SBI ನೀಡುತ್ತಿದೆ ವಿಶೇಷ ಸೌಲಭ್ಯ , ಗ್ರಾಹಕರ ಮನೆ ಬಾಗಿಲಿಗೆ ತಲುಪಲಿದೆ 20, 000 ರೂಪಾಯಿ

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಆರಂಭಿಸುತ್ತಿದೆ. 

Written by - Ranjitha R K | Last Updated : Sep 1, 2021, 06:39 PM IST
  • 44 ಕೋಟಿ ಗ್ರಾಹಕರಿಗೆ SBI ಗಿಫ್ಟ್
  • ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ 20000 ರೂ. ನಗದು
  • ಇನ್ನೂ ಹಲವು ಸೌಲಭ್ಯಗಳನ್ನು ಮನೆ ಬಾಗಿಳಿಗೆ ತಲುಪಿಸಲಿದೆ
SBI ನೀಡುತ್ತಿದೆ ವಿಶೇಷ ಸೌಲಭ್ಯ , ಗ್ರಾಹಕರ ಮನೆ ಬಾಗಿಲಿಗೆ ತಲುಪಲಿದೆ  20, 000 ರೂಪಾಯಿ   title=
sbi doorstep banking registration (file photo)

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗ್ರಾಹಕರಿಗೆ ಸಂತಸದ ಸುದ್ದಿ.  ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ಆರಂಭಿಸುತ್ತಿದೆ. ಇದರ ಅಂಗವಾಗಿ, ಬ್ಯಾಂಕ್ ಗ್ರಾಹಕರಿಗೆ ಡೋರ್ ಸ್ಟೆಪ್ ಬ್ಯಾಂಕಿಂಗ್ (SBI Doorstep Banking Services) ಸೌಲಭ್ಯವನ್ನು ಆರಂಭಿಸಿದೆ. ಇದರ ಅಡಿಯಲ್ಲಿ, ನಗದು ಪಡೆಯುವುದು, ಹೊಸ ಚೆಕ್‌ಬುಕ್ ಗೆ  ಸಂಬಂಧಿಸಿದ ಅನೇಕ ಸೌಲಭ್ಯಗಳು ಸಿಗಲಿವೆ. 

ಟ್ವೀಟ್ ಮೂಲಕ ಮಾಹಿತಿ ನೀಡಿದ SBI :
ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ನಲ್ಲಿ SBI ಮಾಹಿತಿ ನೀಡಿದೆ. ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.  https://bank.sbi/dsb 
 ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. 

 

ಇದನ್ನೂ ಓದಿ : ದಿನಕ್ಕೆ ಎರಡೇ ರೂಪಾಯಿ ಹೂಡಿಕೆ, ಪ್ರತಿ ತಿಂಗಳು ಕಾರ್ಮಿಕರಿಗೆ ಸಿಗಲಿದೆ 3,000 ರೂ. ನೋಂದಾಯಿಸಿಕೊಳ್ಳುವುದು ಹೇಗೆ ತಿಳಿಯಿರಿ

ಡೋರ್‌ಸ್ಟೆಪ್ ಬ್ಯಾಂಕಿಂಗ್‌ನ ವೈಶಿಷ್ಟ್ಯಗಳು
1. ಡೋರ್‌ಸ್ಟೆಪ್ ಬ್ಯಾಂಕಿಂಗ್‌ಗಾಗಿ, (Doorstep Banking) ಹೋಂ ಬ್ರಾಂಚ್ ನಲ್ಲಿ ನೋಂದಾಯಿಸಿಕೊಳ್ಳಬೇಕು.
2. ಸಂಪರ್ಕ ಕೇಂದ್ರದಲ್ಲಿ ಸೌಲಭ್ಯ ಪೂರ್ಣಗೊಳ್ಳುವವರೆಗೆ ಹೋಮ್ ಬ್ರಾಂಚ್‌ನಲ್ಲಿ ಅದಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ .
3. ಹಣದ ಠೇವಣಿ ಮತ್ತು ಹಿಂಪಡೆಯುವಿಕೆ ಎರಡಕ್ಕೂ ಗರಿಷ್ಠ ಮಿತಿ ದಿನಕ್ಕೆ 20 ಸಾವಿರ ರೂಪಾಯಿಗಳು.
4. ಎಲ್ಲಾ ಹಣಕಾಸೇತರ ವಹಿವಾಟುಗಳಿಗೆ (Non-financial transactions) ಸೇವಾ ಶುಲ್ಕ ರೂ 60 + ಜಿಎಸ್‌ಟಿ ಮತ್ತು ಹಣಕಾಸು ವಹಿವಾಟುಗಳಿಗೆ (financial transactions) ರೂ 100 + ಜಿಎಸ್‌ಟಿ ಪಾವತಿಸಬೇಕಾಗುತ್ತದೆ . 
5. ಹಣವನ್ನು ಹಿಂಪಡೆಯಲು, ಚೆಕ್‌ನೊಂದಿಗೆ ವಿತ್‌ಡ್ರಾವಾಲ್ ಫಾರ್ಮ್ ಜೊತೆಗೆ, ಪಾಸ್‌ಬುಕ್ ಹೊಂದಿರುವುದು ಕೂಡ ಅಗತ್ಯ. 

ಯಾರಿಗೆ ಈ ಸೌಲಭ್ಯಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ : 
ಬ್ಯಾಂಕಿನ (bank) ಈ ವಿಶೇಷ ಸೌಲಭ್ಯವನ್ನು ಜಂಟಿ ಖಾತೆಗಳು, ಮೈನರ್ ಅಕೌಂಟ್, ನಾನ್ ಪರ್ಸನಲ್ ಅಕೌಂಟ್ ,  ಮತ್ತು ನೋಂದಾಯಿತ ವಿಳಾಸವು ಹೋಂ ಬ್ರಾಂಚ್ ನ  5 ಕಿಮೀ ವ್ಯಾಪ್ತಿಯಲ್ಲಿದ್ದರೆ, ಅಂಥಹ ಗ್ರಾಹಕರಿಗೆ ಈ ಸೌಲಭ್ಯದ ಲಾಭ ಸಿಗುವುದಿಲ್ಲ. 

ಇದನ್ನೂ ಓದಿ :  PAN Card Making Process: ಈ ಪ್ರಕ್ರಿಯೆ ಅನುಸರಿಸಿ ಹತ್ತೇ ನಿಮಿಷಗಳಲ್ಲಿ ಮಾಡಿಸಬಹುದು ಪಾನ್ ಕಾರ್ಡ್

ಡೋರ್‌ಸ್ಟೆಪ್ ಬ್ಯಾಂಕಿಂಗ್ ಸೇವೆಯನ್ನು ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ಕಾಲ್ ಸೆಂಟರ್ ಮೂಲಕ ನೋಂದಾಯಿಸಿಕೊಳ್ಳಬಹುದು. ಇದಲ್ಲದೇ, ವರ್ಕಿಂಗ್ ಡೇಸ್ ನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ರ ನಡುವೆ ಟೋಲ್ ಫ್ರೀ ಸಂಖ್ಯೆ 1800111103 ಗೆ ಕರೆ ಮಾಡಬಹುದು. ಎಸ್‌ಬಿಐ ಡೋರ್‌ಸ್ಟೆಪ್ ಬ್ಯಾಂಕಿಂಗ್ (SBI Doorstep Banking Services) ಸೇವೆಗಳ ಬಗ್ಗೆ ವಿವರವಾದ ಮಾಹಿತಿಗಾಗಿ, ಗ್ರಾಹಕರು  https://bank.sbi/dsb ಗೆ ಭೇಟಿ ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News