Republic Day 2022: ರಾಜ್‌ಪಥ್‌ನಲ್ಲಿ ಭಾರತದ ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ

ಇಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇಂದು ರಾಜಪಥದಲ್ಲಿ (Rajpath) ಅದ್ಭುತ ಮೆರವಣಿಗೆ ಮತ್ತು ಟ್ಯಾಬ್ಲಾಕ್ಸ್ ನಡೆಯಲಿದೆ. ಈ ವರ್ಷ ದೇಶವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.

Edited by - Chetana Devarmani | Last Updated : Jan 26, 2022, 12:18 PM IST
Republic Day 2022: ರಾಜ್‌ಪಥ್‌ನಲ್ಲಿ ಭಾರತದ ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ
Live Blog

ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಪರೇಡ್. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ramnath Kovind) ಅವರು ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಪರೇಡ್ ಆರಂಭವಾಗಲಿದೆ. ನಂತರ ಒಂದರ ನಂತರ ಒಂದರಂತೆ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕವಾಯತು ಸ್ಕ್ವಾಡ್‌ಗಳ ಹಲವಾರು ರೆಜಿಮೆಂಟ್‌ಗಳು ತಮ್ಮ ಬ್ಯಾಂಡ್‌ಗಳೊಂದಿಗೆ ರಾಷ್ಟ್ರಪತಿ ಭವನದಿಂದ ರಾಜಪಥದ (Rajpath) ಕಡೆಗೆ ಬರುತ್ತವೆ. ಈ ಕವಾಯತು ತಂಡವು ಇಂಡಿಯಾ ಗೇಟ್  (India Gate) ಮೂಲಕ ಕೆಂಪು ಕೋಟೆಗೆ ಹೋಗಲಿದೆ. ಈ ಬಾರಿ ಮೆರವಣಿಗೆ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. 

26 January, 2022

  • 12:13 PM

    ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯಗೊಂಡಿದೆ.

  • 12:09 PM

    ಗಣರಾಜ್ಯೋತ್ಸವ ಪರೇಡ್‌ನಲ್ಲಿ ಐದು ರಫೇಲ್ ಹಾರಾಟ, 'ವಿನಾಶ್' ರಚನೆ

     

     

  • 12:04 PM

    ವಾಯುಪಡೆಯಿಂದ ಫ್ಲೈ ಫಾಸ್ಟ್ ಪ್ರದರ್ಶನ:  ಭಾರತೀಯ ವಾಯುಪಡೆಯ 75 ವಿಮಾನಗಳೊಂದಿಗೆ ಫ್ಲೈ-ಪಾಸ್ಟ್ ಪ್ರದರ್ಶನ ನಡೆಯುತ್ತಿದೆ. 

     

     

  • 11:57 AM

    ಮೋಟಾರ್ ಬೈಕ್ ಗಳ ಸಾಹಸ ಪ್ರದರ್ಶನ: BSF ವತಿಯಿಂದ ಬೈಕ್ ಸಾಹಸ ಪ್ರದರ್ಶನ, ಮಹಿಳಾ ತಂಡದಿಂದ ಬೈಕ್ ಸಾಹಸ ಪ್ರದರ್ಶನ
    BSF ವತಿಯಿಂದ ಬೈಕ್ ಸಾಹಸ ಪ್ರದರ್ಶನ ನೀಡಲಾಯಿತು.  ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸೀಮಾ ಭವಾನಿ ಮೋಟಾರ್‌ಸೈಕಲ್ ತಂಡ ಸಾಹಸ ಪ್ರದರ್ಶಿಸಿತು. 

