Rahul Gandhi On Central Govt: `GDP ಅಂದ್ರೆ Gas, Diesel, Petrol ಬೆಲೆ ಏರಿಕೆ`
Rahul Gandhi On Central Govt - ಮೋದಿ ಅವರ 4-5 ಕೈಗಾರಿಕೋದ್ಯಮಿ ಸ್ನೇಹಿತರು ಮಾತ್ರ ನೋಟು ರದ್ದತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದ ಜಿಡಿಪಿ ಹೆಚ್ಚುತ್ತಿದೆ ಎಂದು ಹೇಳಲಾಗಿದೆ ಆದರೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಿರುವುದು ವಾಸ್ತವ ಎಂದು ರಾಹುಲ್ ಹೇಳಿದ್ದಾರೆ.
ನವದೆಹಲಿ: Rahul Gandhi On Central Govt - ಹಣದುಬ್ಬರದ (Inflation)ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿರುವ ಕಾಂಗ್ರೆಸ್ ಮುಖಂಡ (Congress Leader) ರಾಹುಲ್ ಗಾಂಧಿ (Rahul Gandhi) ಬುಧವಾರ ಕೇಂದ್ರ ಸರ್ಕಾರದ (Modi Government)ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ದೇಶದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಇದು ನೇರವಾಗಿ ಸಾರ್ವಜನಿಕರಿಗೆ ನೋವುಂಟು ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೊದಲನೆಯದಾಗಿ, ವಾಹನದಲ್ಲಿ ನೇರವಾಗಿ ಇಂಧನ ತುಂಬುವುದು ಸಾರ್ವಜನಿಕರ ಮೇಲೆ ಹೊರೆಯಾಗುತ್ತದೆ, ಎರಡನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ವೆಚ್ಚದಿಂದಾಗಿ, ಸಾರಿಗೆ ದುಬಾರಿಯಾಗುತ್ತದೆ, ಇದರಿಂದಾಗಿ ಇತರ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ.
'GDP ಅಲ್ಲ ತೈಲ ಬೆಳೆಗಳು ಏರಿಕೆಯಾಗಿವೆ'
ಮೋದಿ ಅವರ 4-5 ಕೈಗಾರಿಕೋದ್ಯಮಿ ಸ್ನೇಹಿತರು ಮಾತ್ರ ನೋಟು ರದ್ದತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ದೇಶದ ಜಿಡಿಪಿ (GDP) ಹೆಚ್ಚುತ್ತಿದೆ ಎಂದು ಹೇಳಲಾಗಿದೆ ಆದರೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಿರುವುದು ವಾಸ್ತವ ಎಂದು ರಾಹುಲ್ ಹೇಳಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿರಂತರವಾಗಿ ಇಳಿಕೆಯಾಗುತ್ತಿವೆ. ಇದರ ಹೊರತಾಗಿಯೂ, ನಮ್ಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚುತ್ತಿವೆ. ಇಂದು ಭಾರತದ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಆದರೆ ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಇದನ್ನೂ ಓದಿ-SBI ನೀಡುತ್ತಿದೆ ವಿಶೇಷ ಸೌಲಭ್ಯ , ಗ್ರಾಹಕರ ಮನೆ ಬಾಗಿಲಿಗೆ ತಲುಪಲಿದೆ 20, 000 ರೂಪಾಯಿ
ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡಲಾಗುತ್ತಿಲ್ಲ. ಇದರಿಂದಾಗಿ ಜನರಲ್ಲಿ ಕೋಪ ಹೆಚ್ಚುತ್ತಿದೆ. ರೈತರಿಂದ ಹಿಡಿದು ಕಾರ್ಮಿಕರು, ಸಣ್ಣ ಉದ್ಯಮಿಗಳು, ಸಂಬಳದ ವರ್ಗ, ಸರ್ಕಾರಿ ನೌಕರರು ಮತ್ತು ಪ್ರಾಮಾಣಿಕ ಕೈಗಾರಿಕೋದ್ಯಮಿಗಳವರೆಗೆ ಮಾತ್ರ ನೋಟು ರದ್ದತಿ ಸಂಭವಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಮೋದಿಜಿ ಅವರ 4-5 ಸ್ನೇಹಿತರಿಗೆ ನೋಟು ಗಳಿಕೆ ಸಂಭವಿಸಿದೆ ಮತ್ತು ಸತತವಾಗಿ ಆರ್ಥಿಕ ವರ್ಗಾವಣೆ ನಡೆದಿದೆ ಎಂದು ರಾಹುಲ್ ಆಪಾದಿಸಿದ್ದಾರೆ.
ಇದನ್ನೂ ಓದಿ- ಮೊಬೈಲ್ ಬಳಕೆದಾರರಿಗೆ ಈ ತಿಂಗಳಿನಿಂದ ಬದಲಾಗಲಿದೆ ನಿಯಮ , ನಿಮ್ಮ ಜೇಬಿನ ಮೇಲೆ ಯಾವ ಪರಿಣಾಮ ಬೀರಲಿದೆ ತಿಳಿಯಿರಿ
23 ಲಕ್ಷ ಕೋಟಿ ರೂ. ಎಲ್ಲಿಗೆ ಹೋಯ್ತು ಎಂಬುದನ್ನು ಸರ್ಕಾರ ಹೇಳಬೇಕು
2014 ರಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರ ಗಳಿಸಿರುವ 23 ಲಕ್ಷ ಕೋಟಿ ರೂಪಾಯಿಗಳು ಎಲ್ಲಿಗೆ ಹೋದವು ಎಂಬುದನ್ನು ಸರ್ಕಾರವೇ ಹೇಳಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 2014 ರಲ್ಲಿ ಯುಪಿಎ ಅಧಿಕಾರದಿಂದ ಕೆಳಗಿಳಿದಾಗ, ಎಲ್ ಪಿಜಿ ಸಿಲಿಂಡರ್ ಬೆಲೆ ರೂ 410 ಇತ್ತು ಮತ್ತು ಇಂದು ಅದರ ಬೆಲೆ ರೂ. 885ಕ್ಕೆ ತಲುಪಿದೆ. ಅಂದರೆ, LPG ಬೆಲೆಯಲ್ಲಿ ಶೇ.116 ರಷ್ಟು ಹೆಚ್ಚಳವಾಗಿದೆ. ಅಲ್ಲದೆ 2014 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71 ರೂ.ಗೆ ಸಿಗುತ್ತಿತ್ತು ಇಂದು ಪ್ರತಿ ಲೀಟರ್‌ಗೆ 101 ರೂ. ತಲುಪಿದೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ- ದಿನಕ್ಕೆ ಎರಡೇ ರೂಪಾಯಿ ಹೂಡಿಕೆ, ಪ್ರತಿ ತಿಂಗಳು ಕಾರ್ಮಿಕರಿಗೆ ಸಿಗಲಿದೆ 3,000 ರೂ. ನೋಂದಾಯಿಸಿಕೊಳ್ಳುವುದು ಹೇಗೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