ದಿನಕ್ಕೆ ಎರಡೇ ರೂಪಾಯಿ ಹೂಡಿಕೆ, ಪ್ರತಿ ತಿಂಗಳು ಕಾರ್ಮಿಕರಿಗೆ ಸಿಗಲಿದೆ 3,000 ರೂ. ನೋಂದಾಯಿಸಿಕೊಳ್ಳುವುದು ಹೇಗೆ ತಿಳಿಯಿರಿ

ಈ ಯೋಜನೆಯಲ್ಲಿ 18 ನೇ ವಯಸ್ಸಿನವರು ದಿನಕ್ಕೆ ಕೇವಲ 2 ರೂ.ಗಳನ್ನು ಉಳಿತಾಯ ಮಾಡಿದರೆ ಸಾಕು, ವಾರ್ಷಿಕ 36000 ರೂ. ಪಿಂಚಣಿ ಪಡೆಯಬಹುದು.

Written by - Ranjitha R K | Last Updated : Sep 1, 2021, 04:34 PM IST
  • ಈಗ ಕಾರ್ಮಿಕರಿಗೂ ಸಿಗಲಿದೆ ಪಿಂಚಣಿ
  • ಈ ಸರ್ಕಾರಿ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ 36000 ಠೇವಣಿ ಮಾಡಬಹುದು
  • ಟೋಲ್ ಫ್ರೀ ಸಂಖ್ಯೆಯಿಂದ ಮಾಹಿತಿ ಪಡೆಯಿರಿ
ದಿನಕ್ಕೆ ಎರಡೇ ರೂಪಾಯಿ ಹೂಡಿಕೆ,  ಪ್ರತಿ ತಿಂಗಳು ಕಾರ್ಮಿಕರಿಗೆ ಸಿಗಲಿದೆ 3,000 ರೂ.  ನೋಂದಾಯಿಸಿಕೊಳ್ಳುವುದು ಹೇಗೆ ತಿಳಿಯಿರಿ

ನವದೆಹಲಿ : ಕಾರ್ಮಿಕರ ವೃದ್ಧಾಪ್ಯ ಜೀವನ ನೆಮ್ಮದಿಯಿಂದ ಕಳೆಯುವಂತಾಗಲು ಸರ್ಕಾರವು ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಈಗ ಕಾರ್ಮಿಕರು ವೃದ್ಧಾಪ್ಯ ವೆಚ್ಚಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ್  (PM Shram Yogi Mandhan Yojana) ಯೋಜನೆ ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದೆ. ಇದರ ಅಡಿಯಲ್ಲಿ, ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಇತರ ಅನೇಕ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಪ್ರತಿ ತಿಂಗಳು ಪಿಂಚಣಿ ಪಡೆಯಲಿದ್ದಾರೆ.  ಈ ಯೋಜನೆಯಡಿ ಸರ್ಕಾರವು ಪಿಂಚಣಿಯ ಗ್ಯಾರಂಟಿ ನೀಡುತ್ತದೆ. ಈ ಯೋಜನೆಯಲ್ಲಿ, ದಿನಕ್ಕೆ ಕೇವಲ 2 ರೂಪಾಯಿ ಉಳಿತಾಯ ಮಾಡುವ ಮೂಲಕ ವಾರ್ಷಿಕ 36,000 ರೂಪಾಯಿ ಪಿಂಚಣಿ ಪಡೆಯಬಹುದು. 

ದಿನಕ್ಕೆ ಕೇವಲ 2 ರೂಪಾಯಿ ಹೂಡಿಕೆ : 
ಈ ಯೋಜನೆಯಲ್ಲಿ 18 ನೇ ವಯಸ್ಸಿನವರು ದಿನಕ್ಕೆ ಕೇವಲ 2 ರೂ.ಗಳನ್ನು ಉಳಿತಾಯ ಮಾಡಿದರೆ ಸಾಕು, ವಾರ್ಷಿಕ 36000 ರೂ. ಪಿಂಚಣಿ (Pension) ಪಡೆಯಬಹುದು. ಒಬ್ಬ ವ್ಯಕ್ತಿಯು ಈ ಯೋಜನೆಯನ್ನು 40 ವರ್ಷದಿಂದ ಆರಂಭಿಸಿದರೆ, ಆಗ ಪ್ರತಿ ತಿಂಗಳು 200 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ 60 ವರ್ಷದ ನಂತರ ಪಿಂಚಣಿ ಪಡೆಯಬಹುದು. 60 ವರ್ಷಗಳ ನಂತರ, ಪ್ರತಿ ತಿಂಗಳು, 3000 ರೂಪಾಯಿ ಪಿಂಚಣಿ ಸಿಗಲಿದೆ. ಅಂದರೆ ವರ್ಷಕ್ಕೆ 36,000 ರೂ.

