ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಅದಕ್ಕೂ ಮುಂಚಿತವಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: CT Ravi : ಚಡ್ಡಿ ಸುಡುವ ಅಭಿಯಾನಕ್ಕೆ ಕೆಂಡಾಮಂಡಲರಾದ ಕಮಲ ನಾಯಕರು..! 


ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡು ದಿನಗಳ ಅಧಿಕೃತ ರಾಜ್ಯ ಭೇಟಿಗೆ ಆಗಮಿಸಲಿದ್ದು, ಜೂನ್ 13 ರಂದು ದಿನ ಬೆಂಗಳೂರಿಗೆ ಆಗಮಿಸಲಿದ್ದಾರೆ. 


ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಜೂನ್ 13 ಮುಂಜಾನೆ ಬೆಂಗಳೂರಿಗೆ ಆಗಮಿಸಿ, ಬಳಿಕ ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ಅಂದು ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ. 


ಇದನ್ನು ಓದಿ: KPCC ಕಚೇರಿಗೆ ಹಳೆ ಚಡ್ಡಿಗಳನ್ನು ಕೊರಿಯರ್ ಮಾಡಿದ RSS ಮುಖಂಡರು!


ಇನ್ನು ಮರುದಿನ ಅಂದರೆ ಜೂನ್ 14 ರಂದು ಬೆಳಗ್ಗೆ ಬೆಂಗಳೂರಿನ ಕನಕಪುರ ರಸ್ತೆ ಸಮೀಪವಿರುವ ದೊಡ್ಡಕಲ್ಲಸಂದ್ರದ ವೈಕುಂಠ ಬೆಟ್ಟದ ತಿರುಪತಿ ದೇವಾಲಯವನ್ನು ಹೋಲುವ ಇಸ್ಕಾನ್ ದೇಗುಲದ ಲೋಕಾರ್ಪಣಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನದ ವೇಳೆ ದೆಹಲಿಗೆ ತೆರಳಲಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