ರೈಲ್ವೆ ಇಲಾಖೆಯಿಂದ ಹೊಸ ರೈಲ್ವೆ ಸೇವೆಗಳ ಪ್ರಾರಂಭಕ್ಕೆ ಸಿದ್ದತೆ
ರೈಲ್ವೆ ಸೇವೆ ಇನ್ನೂ ಪ್ರಾರಂಭವಾಗದ ರಾಜ್ಯಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರವನ್ನು ರೈಲು ಜಾಲದೊಂದಿಗೆ ಸಂಪರ್ಕಿಸುವ ಕೆಲಸ ನಡೆಯುತ್ತಿದೆ.
ನವದೆಹಲಿ: ಭಾರತೀಯ ರೈಲ್ವೆ ದೇಶದ ಎಲ್ಲ ಪ್ರಯಾಣಿಕರಿಗೆ ತನ್ನ ಸೇವೆಗಳನ್ನು ಒದಗಿಸುವ ಯೋಜನೆಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಏತನ್ಮಧ್ಯೆ ಕೆಲವು ರಾಜ್ಯ ರಾಜಧಾನಿಗಳನ್ನು ಸೇರಿಸುವ ಮೂಲಕ ಶೀಘ್ರದಲ್ಲೇ ಹೊಸ ಸೇವೆಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಇದು ಸ್ಥಳೀಯ ನಿವಾಸಿಗಳಿಗೆ ದೇಶದ ಇತರ ರಾಜ್ಯಗಳಿಗೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ.
ಈ ನಾಲ್ಕು ರಾಜ್ಯಗಳನ್ನು ಸಂಪರ್ಕಿಸುವ ಕೆಲಸ ಮಾಡಲಾಗುವುದು:
ಸ್ವೀಕರಿಸಿದ ಮಾಹಿತಿಯ ಪ್ರಕಾರ ಈಶಾನ್ಯ ರಾಜ್ಯಗಳ ಎಲ್ಲಾ ರಾಜಧಾನಿಗಳನ್ನು ರೈಲ್ವೆ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ರೈಲ್ವೆ ಮಂಡಳಿ ಈಗ ಕೆಲಸ ಮಾಡುತ್ತಿದೆ. ಭಾರತೀಯ ರೈಲ್ವೆ ಪ್ರಕಾರ ಈಶಾನ್ಯ ರಾಜ್ಯಗಳ ಎಲ್ಲಾ ಏಳು ರಾಜ್ಯಗಳ ರಾಜಧಾನಿಗಳು ಮುಂದಿನ ಮೂರು ವರ್ಷಗಳಲ್ಲಿ ಪರಸ್ಪರ ಸಂಪರ್ಕಗೊಳ್ಳುತ್ತವೆ. ಇದು ಸ್ಥಳೀಯ ನಿವಾಸಿಗಳಿಗೆ ಪ್ರಯಾಣಿಸಲು ಅನುಕೂಲ ಕಲ್ಪಿಸಲಿದೆ.
ವಿಮಾನದಂತಹ ಸೌಲಭ್ಯಗಳುಳ್ಳ ಖಾಸಗಿ ರೈಲು ಪ್ರಯಾಣಿಕರಿಗೆ ಯಾವಾಗ ಲಭ್ಯ? ಇಲ್ಲಿದೆ ಮಾಹಿತಿ
ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕಿಂ ರಾಜಧಾನಿಗಳನ್ನು ಈಶಾನ್ಯದ ರೈಲ್ವೆ ಹಳಿಯೊಂದಿಗೆ ಸಂಪರ್ಕಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷರಾದ ವಿನೋದ್ ಕುಮಾರ್ ಯಾದವ್ ಹೇಳುತ್ತಾರೆ. ಮುಂದಿನ ಮೂರು ವರ್ಷಗಳವರೆಗೆ ಅಂದರೆ 2023ರ ವೇಳೆಗೆ ಭಾರತೀಯ ರೈಲ್ವೆ ಈಶಾನ್ಯದಲ್ಲಿ ಇರುವ ಎಲ್ಲಾ ರಾಜ್ಯಗಳನ್ನು ರೈಲ್ವೆ ನಕ್ಷೆಯಲ್ಲಿ ಸೇರಿಸುತ್ತದೆ.
ತ್ರಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ರಾಜಧಾನಿಗಳನ್ನು ಈಗಾಗಲೇ ರೈಲ್ವೆಗೆ ಸಂಪರ್ಕಿಸಲಾಗಿದ್ದು ಮಿಜೋರಾಂ, ಮೇಘಾಲಯ ಮತ್ತು ಮಣಿಪುರವನ್ನು 2022 ರ ವೇಳೆಗೆ ಯೋಜನೆಯಡಿ ಸೇರಿಸಲಾಗುವುದು. ಸಿಕ್ಕಿಂ ಮತ್ತು ನಾಗಾಲ್ಯಾಂಡ್ ಅನ್ನು ರೈಲ್ವೆ ಮೂಲಕ 2023 ರೊಳಗೆ ಸಂಪರ್ಕಿಸುವ ಯೋಜನೆ ಇದೆ.
ತೀರ್ಥಯಾತ್ರೆಗೆ ತೆರಳಲು ಯೋಚಿಸುತ್ತಿದ್ದರೆ ಇಲ್ಲಿದೆ ಸೂಪರ್ ಆಫರ್
ಎಲ್ಲಾ ಈಶಾನ್ಯ ರಾಜ್ಯಗಳನ್ನು ಇನ್ನೂ ದೇಶಕ್ಕೆ ಸೇರಿಸಲಾಗಿಲ್ಲ. ರೈಲ್ವೆ ಸೇವೆ ಇನ್ನೂ ಪ್ರಾರಂಭವಾಗದ ರಾಜ್ಯಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ (Indian Railways) ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ. ಈ ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರವನ್ನು ರೈಲು ಜಾಲದೊಂದಿಗೆ ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಶೀಘ್ರದಲ್ಲೇ ಈ ರಾಜ್ಯಗಳಿಗೆ ರೈಲ್ವೆ ಸೇವೆಗಳನ್ನು ಸಹ ಪ್ರಾರಂಭಿಸಲಾಗುವುದು.