ಬೆಳಗಾವಿಯಲ್ಲಿ ದೇಸಿ ಸೊಬಗು.. ಜಾನಪದ ಶೈಲಿಯ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

ಬೆಳಗಾವಿಯಲ್ಲಿ ದೇಸಿ ಸೊಬಗು ಬಿಂಬಿಸುವ ಜಾನಪದ ಶೈಲಿಯ ಉಡುಗೆತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

Written by - Chetana Devarmani | Last Updated : Jun 5, 2022, 06:48 PM IST
  • ಬೆಳಗಾವಿಯಲ್ಲಿ ದೇಸಿ ಸೊಬಗು
  • ಜಾನಪದ ಶೈಲಿಯ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
ಬೆಳಗಾವಿಯಲ್ಲಿ ದೇಸಿ ಸೊಬಗು.. ಜಾನಪದ ಶೈಲಿಯ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು title=
ದೇಸಿ ಸೊಬಗು

ಬೆಳಗಾವಿ: ಬೆಳಗಾವಿಯಲ್ಲಿ ದೇಸಿ ಸೊಬಗು ಬಿಂಬಿಸುವ ಜಾನಪದ ಶೈಲಿಯ ಉಡುಗೆತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ನಗರದ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿದಿನ ಜೀನ್ಸ್‌-ಟೀ ಶರ್ಟ್‌ ಮತ್ತು ಚೂಡಿದಾರ್‌ಗಳಲ್ಲಿ ಆಗಮಿಸುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಸೀರೆ, ಲಂಗಾ-ದಾವಣಿಗಳಲ್ಲಿ ಕಂಗೊಳಿಸಿದರು. 

ಇದನ್ನೂ ಓದಿ: RSS ಬಗ್ಗೆ ಜನರಿಗೆ ಎಲ್ಲವೂ ತಿಳಿದಿದೆ : ಸಿಎಂ ಬೊಮ್ಮಾಯಿ

ಇತ್ತ ಲಲನೆಯರು ದೂರದ ಬಸ್‌ ನಿಲ್ದಾಣದಿಂದ ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಗಮನವೂ ಅವರತ್ತಲೇ ಹೊರಳುತ್ತಿತ್ತು. ಆಧುನಿಕತೆಯ ಭರಾಟೆ ಜೀವನ‌ ಶೈಲಿಯ ನಡುವೆ ದೇಸಿಯ ಸೊಬಗು ಬಿಂಬಿಸುವ ಉಡುಗೆ ತೊಟ್ಟು ವಿದ್ಯಾರ್ಥಿಗಳು ಸಂಭ್ರಮಿಸಿದರು. ಇನ್ನೂ ಇತ್ತ ವಿದ್ಯಾರ್ಥಿಗಳು ಪಂಚೆ ತೊಟ್ಟು ಖುಷಿಪಟ್ಟರು. ಗ್ರಾಮೀಣ ಶೈಲಿಯ ಧೋತಿ, ಸೀರೆ ತೊಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರು, ಸಿಬ್ಬಂದಿ ಸಾಥ್‌ ನೀಡಿದರು. 

ಇದನ್ನೂ ಓದಿ: ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ತಿರುವಣ್ಣಾಮಲೈನಲ್ಲಿ ಪೊಲೀಸರಿಂದ ಸ್ಥಳ ಮಹಜರು

ವಿದ್ಯಾರ್ಥಿಗಳು ಸಿದ್ದಪಡಿಸಿದ ಉತ್ತರ ಕರ್ನಾಟಕ, ಗ್ರಾಮೀಣ ಭಾಗದ ರೊಟ್ಟಿ, ನಾನಾ ಬಗೆಯ ಚಟ್ನಿ, ತರಕಾರಿ, ರಾಗಿ ಅಂಬಲಿ ಆಹಾರ ಪದಾರ್ಥಗಳ‌ ಪ್ರದರ್ಶನ ನಡೆಯಿತು. ಈ ಮೂಲಕ ಬೆಳಗಾವಿ ಆರ್ ಎಲ್ ಎಸ್  ಕಾಲೇಜು ಆವರಣದಲ್ಲಿ ಇಂದು ಜಾನಪದ ಲೋಕವೇ ಸೃಷ್ಟಿಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News