ಪ್ರಿಯಕರನೊಂದಿಗೆ ತಮಿಳುನಾಡಿನ ಮಂತ್ರಿ ಮಗಳು ಎಸ್ಕೇಪ್; ಕರ್ನಾಟಕದಲ್ಲಿ ಮದುವೆ..!

ಪ್ರಿಯಕರ ಸತೀಶ್ ಕುಮಾರ್ ಜೊತೆಗೆ ಎಸ್ಕೇಪ್ ಆಗಿದ್ದ ಶೇಖರ್ ಬಾಬು ಮಗಳು ಜಯಕಲ್ಯಾಣಿ ಕರ್ನಾಟಕದಲ್ಲಿ ಮದುವೆಯಾಗಿದ್ದು, ತಮಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

Written by - Zee Kannada News Desk | Last Updated : Mar 7, 2022, 06:25 PM IST
  • ತಮಿಳುನಾಡಿನಲ್ಲಿ ಪ್ರಿಯಕರನೊಂದಿಗೆ ಮಂತ್ರಿ ಮಗಳು ಎಸ್ಕೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ
  • ಪ್ರಿಯಕರ ಸತೀಶ್ ಕುಮಾರ್ ಜೊತೆಗೆ ಎಸ್ಕೇಪ್ ಆಗಿದ್ದ ಜಯಕಲ್ಯಾಣಿ ಕರ್ನಾಟಕದಲ್ಲಿ ಮದುವೆಯಾಗಿದ್ದಾರೆ
  • ತಮಗೆ ಜೀವಬೆದರಿಕೆ ಇದೆ ರಕ್ಷಣೆ ಕೋಡಿ ಅಂತಾ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿರುವ ಜೋಡಿ
ಪ್ರಿಯಕರನೊಂದಿಗೆ ತಮಿಳುನಾಡಿನ ಮಂತ್ರಿ ಮಗಳು ಎಸ್ಕೇಪ್; ಕರ್ನಾಟಕದಲ್ಲಿ ಮದುವೆ..! title=
ಪ್ರಿಯಕರನ ಜೊತೆ ತಮಿಳುನಾಡು ಮಂತ್ರಿ ಮಗಳ ಮದುವೆ

ಬೆಂಗಳೂರು: ತಮಿಳುನಾಡಿನಲ್ಲಿ ಪ್ರಿಯಕರನೊಂದಿಗೆ ಮಂತ್ರಿ ಮಗಳು(TamilNadu Minister Daughter) ಎಸ್ಕೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದ ತಮಿಳುನಾಡು ಮುಜರಾಯಿ ಇಲಾಖೆ ಸಚಿವ ಶೇಖರ್ ಬಾಬು ಪುತ್ರಿ ಕರ್ನಾಕಟಕಕ್ಕೆ ಬಂದು ಮದುವೆಯಾಗಿದ್ದಾರೆ.  

ಪ್ರಿಯಕರ ಸತೀಶ್ ಕುಮಾರ್ ಜೊತೆಗೆ ಎಸ್ಕೇಪ್ ಆಗಿದ್ದ ಶೇಖರ್ ಬಾಬು ಮಗಳು ಜಯಕಲ್ಯಾಣಿ(Jayakalyani) ಕರ್ನಾಟಕದಲ್ಲಿ ಮದುವೆಯಾಗಿದ್ದು, ತಮಗೆ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇರುವ ಈ ಜೋಡಿಗೆ ಜೀವಬೆದರಿಕೆ ಇದೆಯಂತೆ. ಹೀಗಾಗಿ ಕಮಿಷನರ್ ಕಚೇರಿಗೆ ತೆರಳಿದ ಜೋಡಿ ತಮಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಕೋರಿಕೊಂಡಿದೆ.

ಇದನ್ನೂ ಓದಿ: Cat bite: ಬೆಕ್ಕು ಕಚ್ಚಿ ಇಬ್ಬರು ಸಾವು!

ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಈ ಜೋಡಿಗೆ ಮದುವೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡು ಪೊಲೀಸರ(Tamil Nadu Police) ಮೇಲೆ ತಮಗೆ ನಂಬಿಕೆ ಇಲ್ಲವೆಂದು ಕರ್ನಾಟಕ ಪೊಲೀಸರ ಮೊರೆ ಹೋಗಿರುವುದಾಗಿ ಜೋಡಿ ತಿಳಿಸಿದೆ. ತಮಿಳುನಾಡಿಗೆ ಹೋದರೆ ನಮ್ಮನ್ನು ಕೊಲೆ ಮಾಡುತ್ತಾರೆಂದು ಯುವತಿ ಹೇಳಿಕೊಂಡಿದ್ದಾಳೆ.

ತಾನು ಯೂಟ್ಯೂಬ್ ನಲ್ಲಿ ಕನ್ನಡ ಸಂಘಟನೆ ಬಗ್ಗೆ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೆ. ಆಗ ಭರತ್ ಶೆಟ್ಟಿ, ಮಧುಗಿರಿ ಅವರ ಬಗ್ಗೆ ತಿಳಿದು ಅವರನ್ನು ಸಂಪರ್ಕಿಸಿ ಕರ್ನಾಟಕಕ್ಕೆ ಬಂದಿದ್ದೇವೆ. ನನ್ನ ತಂದೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin)ಅವರ ರೈಟ್ ಹ್ಯಾಂಡ್. ತುಂಬಾ ಪವರ್ ಫುಲ್ ಆಗಿರುವ ತನ್ನ ತಂದೆ ಶೇಖರ್ ಬಾಬು ಹೇಳಿದ ಹಾಗೆ ಪೊಲೀಸರು ಕೇಳುತ್ತಾರೆ. ಈಗಾಗಲೇ ಸತೀಶ್ ಕುಮಾರ್ ಮನೆಯವರನ್ನು ಅರೆಸ್ಟ್ ಮಾಡಿದ್ದಾರೆ ಅಂತಾ ಜಯಕಲ್ಯಾಣಿ ಹೇಳಿದ್ದಾರೆ.

ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ

ರಕ್ಷಣೆ ಕೋರಿದ ನಮಗೆ ಕಮಿಷನರ್ ಸಂಜೆ ಬರಲು ಹೇಳಿದ್ದಾರೆ. ನಾನು ಎಂಬಿಬಿಎಸ್(MBBS) ಮಾಡಿದ್ದಿನಿ, ಸತೀಶ್ ಟ್ರಾನ್ಸ್‌ಪೋರ್ಟ್‌ ಬ್ಯುಸಿನೆಸ್ ಮಾಡ್ತಿದ್ದಾನೆ. ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಿ ಎಂದು ಜಯಕಲ್ಯಾಣಿ ಬೇಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಚೆನ್ನೈನಲ್ಲಿ ಜಯಕಲ್ಯಾಣಿ ಕಿಡ್ನಾಪ್ ಪ್ರಕರಣ ದಾಖಲಿಸಲಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News