ಚಂಡಿಘಡ : ಎಲ್ಲೇ ಕಳ್ಳತನವಾದರೂ ಸಾರ್ವಜನಿಕರ ಮೊದಲು ಕರೆಯುವುದೇ ಪೊಲೀಸರನ್ನು. ಆದರೆ ಇಲ್ಲೊಬ್ಬ ಪೊಲೀಸ್ ಕಾನ್ಸ್ಟೇಬಲ್ ಪೋಲಿಸ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ. ಈ ಪೊಲೀಸ್ ಮೊಟ್ಟೆ ಕದ್ದು ಜೇಬಿಗೆ ಇಳಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹರಿದಾಡುತ್ತಿದೆ. ಇದಾದ ನಂತರ ಇವರಬ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಫತೇಘಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರೀತ್ ಪಾಲ್ ಸಿಂಗ್ : 
ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿರುವ ವಿಡಿಯೋದಲ್ಲಿ, ಪಂಜಾಬ್ ಪೊಲೀಸ್ ನ ಹೆಡ್ ಕಾನ್ಸ್ ಟೇಬಲ್ ಒಬ್ಬರು, ಮೊಟ್ಟೆಯ ಟ್ರೇಯಿಂದ ಒಂದೊಂದೇ ಮೊಟ್ಟೆಯನ್ನು ಜೇಬಿಗೆ ಇಳಿಸುತ್ತಿದ್ದರು. ಈ ಪೊಲೀಸಪ್ಪನನ್ನು ಪ್ರೀತ್ ಪಾಲ್ ಸಿಂಗ್ (Pritpal Singh) ಎಂದು ಗುರುತಿಸಲಾಗಿದೆ. ಪಂಜಾಬ್ ನ ಫತೇಘಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಇವರು ಈ ಮೊಟ್ಟೆ (Egg) ಕಳ್ಳತನದ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಪ್ರೀತ್ ಪಾಲ್ ಸಿಂಗ್ ನ ಈ ಕೃತ್ಯ ತಿಳಿಯುತ್ತಿದ್ದಂತೆಯೇ ಅವರನ್ನು ಸೇವೆಯಿಂದ ಅಮಾನತು (Suspend) ಮಾಡಲಾಗಿದೆ.  


Anti Covid-19 Drug 2DG Launched: Corona ವಿರುದ್ಧದ ಹೋರಾಟದಲ್ಲಿ ರೋಗಿಗಳಿಗೆ ಸಿಕ್ತು ಮತ್ತೊಂದು ಅಸ್ತ್ರ DRDO ಔಷಧಿ 2DG ಲಾಂಚ್


ಟ್ವೀಟ್ ಮಾಡಿದ Punjab Police :
ಪ್ರೀತ್ ಪಾಲ್ ಸಿಂಗ್ ಅನ್ನು ಅಮಾನತು ಮಾಡಿರುವ ಬಗ್ಗೆ ಪಂಜಾಬ್ ಪೊಲೀಸ್ ಟ್ವೀಟ್ (tweet) ಮಾಡಿ ಮಾಹಿತಿ ನೀಡಿದೆ.  ಮಾರ್ಗದ ಬದಿಯಲ್ಲಿ ನಿಲ್ಲಿಸಲಾಗಿರುವ ಗಾಡಿಯಿಂದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಪ್ರೀತ್ ಪಾಲ್ ಸಿಂಗ್ ಮೊಟ್ಟೆ ಕದಿಯುತ್ತಿದ್ದರು.  ಮೊಟ್ಟೆಯನ್ನು ಕದಿಯುತ್ತಿದ್ದ, ದೃಶ್ಯ ಕ್ಯಾಮರಾದಲ್ಲಿ (camera) ಸೆರೆಯಾಗಿದೆ. ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಪ್ರೀತ್ ಪಾಲ್ ಸಿಂಗ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ವಿಭಾಗೀಯ ತನಿಖೆಗೆ ಆದೇಶಿಸಲಾಗಿದೆ ಎಂದು ಪಂಜಾಬ್ ಪೊಲೀಸ್ (Punjab Police) ಟ್ವೀಟ್ ಮಾಡಿದೆ. 


ಟ್ವೀಟ್ ನಲ್ಲಿ ಮೊಟ್ಟೆ ಕದಿಯುತ್ತಿದ್ದ ವಿಡಿಯೋವನ್ನು ಕೂಡಾ ಹಾಕಲಾಗಿದೆ. ಈ ವಿಡಿಯೋದಲ್ಲಿ ಪೊಲೀಸ್ ಮೊಟ್ಟೆ ಕದಿಯುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ. 


ಇದನ್ನೂ ಓದಿ : ಜಿಯೋ ತಂದಿಗೆ ಎರಡು ಅಗ್ಗದ ರೀಚಾರ್ಜ್ ಪ್ಲಾನ್ ; ರೀಚಾರ್ಜ್ ಮಾಡಿದರೆ ಅದೇ ಮೊತ್ತದ ಮತ್ತೊಂದು ರೀಚಾರ್ಜ್ ಫ್ರೀ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.