ಚಂಡೀಗಢ : ಕಳೆದ ವರ್ಷ ಗಣರಾಜ್ಯೋತ್ಸವ ದಿನದಂದು (Republic Day)ದೆಹಲಿಯ ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ಪಂಜಾಬಿ ನಟ ದೀಪ್ ಸಿಧು (Deep Sidhu) ಮಂಗಳವಾರ (ಫೆಬ್ರವರಿ 15) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ದೀಪ್ ಸಿಧು ಅವರ ಕಾರು ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಹರಿಯಾಣದ ಟ್ರಕ್ ಚಾಲಕ :
ಬಂಧಿತ ಆರೋಪಿ ಟ್ರಕ್ ಚಾಲಕನನ್ನು  ಹರಿಯಾಣದ ನಹು ನಿವಾಸಿ ಖಾಸಿಂ ಎಂದು ಗುರುತಿಸಲಾಗಿದೆ. ಬಂಧಿತನನ್ನು ಇಂದು  (ಫೆಬ್ರವರಿ 18) ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ!


ಟ್ರಕ್‌ಗೆ ಎಸ್‌ಯುವಿ ಡಿಕ್ಕಿ :
ಹರಿಯಾಣದ ಸೋನಿಪತ್ ಜಿಲ್ಲೆಯ ಖರ್ಖೋಡಾ ಬಳಿ ಕುಂಡ್ಲಿ-ಮನೇಸರ್-ಪಲ್ವಾಲ್ ಹೆದ್ದಾರಿಯಲ್ಲಿ ದೀಪ್ ಸಿಧು (Deep Sidhu) ಅವರ ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ದೀಪ್ ಸಿಧು ಸಾವನ್ನಪ್ಪಿದ್ದರು.


ಅಪಘಾತದ ವೇಳೆ ದೀಪ್ ಜೊತೆಗಿದ್ದ ಭಾವಿ ಪತ್ನಿ : 
ಅಪಘಾತದ ವೇಳೆ ದೀಪ್ ಸಿಧು ಅವರ ಜೊತೆ ರೀನಾ ರೈ (Reena Rai) ಇದ್ದರು. ರೀನಾ ರೈ ಮತ್ತು ದೀಪ್ ಸಿಧು ನಿಶ್ಚಿತಾರ್ಥ ನೆರವೇರಿತ್ತು. ರೀನಾ ಕೂಡ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ದೀಪ್ ಸಿಧು (Deep Sidhu Accident)ಅವರೊಂದಿಗಿನ ಸಂಬಂಧದಿಂದಾಗಿ ರೀನಾ ರೈ ನಿರಂತರ ಸುದ್ದಿಯಲ್ಲಿದ್ದರು. 


ಇದನ್ನೂ ಓದಿ : 500 ಗ್ರಾಂ ಬೆಳ್ಳಿ ಉಂಗುರಕ್ಕಾಗಿ ಅಜ್ಜಿಯನ್ನು ಕೊಂದು ಕಾಲುಗಳನ್ನೇ ಕತ್ತರಿಸಿದ ಮೊಮ್ಮಗ..!


 ರೈತರ ಚಳವಳಿಯೊಂದಿಗೆ ಚರ್ಚೆಯಾಗಿದ್ದ ದೀಪ್ ಸಿದ್ದು : 
ಫೆಬ್ರವರಿ 9, 2021 ರಂದು ಮೂರು ಕೃಷಿ ಕಾನೂನುಗಳ (Agriculture law)ವಿರುದ್ಧ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ಪರೇಡ್‌ (tractor parade) ವೇಳೆ ಕೆಂಪು ಕೋಟೆ (Red Fort) ನಡೆದ  ಹಿಂಸಾಚಾರದ ಹಿನ್ನೆಲೆಯಲ್ಲಿ ದೀಪ್ ಸಿಧು ಅವರನ್ನು ಬಂಧಿಸಲಾಗಿತ್ತು. ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ಆರೋಪದ ನಂತರ ದೀಪ್ ಸಿಧು ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.