ಬೆಂಗಳೂರು: ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ ಜಿ ಎಸ್ ಟಿಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ(HD Kumaraswamy), ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ನ್ನು ಜಿಎಸ್ ಟಿ(GST)ಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.
ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ GSTಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ.
1/6— H D Kumaraswamy (@hd_kumaraswamy) March 7, 2021
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ರಾಜ್ಯಗಳು ಜಿಎಸ್ ಟಿ ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈವರೆಗೆ ಸರಿಯಾಗಿ ಕೊಟ್ಟಿಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ(Petrol) ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ. ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ. ಅಥವಾ ಬಜೆಟ್ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Ananth Kumar Hegde: ರಾಜಕೀಯ ನಿವೃತ್ತಿ ಪಡೀತಾರ ಸಂಸದ 'ಅನಂತಕುಮಾರ ಹೆಗಡೆ'!?
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ(Tax) ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ?
5/6— H D Kumaraswamy (@hd_kumaraswamy) March 7, 2021
"ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ"
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ, ಜಿಎಸ್‌ಟಿ ಕುಣಿಕೆ ನಮ್ಮನ್ನು ಕಾಡಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
Lakshmi Hebbalkar: ಜಾರಕಿಹೊಳಿ ರಾಸಲೀಲೆ: ಮೊದಲ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.