ಇದನ್ನೂ ಓದಿ : PAN Card Making Process: ಈ ಪ್ರಕ್ರಿಯೆ ಅನುಸರಿಸಿ ಹತ್ತೇ ನಿಮಿಷಗಳಲ್ಲಿ ಮಾಡಿಸಬಹುದು ಪಾನ್ ಕಾರ್ಡ್

ಅಗತ್ಯ ದಾಖಲೆಗಳು :
ಈ ಯೋಜನೆಯ ಲಾಭ ಪಡೆಯಲು, ನೀವು ಉಳಿತಾಯ ಬ್ಯಾಂಕ್ ಖಾತೆ (bank account) ಮತ್ತು ಆಧಾರ್ ಕಾರ್ಡ್ (Aadhaar card) ಹೊಂದಿರಬೇಕು. ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು 40 ವರ್ಷಗಳಿಗಿಂತ ಹೆಚ್ಚಿರಬಾರದು.

ನೋಂದಣಿ ಮಾಡುವುದು ಹೇಗೆ ? : 
ಇದಕ್ಕಾಗಿ, ನೀವು ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಯೋಜನೆಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಕಾರ್ಮಿಕರು ಸಿಎಸ್‌ಸಿ ಕೇಂದ್ರದಲ್ಲಿರುವ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರವು ಈ ಯೋಜನೆಗಾಗಿ ವೆಬ್ ಪೋರ್ಟಲ್ (web portal) ಅನ್ನು ರಚಿಸಿದೆ. ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿರುವ ಎಲ್ಲಾ ಮಾಹಿತಿಯು ಭಾರತ ಸರ್ಕಾರಕ್ಕೆ ಲಭ್ಯವಾಗುತ್ತದೆ. 

ಈ ಮಾಹಿತಿಯನ್ನು ನೀಡಬೇಕು :
ನೋಂದಣಿಗಾಗಿ, ನಿಮ್ಮ ಆಧಾರ್ ಕಾರ್ಡ್, ಉಳಿತಾಯ ಅಥವಾ ಜನ್ ಧನ್ ಬ್ಯಾಂಕ್ ಖಾತೆಯ (Jan dhan account) ಪಾಸ್‌ಬುಕ್, ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಇದರ ಹೊರತಾಗಿ, ಬ್ಯಾಂಕ್ ಶಾಖೆಯಲ್ಲಿ ಒಪ್ಪಿಗೆ ಪತ್ರವನ್ನು ನೀಡಬೇಕಾಗುತ್ತದೆ. ತಮ್ಮ ಖಾತೆಯಿಂದ  ಪಿಂಚಣಿಗಾಗಿ ಸಕಾಲದಲ್ಲಿ ಹಣವನ್ನು ಕಡಿತಗೊಳಿಸಬಹುದು ಎಂಬ ಒಪ್ಪಿಗೆ ಪತ್ರ ಇದಾಗಿರುತ್ತದೆ. 

ಇದನ್ನೂ ಓದಿ : NPS Rules Change : ಬದಲಾದ NPS ನಿಯಮಗಳು : ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಯೋಜನೆಯ ಲಾಭ ಯಾರಿಗೆ ? 
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ ಧನ್ ಪಿಂಚಣಿ ಯೋಜನೆಯಡಿಯಲ್ಲಿ (PM Shram Yogi Mandhan Yojana), 40 ವರ್ಷಕ್ಕಿಂತ ಕಡಿಮೆ ಇರುವ ಯಾವುದೇ ಅಸಂಘಟಿತ ವಲಯದ ಕೆಲಸಗಾರರು, ಈ ಯೋಜನೆಯ ಲಾಭ ಪಡೆಯಬಹುದು. ಆದರೆ, ಅವರು ಇತರ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯುವಂತಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯವು 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಇರಬೇಕು. 

ಟೋಲ್ ಫ್ರೀ ಸಂಖ್ಯೆಯಿಂದ ಮಾಹಿತಿ ಪಡೆಯಬಹುದು : 
ಈ ಯೋಜನೆಗಾಗಿ, ಕಾರ್ಮಿಕ ಇಲಾಖೆ, ಎಲ್‌ಐಸಿ (LIC), ಇಪಿಎಫ್‌ಒಗಳ ಕಚೇರಿಯನ್ನು ಸರ್ಕಾರವು ಶ್ರಮಿಕ್ ಫೆಸಿಲಿಟೇಶನ್ ಕೇಂದ್ರವನ್ನಾಗಿ ಮಾಡಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ, ಕಾರ್ಮಿಕರು ಯೋಜನೆಯ ಮಾಹಿತಿ ಪಡೆಯಬಹುದು. ಈ ಯೋಜನೆಗಾಗಿ ಸರ್ಕಾರ 18002676888 ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News