ಕರೋನಾವೈರಸ್  ಅಪ್ಡೇಟ್:  ದೇಶದಲ್ಲಿ ಮತ್ತೆ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನಾ ಸೋಂಕಿತರ ಪ್ರಮಾಣ ಶೇ. 20ರ ಸನಿಹ ತಲುಪಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಆಗಸ್ಟ್ 16 ರಂದು ದೆಹಲಿಯಲ್ಲಿ ಒಟ್ಟು 917 ಕರೋನಾ ಸಾಂಕ್ರಾಮಿಕ ಪ್ರಕರಣಗಳು ವರದಿಯಾಗಿವೆ. ಈ ವೇಳೆ ಕರೋನಾದಿಂದ ಬಳಲುತ್ತಿದ್ದ 3 ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. 1566 ರೋಗಿಗಳು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನ ಅಂಕಿ-ಅಂಶಗಳು ಹೆಚ್ಚಾಗುತ್ತಿರುವುದು ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ಚಿಂತೆಗೀಡು ಮಾಡಿದೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ 917 ಹೊಸ ಕರೋನಾ ಪ್ರಕರಣಗಳು:
ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ  4775 ಜನರಿಗೆ ಕರೋನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 917 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.  ದೆಹಲಿಯಲ್ಲಿ ಪ್ರಸ್ತುತ 6867 ಕೊರೊನಾವೈರಸ್ ರೋಗಿಗಳಿದ್ದಾರೆ. ಅದೇ ಸಮಯದಲ್ಲಿ, ನಗರದಲ್ಲಿ ಕಂಟೋನ್ಮೆಂಟ್ ವಲಯಗಳ ಸಂಖ್ಯೆ ಪ್ರಸ್ತುತ 326 ಆಗಿದೆ. ದೆಹಲಿಯಲ್ಲಿ ಮಂಗಳವಾರದ ಹೊಸ ಅಂಕಿಅಂಶಗಳೊಂದಿಗೆ, ಕರೋನಾ ಸೋಂಕಿನ ಪ್ರಮಾಣವು 19.20% ಕ್ಕೆ ಏರಿದೆ. ಇದು ಕಳೆದ 7 ತಿಂಗಳಲ್ಲೇ ಅತಿ ಹೆಚ್ಚು ಕರೋನಾ ಸೋಂಕಿನ ಪ್ರಮಾಣವಾಗಿದೆ.


ಇದನ್ನೂ ಓದಿ- ಜಮ್ಮು ಮತ್ತು ಕಾಶ್ಮೀರ: ಪಹಲ್ಗಾಮ್‌ನ ಚಂದನ್‌ವಾಡಿಯಲ್ಲಿ ಐಟಿಬಿಪಿ ಬಸ್ ಅಪಘಾತ


ದೆಹಲಿ ಸರ್ಕಾರದ ಆರೋಗ್ಯ ಇಲಾಖೆಯ ಪ್ರಕಾರ, ಈಗ ನಗರದಲ್ಲಿ ಸೋಂಕಿತರ (ಕೊರೊನಾವೈರಸ್) ಒಟ್ಟು ಸಂಖ್ಯೆ 19 ಲಕ್ಷ 86 ಸಾವಿರ 739 ಕ್ಕೆ ಏರಿದೆ. ಈ ಪೈಕಿ 26 ಸಾವಿರದ 392 ರೋಗಿಗಳು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದ ದೆಹಲಿ ಸರ್ಕಾರ ಈಗ ಕಂದಾಯ ಇಲಾಖೆಯ ಅಧಿಕಾರಿಗಳ 2 ತಂಡಗಳನ್ನು ರಚಿಸಿದೆ. ಈ ತಂಡಗಳು ಕೋವಿಡ್‌ಗೆ ಸಂಬಂಧಿಸಿದ ಡೇಟಾವನ್ನು ನಿರ್ವಹಿಸುತ್ತವೆ. 


ವರದಿಯ ಪ್ರಕಾರ, ಈ ಎರಡೂ ತಂಡಗಳು ವಿವರವಾದ ಪೋರ್ಟಲ್‌ನಲ್ಲಿ ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಡೇಟಾವನ್ನು ನಿಯಮಿತವಾಗಿ ನವೀಕರಿಸುತ್ತಲೇ ಇರುತ್ತವೆ. ಎರಡೂ ತಂಡಗಳು SDM (HQ) SA ಬೆಲ್‌ರೋಸ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತವೆ. 


ಇದನ್ನೂ ಓದಿ- ಆರೋಗ್ಯ ಅಭಿವೃದ್ಧಿ ಸುಧಾರಿಸಲು ಎನ್ ಆರ್ ಐ ವೈದ್ಯರೊಂದಿಗೆ ಕೈ ಜೋಡಿಸಿದ ಆಂಧ್ರ ಸರ್ಕಾರ


'ಕೊರೊನಾದಿಂದ ರಕ್ಷಿಸಲು ಜಾಗೃತರಾಗಿರಿ':
ಏತನ್ಮಧ್ಯೆ, ದೆಹಲಿಯ ಎಲ್ಜಿ ವಿಕೆ ಸಕ್ಸೇನಾ ಅವರು ಸಾಂಕ್ರಾಮಿಕ ರೋಗದ ಬಗ್ಗೆ ಜಾಗರೂಕರಾಗಿರಲು ಜನರಿಗೆ ಮನವಿ ಮಾಡಿದ್ದಾರೆ. ಕರೋನಾ ಸಾಂಕ್ರಾಮಿಕವು ಇನ್ನೂ ಪ್ರಪಂಚದಿಂದ ಎಲ್ಲಿಯೂ ಹೋಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ನಿಯಮಿತವಾಗಿ ಕರೋನಾ ಪ್ರೋಟೋಕಾಲ್ ಅನ್ನು ಅನುಸರಿಸುವುದು ಬಹಳ ಮುಖ್ಯ. ನಮ್ಮ ಕಿಂಚಿತ್ತೂ ನಿರ್ಲಕ್ಷ್ಯ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ಆದ್ದರಿಂದ ನಿಯಮಿತವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅನುಸರಿಸಿ ಎಂದವರು ತಿಳಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.