಿಸುತ್ತಿಲ್ಲವಾದರೂ ಕೂಡ ಅವರನ್ನು ಕಡೆಗಣಿಸುವಂತಿಲ್ಲ. ಇನ್ನೊಂದೆಡೆ ಬಿಜೆಪಿಯ ಸಾಥ್ ತೊರೆದಿರುವ ಶಿರೋಮಣಿ ಅಕಾಲಿದಳ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ಸರ್ಕಾರ ರಚಿಸುವ ಕುರಿತು ಮಾತನಾಡುತ್ತಿದೆ.
ಇದನ್ನೂ ಓದಿ-ಉಜ್ವಲ ಭವಿಷ್ಯಕ್ಕೆ ನ್ಯಾನೋ ತಂತ್ರಜ್ಞಾನ ನಿರ್ಣಾಯಕ: ಬೊಮ್ಮಾಯಿ
AAP ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ
ZEE NEWS DESIGN BOXED ಎಕ್ಸಿಟ್ ಪೋಲ್ ಪ್ರಕಾರ ಪಂಜಾಬ್ ನಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ 26-33 ಸ್ಥಾನಗಳು ಲಭಿಸುವ ಸಾಧ್ಯತೆ ವರ್ತಿಸಲಾಗಿದೆ. ಶಿರೋಮಣಿ ಅಕಾಲಿ ದಳ (SAD) ಮೈತ್ರಿಗೆ 24-32 ಸ್ಥಾನಗಳು, ಆಮ್ ಆದ್ಮಿ ಪಕ್ಷಕ್ಕೆ(AAP) 52-61 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿ (BJP) ಮೈತ್ರಿಗೆ ಕೇವಲ 3-7 ಸ್ಥಾನಗಳು ಲಭಿಸುವ ಸಾಧ್ಯತೆ ಇದ್ದರೆ, ಇತರ ಅಭ್ಯರ್ಥಿಗಳಿಗೆ 1-2 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ. ಅಂದರೆ, ಆಮ್ ಆದ್ಮಿ ಪಕ್ಷ (Arvind Kejriwal) ಈ ಬಾರಿ ಪಂಜಾಬ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಎಕ್ಸಿಟ್ ಪೋಲ್ ಸಾರಿದೆ.
ಇದನ್ನೂ ಓದಿ-Jaguar Kumara : ಜೀವ ಹೋದರೆ ಹೋಗಲಿ, ಉಕ್ರೇನ್ ಬಿಟ್ಟು ಬರೋಲ್ಲ ಎಂದ ಕುಮಾರ : ಅಸಲಿ ಕಾರಣ ಕೇಳಿದ್ರೆ ಸಲಾಂ ಹೇಳ್ತೀರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.