     

     

  • 11:51 AM

    ಎರಡು ಧ್ರುವ್ ಹೆಲಿಕಾಪ್ಟರ್‌ಗಳು ಮತ್ತು ಎರಡು ಎಎಲ್‌ಎಚ್ ರುದ್ರ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ ರಾಷ್ಟ್ರೀಯ ಧ್ವಜದೊಂದಿಗೆ 301 ಆರ್ಮಿ ಏವಿಯೇಷನ್ ಸ್ಪೆಷಲ್ ಆಪರೇಷನ್ಸ್ Sqn ನ ಕರ್ನಲ್ ಸುದೀಪ್ತೋ ಚಾಕಿ ನೇತೃತ್ವದ ರುದ್ರ ರಚನೆಯ ಕಾಕ್‌ಪಿಟ್ ನೋಟ

     

     

  • 11:43 AM

    ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದೆ. 

  • 11:13 AM

    ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರ: 

    ರಾಜ್ಯದ 16 ಕರಕುಶಲ ವಸ್ತುಗಳ ಸ್ತಬ್ಧಚಿತ್ರ. ವಿಶ್ವಪ್ರಸಿದ್ಧ ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆ, ಇಳಕಲ್‌ ಸೀರೆ, ಉಡುಪಿ ಸೀರೆ, ಮೈಸೂರು ಗಾಂಜೀಫ ಕಲೆಗಳೂ ಸೇರಿದಂತೆ ಜಿಐ ಟ್ಯಾಗ್‌ ಇರುವ ಸ್ತಬ್ಧಚಿತ್ರ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಾಗಿದ ಸ್ತಬ್ಧಚಿತ್ರ.   ಈ ಬಾರಿ 'ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯದಡಿಯಲ್ಲಿ ಕರ್ನಾಟಕದ ಪಾರಂಪರಿಕ ಕಲೆಯು ಅನಾವರಣಗೊಂಡಿದೆ. ಕರ್ನಾಟಕದ ಕರಕುಶಲ ಕಲೆ(Handicrafts Tableau)ಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಗಣರಾಜೋತ್ಸವ(Republic Day Parade)ದಲ್ಲಿ ಪ್ರದರ್ಶನಗೊಂಡಿತು.  ಸತತ 13ನೇ ವರ್ಷವೂ ಕರ್ನಾಟಕ ಟ್ಯಾಬ್ಲೋ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ. 

     

     

  • 10:56 AM

    ಗಣರಾಜ್ಯೋತ್ಸವ ಪರೇಡ್ ಸ್ತಬ್ಧ ಚಿತ್ರಗಳ ಪ್ರದರ್ಶನ ಆರಂಭ:

    ಗಣರಾಜ್ಯೋತ್ಸವ ಪರೇಡ್ (Republic Day) 21 ಸ್ತಬ್ಧ ಚಿತ್ರಗಳ ಪ್ರದರ್ಶನ. ಅವುಗಳಲ್ಲಿ 12 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ ಮತ್ತು 9 ವಿವಿಧ ಸಚಿವಾಲಯಗಳ ಸ್ತಬ್ಧ ಚಿತ್ರಗಳಿವೆ.

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧ ಚಿತ್ರಗಳು: ಮೇಘಲಯಾ-ಮಹಿಳೆಯರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರ, ಗುಜರಾತ್- ಆದಿವಾಸಿ ಸ್ವತಂತ್ರ ಹೋರಾಟದ ಸ್ತಬ್ಧ ಚಿತ್ರ, ಗೋವಾ-ಗೋವಾ ಪರಂಪರೆಯ ಸ್ತಬ್ಧ ಚಿತ್ರ, ಹರಿಯಾಣ-ಕ್ರೀಡಾ ಕ್ಷೇತ್ರದ ಸಾಧನೆಯ ಸ್ತಬ್ಧ ಚಿತ್ರ, ಉತ್ತರಖಂಡ-ಉತ್ತರಖಂಡ ಅಭಿವೃದ್ಧಿಯ ಸ್ತಬ್ಧ ಚಿತ್ರ, ಅರುಣಾಂಚಲ ಪ್ರದೇಶ-ಆಂಗ್ಲೋ ಅಬ್ರೋರ್ ಯುದ್ಧ ಸ್ತಬ್ಧ ಚಿತ್ರ, ಕರ್ನಾಟಕ-ಸಾಂಪ್ರದಾಯಿಕ ಕರಕುಶಲ ತೊಟ್ಟಿಲು ಸ್ತಭ್ದ ಚಿತ್ರ, ಜಮ್ಮು ಮತ್ತು ಕಾಶ್ಮೀರ-ಬದಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರ ಸ್ತಬ್ಧ ಚಿತ್ರ, ಛತ್ತೀಸಘಡ್-ನ್ಯಾಯ ಯೋಜನೆಯ ಸ್ತಬ್ಧ ಚಿತ್ರ, ಉತ್ತರಪ್ರದೇಶ-ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ ಸ್ತಬ್ಧ ಚಿತ್ರ, ಪಂಜಾಬ್-ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ ಕೊಡುಗೆ ಸ್ತಬ್ಧ ಚಿತ್ರ, ಮಹಾರಾಷ್ಟ್ರ-ಜೀವ ವೈವಿದ್ಯತೇಯ ಸ್ತಬ್ಧ ಚಿತ್ರಗಳು ರಾಜ್ ಪಥ್ ನಲ್ಲಿ ಸಾಗುತ್ತಿವೆ. 

