ನವದೆಹಲಿ: ವಿವಿಧ ರಾಜ್ಯಗಳಲ್ಲಿ ವೈವಿಧ್ಯಮಯ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಟೋಪಿಗಳನ್ನು (Cap) ಧರಿಸುವ ಸಂಪ್ರದಾಯವಿದೆ.  ಇದನ್ನು ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಾರತದ 73 ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶೇಷ ಉಡುಗೆ ತೊಟ್ಟಿದ್ದರು. 


COMMERCIAL BREAK
SCROLL TO CONTINUE READING

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ (Uttarakhand) ವಿಶೇಷ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ವಿಶೇಷ ಕ್ಯಾಪ್ ಧರಿಸಿದ್ದರು. ಉತ್ತರಾಖಂಡದ ರಾಜ್ಯ ಪುಷ್ಪವಾದ ಬ್ರಹ್ಮಕಮಲವನ್ನು ಸಹ ಕ್ಯಾಪ್ ಮೇಲೆ ಚ್ರಿತ್ರಿಸಲಾಗಿದೆ. 


ಇದೇ ವೇಳೆ ಪ್ರಧಾನಿ ಜಾಕೆಟ್ ಜೊತೆಗೆ ಬಿಳಿ ಕುರ್ತಾ ಧರಿಸಿದ್ದರು. ಇದಲ್ಲದೇ ಮಣಿಪುರದ (Manipur) ಸ್ಟೋಲ್ ಧರಿಸಿದ್ದರು. ಕುತೂಹಲಕಾರಿಯಾಗಿ, ಕಳೆದ ವರ್ಷ, ಪ್ರಧಾನಿ ಮೋದಿ ಅವರು ಜಾಮ್‌ನಗರ ರಾಜಮನೆತನದಿಂದ ಉಡುಗೊರೆಯಾಗಿ ನೀಡಲಾದ ವರ್ಣರಂಜಿತ 'ಹಲಾರಿ ಪಾಗ್' (ರಾಜ ತಲೆಯ ಪೇಟ) ಧರಿಸಿದ್ದರು.


ಇದನ್ನೂ ಓದಿ: WATCH:ಹಿಮರಾಶಿಯ ನಡುವೆ 15,000 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿದ ITBP


73ನೇ ಗಣರಾಜ್ಯೋತ್ಸವದಲ್ಲಿ (Republic Day) ಭಾಗವಹಿಸುವ ಮುನ್ನ ಪ್ರಧಾನಿ ಮೋದಿ ಅವರು ಹೊಸದಾಗಿ ನಿರ್ಮಿಸಲಾದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.


ಸಿಎಂ ಧಾಮಿ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ:


ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಇಂದು 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಹ್ಮಕಮಲದಿಂದ ಅಲಂಕೃತವಾಗಿರುವ ದೇವಭೂಮಿ ಉತ್ತರಾಖಂಡದ ಟೋಪಿಯನ್ನು ಧರಿಸಿ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಧಾಮಿ ಟ್ವೀಟ್ ಮಾಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.