Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು : ವಿಡಿಯೋ ಫುಲ್‌ ವೈರಲ್‌  

Women Play Football: ಸೀರೆಯುಟ್ಟ ನಾರಿ ಅಡುಗೆ ಮನೆಗೆ ಸೀಮಿತ ಎಂಬ ಮಾತು ಇತ್ತು ಆದರೆ ಇದೀಗ ಆ ಮಾತಿಗೆ ಬ್ರೇಕ್‌ ಬಿದ್ದಂತಾಗಿದೆ. ಇದಕ್ಕೆ ಉದಾಹರಣೆಯಾಗಿ ಮಹಿಳೆಯರ ತಂಡವೊಂದು ಸೀರೆಯುಟ್ಟು  ಫುಟ್ಬಾಲ್ ಆಡಿರುವ ವಿಡೀಯೊಂದು  ಸಖತ್‌ ವೈರಲ್‌ ಆಗಿದೆ. 

Written by - Zee Kannada News Desk | Last Updated : Mar 29, 2023, 01:13 PM IST
  • ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು ವಿಡೀಯೊ ಫುಲ್‌ ವೈರಲ್‌
  • ಮಧ್ಯ ಪ್ರದೇಶದ ಗ್ವಾಲಿಯರ್ ಎಂಬಲ್ಲಿ ಮಹಿಳೆಯರಿಂದ ಫುಟ್ಬಾಲ್
  • ಸೀರೆಯುಟ್ಟ ಆಟಗಾರರು 20 ರಿಂದ 50 ವರ್ಷ ವಯಸ್ಸಿನವರು
Viral Video: ಸೀರೆಯಲ್ಲಿ ಫುಟ್ಬಾಲ್ ಆಡಿದ ಮಹಿಳೆಯರು :  ವಿಡಿಯೋ ಫುಲ್‌ ವೈರಲ್‌   title=

Women In Saree Play Football: ಕೆಲ ದಶಕಗಳಿಂದ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೇ ಪ್ರತಿಯೊಂದು ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಕೆಲ ವರ್ಷಗಳ ಹಿಂದೆ ಸೀರೆಯುಟ್ಟ ನಾರಿ  ಅಡುಗೆ ಮನೆಗೆ ಮಾತ್ರ ಸೀಮಿತ ಎಂಬ ಮಾತು ಇತ್ತು . ಆದರೆ ಇದೀಗ ಆ ಮಾತಿಗೆ ಬ್ರೇಕ್‌ ಬಿದ್ದಂತಾಗಿದೆ. ಇದಕ್ಕೆ ಉದಾಹರಣೆಯಾಗಿ ಮಹಿಳೆಯರ ತಂಡವೊಂದು ಸೀರೆಯುಟ್ಟು ಫುಟ್ಬಾಲ್ ಆಡಿರುವ ವಿಡಿಯೋ  ಸಖತ್‌ ವೈರಲ್‌ ಆಗಿದೆ. 

ಮಧ್ಯ ಪ್ರದೇಶದ ಗ್ವಾಲಿಯರ್ ಎಂಬಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯ ಸಂಘ (ಜಾಗತಿಕ ಲಾಭರಹಿತ ಎನ್‌ಜಿಒ) ವತಿಯಿಂದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ಈವೆಂಟ್‌ಗೆ 'ಗೋಲ್ ಇನ್ ಸೀರೆ' ಎಂದು ಹೆಸರಿಸಲಾಗಿತ್ತು. 

ಇದನ್ನೂ ಓದಿ: Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್‌ 

ಮಹಿಳೆಯರ ಗುಂಪೊಂದು ಬಣ್ಣ ಬಣ್ಣದ ಸೀರೆಯುಟ್ಟು  ಫುಟ್ಬಾಲ್ ಆಡುತ್ತಿರುವುದು ಸಾಕಷ್ಟು ಯುವ ಪೀಳಿಗೆಗೆ ಸ್ಪೂರ್ತಿಯಾಗಿದೆ. 21 ಶತಮಾನದಲ್ಲೂ ಮಹಿಳೆಯರ ಮೇಲೆ ಕೀಳರಿಮೆ ಭಾವನೆ ಇಂದಿಗೂ ಜೀವಂತವಾಗಿದೆ. ಅಂಥಹ ಮನಸ್ಥಿತಿ ಉಳ್ಳವರಿಗೆ ಸೀರೆಯುಟ್ಟು ಫುಟ್ಬಾಲ್  ಆಡಿದ ಮಹಿಳೆಯರು ಸಾಕ್ಷಿಯಾಗಿದ್ದಾರೆ.

ಫುಟ್ಬಾಲ್ ಆಡಿದ ತಂಡದಲ್ಲಿ ಸೀರೆಯುಟ್ಟ ಆಟಗಾರರು 20 ರಿಂದ  ವರ್ಷ 50 ರ ವಯಸ್ಸಿನವರೂ  ಆ ಕ್ಷಣಕ್ಕೆ ಸಾಕ್ಷಿಯಾಗಿದ್ದರು.   ಈ ವಿಡಿಯೋವನ್ನು ಬ್ರಜೇಶ್ ರಜಪೂತ್ ಎಂಬುವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ಈ ವಿಡೀಯೊ   3.5K ವೀಕ್ಷಣೆ ಹಾಗೂ ಅಧಿಕ ಲೈಕ್ಸ್‌ ಪಡೆದಿದೆ. 

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದಕ್ಕೆ ಹಾಳೆಯಲ್ಲಿ ಮಾವನನ್ನು ಎಳೆದೊಯ್ದ ಸೊಸೆ : Video ವೈರಲ್‌

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News