ನವದೆಹಲಿ: ಪ್ರಮುಖ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ರಿಸರ್ವ್ ಬ್ಯಾಂಕ್ (RBI) ನಿರಾಕರಿಸಿದ್ದು ಮನೆ ಮತ್ತು ಕಾರು ಸಾಲದ ಇಎಂಐನಲ್ಲಿ ಯಾವುದೇ ಪರಿಹಾರ ದೊರೆತಿಲ್ಲ. ಆರ್‌ಬಿಐ ರೆಪೊ ದರ  4% ಮತ್ತು ರಿವರ್ಸ್ ರೆಪೊ ದರ 3.35% ರಷ್ಟನ್ನು ಕಾಯ್ದುಕೊಂಡಿದೆ. ಆದಾಗ್ಯೂ ಸ್ವಲ್ಪ ಮಟ್ಟಿನ ಪರಿಹಾರ ದೊರೆತಿದ್ದ ಚಿನ್ನದ ಸಾಲ (Gold Loan) ಪಡೆಯುವವರಿಗೆ ದೊಡ್ಡ ರಿಯಾಯಿತಿ ದೊರೆತಿದೆ. ಉದಾಹರಣೆಗೆ, ಬ್ಯಾಂಕುಗಳು ಚಿನ್ನದ ಆಭರಣಗಳ ಮೇಲೆ ಶೇಕಡಾ 90 ರಷ್ಟು ಸಾಲ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ 10,000 ಕೋಟಿ ರೂ.ಗಳ ಹೆಚ್ಚುವರಿ ನಗದು ಸೌಲಭ್ಯವನ್ನು ಎನ್‌ಎಚ್‌ಬಿ, ನಬಾರ್ಡ್ ಒದಗಿಸಲಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಪಾಲಿಸಿ ರೆಪೊ ದರವು 4 ಪ್ರತಿಶತ ಮತ್ತು ರಿವರ್ಸ್ ರೆಪೊ ದರವು (Repo Rate) 3.35 ಶೇಕಡಾ, ಬ್ಯಾಂಕ್ ದರವು 4.25 ಶೇಕಡಾ. ಅಂತೆಯೇ ಸಿಆರ್ಆರ್ 3 ಪ್ರತಿಶತ. ಆದರೆ ಮೇ ತಿಂಗಳಲ್ಲಿ 40 ಬೇಸಿಸ್ ಪಾಯಿಂಟ್‌ಗಳನ್ನು ಮತ್ತು ಮಾರ್ಚ್‌ನಲ್ಲಿ 75 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ.


ಈ ವರ್ಷ ಲಾಕ್‌ಡೌನ್‌ (Lockdown) ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು (ರೆಪೊ ದರ) 115 ಬೇಸಿಸ್ ಪಾಯಿಂಟ್‌ಗಳಿಂದ 2 ಬಾರಿ ಕಡಿತಗೊಳಿಸಿದೆ. ಫೆಬ್ರವರಿಯಿಂದ ರೆಪೊ ದರವನ್ನು ಶೇಕಡಾ 1.15 ರಷ್ಟು ಕಡಿತಗೊಳಿಸಲಾಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಹೊಸ ಸಾಲಗಳ ಮೇಲೆ ಶೇಕಡಾ 0.72 ರಷ್ಟು ಕಡಿತದ ಲಾಭವನ್ನು ನೀಡಿವೆ.


ಮತ್ತೊಂದು ಪರಿಹಾರ ಪ್ಯಾಕೇಜ್ ನೀಡಲು ಸರ್ಕಾರದ ಸಿದ್ಧತೆ


ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬಡ್ಡಿದರಗಳನ್ನು ಬದಲಾಯಿಸದಿರಲು ಎಂಪಿಸಿ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಭಾರತೀಯ ಆರ್ಥಿಕತೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ವಿವರಿಸಿದರು.


ವಿದೇಶಿ ವಿನಿಮಯ ಮೀಸಲು ಏರಿಕೆ:
ಅವರ ಪ್ರಕಾರ ಭಾರತೀಯ ವಿದೇಶಿ ವಿನಿಮಯ ಸಂಗ್ರಹವು ವೇಗವಾಗಿ ಹೆಚ್ಚುತ್ತಿದೆ. ದ್ವಿತೀಯಾರ್ಧದಲ್ಲಿ ಹಣದುಬ್ಬರವು ಹೆಚ್ಚು ಉಳಿಯುವ ನಿರೀಕ್ಷೆಯಿದೆ. ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಬಹುದು. ಈ ವರ್ಷದ ಮಾರ್ಚ್‌ನಲ್ಲಿ 5.84 ರಷ್ಟಿದ್ದ ಹಣದುಬ್ಬರ ದರ  ಜೂನ್‌ನಲ್ಲಿ ವಾರ್ಷಿಕ ಶೇಕಡಾ 6.09ಕ್ಕೆ ಏರಿದೆ. ಇದು ಆರ್‌ಬಿಐನ ಮಧ್ಯಮ ಅವಧಿಯ ಗುರಿಗಿಂತ ಹೆಚ್ಚಾಗಿದೆ. ಆರ್‌ಬಿಐನ ಈ ಗುರಿ ಶೇಕಡಾ 2-6. FY 21 ರಲ್ಲಿ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಆರ್ಥಿಕತೆಗೆ ಉತ್ತೇಜನಕ್ಕಾಗಿ ರೆಪೋ ದರ ಕಡಿತ, EMI ಪಾವತಿಗೆ ಇನ್ನೂ 3 ತಿಂಗಳು ಕಾಲಾವಕಾಶ


ಆರ್‌ಬಿಐ ಗವರ್ನರ್ ಪ್ರಕಾರ ಜಗತ್ತಿನಲ್ಲಿ ಆರ್ಥಿಕ ಚಟುವಟಿಕೆಗಳು ದುರ್ಬಲವಾಗಿ ನಡೆಯುತ್ತಿವೆ. ಕೋವಿಡ್ -19 ಪ್ರಕರಣದ ಹೆಚ್ಚಳದಿಂದಾಗಿ ಆರ್ಥಿಕ ಪುನರುಜ್ಜೀವನವು ದುರ್ಬಲಗೊಂಡಿದೆ. ಆದರೆ ಆರ್‌ಬಿಐ ನಿಲುವು ಮಧ್ಯಮವಾಗಿರುತ್ತದೆ.


ಎರಡು ಬಾರಿ ಬಡ್ಡಿದರ ಕಡಿತ:
ಈ ವರ್ಷ ಲಾಕ್‌ಡೌನ್‌ ದೃಷ್ಟಿಯಿಂದ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು (ರೆಪೊ ದರ) 115 ಬೇಸಿಸ್ ಪಾಯಿಂಟ್‌ಗಳಿಂದ 2 ಬಾರಿ ಕಡಿತಗೊಳಿಸಿದೆ. ಫೆಬ್ರವರಿಯಿಂದ ರೆಪೊ ದರವನ್ನು ಶೇಕಡಾ 1.15 ರಷ್ಟು ಕಡಿತಗೊಳಿಸಲಾಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಹೊಸ ಸಾಲಗಳ ಮೇಲೆ ಶೇಕಡಾ 0.72 ರಷ್ಟು ಕಡಿತದ ಲಾಭವನ್ನು ನೀಡಿವೆ.