    9 ವಿವಿಧ ಸಚಿವಾಲಯಗಳ ಸ್ತಬ್ಧ ಚಿತ್ರ: ಕೇಂದ್ರ ಸಂಸ್ಕ್ರತಿಯ ಇಲಾಖೆ-ಶ್ರೀ ಅರವಿಂದ 150ನೇ ವರ್ಷಾಚರನೆಯ ಸ್ತಬ್ಧ ಚಿತ್ರ, ಕೇಂದ್ರ ಶಿಕ್ಷಣ ಇಲಾಖೆ-ರಾಷ್ಟ್ರೀಯ ಶಿಕ್ಷಣ ನೀತಿಯ ಸ್ತಬ್ಧ ಚಿತ್ರ, ಅಂಚೆ ಇಲಾಖೆ-75 ನೇ ವರ್ಷಾಚರಣೆಯ ಮಹಿಳಾ ಶಸಕ್ತಿಕರಣದ ಸ್ತಬ್ಧ ಚಿತ್ರ, ಕೇಂದ್ರ ಜವಳಿ ಇಲಾಖೆ --ಭವಿಷ್ಯದೆಡೆಗೆ ಹೆಜ್ಜೆ ಸ್ತಬ್ಧ ಚಿತ್ರ, ನಾಗರಿಕ ವಿಮಾನಯಾನ ಇಲಾಖೆ-ಉಡಾನ್ ಯೋಜನೆ ಸ್ತಬ್ಧ ಚಿತ್ರ, ಸಿಆರ್​ಪಿಎಫ್-ಶೌರ್ಯ ತ್ಯಾಗದ ಸ್ತಬ್ಧ ಚಿತ್ರ, ಕೇಂದ್ರ ಜಲಶಕ್ತಿ ಇಲಾಖೆ-ಜಲ ಜೀವನ್ ಮಿಷಿನ್​ ಸ್ತಬ್ಧ ಚಿತ್ರ, ಕಾನೂನು ಮತ್ತು ನ್ಯಾಯ ಇಲಾಖೆಲೋಕ್ ಅದಾಲತ್ ಸ್ತಬ್ಧ ಚಿತ್ರಗಳು ರಾಜ್ ಪಥ್ ನಲ್ಲಿ ಸಾಗುತ್ತಿವೆ. 
     

  • 10:48 AM

    ರಜಪೂತ್ ರೆಜಿಮೆಂಟ್, ಅಸ್ಸಾಂ ರೆಜಿಮೆಂಟ್, ಜಮ್ಮು ಮತ್ತು ಕಾಶ್ಮೀರ ಲೈಟ್ ರೆಜಿಮೆಂಟ್, ಸಿಖ್ ಲೈಟ್ ರೆಜಿಮೆಂಟ್, ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ಮತ್ತು ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಭಾರತೀಯ ಸೇನೆಯ ಒಟ್ಟು ಆರು ಕವಾಯತು ತುಕಡಿಗಳು ಪರೇಡ್‌ನಲ್ಲಿ ಸಾಗುತ್ತಿದ್ದಾರೆ.

