ಶ್ರೀನಗರ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಶನಿವಾರ (ಜುಲೈ 18) ಅಮರನಾಥರ ಪವಿತ್ರ ಗುಹೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯ ರಕ್ಷಣಾ ಸಿಬ್ಬಂದಿ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನಾರವಾನೆ ಅವರೊಂದಿಗೆ ಉಪಸ್ಥಿತಿರಿದ್ದರು.


COMMERCIAL BREAK
SCROLL TO CONTINUE READING

ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಿದ ಎರಡನೇ ದಿನದಂದು ಪವಿತ್ರ ಗುಹೆಗೆ ಭೇಟಿ ನೀಡಿದ್ದು ರಾಜನಾಥ್ ಅಲ್ಲಿನ ದೇವಾಲಯ ಸಂಕೀರ್ಣದಲ್ಲಿ ಸುಮಾರು ಒಂದು ಗಂಟೆ ಕಾಲ ಕಳೆದರು. 


ಅಮರನಾಥ ಗುಹೆಯನ್ನು ಹಿಂದೂ ಧರ್ಮದ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಸವಾಲಿನ ಪರ್ವತ ಪ್ರದೇಶಗಳಲ್ಲಿ ಸಾವಿರಾರು ಭಕ್ತರು ವಾರ್ಷಿಕ ತೀರ್ಥಯಾತ್ರೆ ಮಾಡುತ್ತಾರೆ.


LoC) ಉದ್ದಕ್ಕೂ ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಸಶಸ್ತ್ರ ಪಡೆಗಳನ್ನು ಕೇಳಿದರು.


ಅಮರನಾಥ ದೇವಸ್ಥಾನದ ಕುರಿತು ಮಾತನಾಡುತ್ತಾ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಪವಿತ್ರ ಅಮರನಾಥ ತೀರ್ಥ (Amarnath Yatra) ಯಾತ್ರೆಯನ್ನು ಗುರಿಯಾಗಿಸಲು ಯೋಜಿಸುತ್ತಿರುವ ಭಯೋತ್ಪಾದಕರ ಬಗ್ಗೆ ಮಾಹಿತಿ ಲಭಿಸಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಆದಾಗ್ಯೂ  ವಾರ್ಷಿಕ ತೀರ್ಥಯಾತ್ರೆ ಯಾವುದೇ ಅಡೆತಡೆಯಿಲ್ಲದೆ ನಡೆಯಲು ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳು ಜಾರಿಯಲ್ಲಿವೆ ಎಂದು ಸೇನಾಧಿಕಾರಿಗಳು ಭರವಸೆ ನೀಡಿದರು.