Lok Sabha Election: ಕರ್ನಾಟಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಕುರಿತಂತೆ  ಬುಧವಾರದಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಆದರೆ  ಲೋಕಸಭಾ ಕ್ಷೇತ್ರವಾದ ಕೇರಳದ ವಯನಾಡ್ ಗೆ  ಉಪಚುನಾವಣೆಯ      ದಿನಾಂಕವನ್ನು ಘೋಷಿಸಿಲ್ಲ . 


COMMERCIAL BREAK
SCROLL TO CONTINUE READING

ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ತೆರವಾಗಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಇಂದು ಉಪಚುನಾವಣೆ ಘೋಷಿಸದೆ ಇರುವುದು ಬಹುತೇಕರಿಗೆ ಅಚ್ಚರಿ ಮೂಡಿಸಿದೆ.ಈ ವಿಚಾರವಾಗಿ ಚುನಾವಣಾ ಆಯೋಗ ವಯನಾಡ್‌ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಆಯೋಗ ತಿಳಿಸಿದೆ. 


ಇದನ್ನೂ ಓದಿ: Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್‌ ವೈರಲ್‌  


ಮಾನಹಾನಿ ಪ್ರಕರಣದಲ್ಲಿ  ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರಿಂದ ರಾಹುಲ್ ಗಾಂಧಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು ನೀಡಿದ 30 ದಿನಗಳ ಕಾಲಾವಕಾಶ ನೀಡಿದೆ.ಈ ಪ್ರಕರಣ ಸಂಬಂಧ ಕಾನೂನಿನ ನಿಯಮದಲ್ಲಿ ಅಧಿಕಾರದಿಂದ  ಸ್ಥಾನ ತೆರವಾದ ಆರು ತಿಂಗಳೊಳಗೆ ಉಪಚುನಾವಣೆ ನಡೆಸಬೇಕು ಎಂಬ ನಿಯಮವಿದೆ.


ಇದನ್ನೂ ಓದಿ: Nitin Gadkari : 'ನನ್ನ ಕೆಲಸ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ'


ಹಾಲಿ ಸದಸ್ಯರ ಅವಧಿಯೂ ಒಂದು ವರ್ಷಕ್ಕಿಂತ ಕಡಿಮೆ ಉಪಚುನಾವಣೆ ನಡೆಸುವಂತಿಲ್ಲ. ಆದರೆ ವಯನಾಡು ಲೋಕಸಭೆ ಸದ್ಯಸರ  ಅವಧಿಯೂ ಇನ್ನು ಒಂದು ವರ್ಷಕ್ಕಿಂತ ಹೆಚ್ಚಿರುವ ಕಾರಣ ನ್ಯಾಯಾಲಯದ ಆದೇಶ ಬಂದ ನಂತರ ಉಪಚುನಾವಣೆ ನಡೆಸಲಾಗುವುದೆಂದು ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ರಾಜೀವ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.