    ಮದ್ರಾಸ್ ರೆಜಿಮೆಂಟಲ್ ಸೆಂಟರ್, ಕುಮೌನ್ ರೆಜಿಮೆಂಟಲ್ ಸೆಂಟರ್, ಮರಾಠಾ ಲೈಟ್ ರೆಜಿಮೆಂಟಲ್ ಸೆಂಟರ್, ಜಮ್ಮು ಮತ್ತು ಕಾಶ್ಮೀರ ಲೈಟ್ ರೆಜಿಮೆಂಟಲ್ ಸೆಂಟರ್, ಆರ್ಮಿ ಮೆಡಿಕಲ್ ಕಾರ್ಪ್ಸ್ ಸೆಂಟರ್ ಮತ್ತು ಸ್ಕೂಲ್, 14 ಗೂರ್ಖಾ ತರಬೇತಿ ಕೇಂದ್ರ, ಆರ್ಮಿ ಸಪ್ಲೈ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜು, ಬಿಹಾರ ರೆಜಿಮೆಂಟಲ್ ಸೆಂಟರ್ ಮತ್ತು ಆರ್ಮಿಯ ಸಂಯೋಜಿತ ಬ್ಯಾಂಡ್ ಆರ್ಡನೆನ್ಸ್ ಕಾರ್ಪ್ಸ್ ಸೆಂಟರ್ ಪರೇಡ್‌ನಲ್ಲಿ ಸಾಗುತ್ತಿದ್ದಾರೆ.

  • 10:37 AM

    ಸೇನಾ ಪರೇಡ್ ಆರಂಭ: ರಾಜ್‌ಪಥ್‌ ನಲ್ಲಿ ಸೇನಾ ಪರೇಡ್ ಆರಂಭವಾಗಿದೆ. ಪರೇಡ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ನಡೆಯುತ್ತಿದೆ. ಮೇಜರ್ ಜನರಲ್ ಅಲೋಕ್ ಕಾಕರ್, ಚೀಫ್ ಆಫ್ ಸ್ಟಾಫ್, ದೆಹಲಿ ಏರಿಯಾ ಪರೇಡ್ ಸೆಕೆಂಡ್ ಇನ್ ಕಮಾಂಡ್ ಆಗಿದ್ದಾರೆ. 

     

     

  • 10:30 AM

    J&K ಪೊಲೀಸ್ ASI ಬಾಬು ರಾಮ್ ಅವರು ಶ್ರೀನಗರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ತೋರಿದ ಶೌರ್ಯಕ್ಕಾಗಿ ಮರಣೋತ್ತರ ಅಶೋಕ ಚಕ್ರವನ್ನು ನೀಡಲಾಯಿತು.  

    ಅವರ ಪತ್ನಿ ರೀನಾ ರಾಣಿ ಮತ್ತು ಪುತ್ರ ಮಾಣಿಕ್ ರಾಷ್ಟ್ರಪತಿ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು

  • 10:26 AM

    ರಾಜ್‌ಪಥ್‌ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿವಿಧ ಗಣ್ಯರು ಭಾಗಿಯಾಗಿದ್ದಾರೆ. 

     

     

  • 10:24 AM

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್‌ಪಥ್‌ ತಲುಪಿದ್ದಾರೆ.

  • 10:13 AM

    ರಾಜ್‌ಪಥ್‌ನತ್ತ ತೆರಳಿದ ಪ್ರಧಾನಿ ಮೋದಿ: ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ರಾಜ್‌ಪಥ್‌ನತ್ತ ಪ್ರಧಾನಿ ನರೇಂದ್ರ ಮೋದಿ ತೆರಳಿದರು.

  • 09:59 AM

    ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಪಿಎಂ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದರು. 

     

     

  • 09:57 AM

Trending News