ನವದೆಹಲಿ: ರಾಜ್ಯದಲ್ಲಿನ ಹಿಜಾಬ್ ವಿವಾದ(Karnataka Hijab Row)ದ ಕಿಚ್ಚು ಇದೀಗ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಹಿಜಾಬ್ ವಿವಾದ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ‘ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದೇವೆ’ ಅಂತಾ ಕಳವಳ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

‘ಶಿಕ್ಷಣದಲ್ಲಿ ಹಿಜಾಬ್ ವಿಷಯವನ್ನು ಎಳೆದು ತರುವ ಮೂಲಕ ಭಾರತದ ಹೆಣ್ಣುಮಕ್ಕಳ ಭವಿಷ್ಯ(Muslim Girls Hijab Row)ವನ್ನು ಕಸಿದುಕೊಳ್ಳುತ್ತಿದ್ದೇವೆ. ಇಂದು ವಿದ್ಯೆ, ಜ್ಞಾನದ ದೇವತೆ ಸರಸ್ವತಿ ದೇವಿಯನ್ನು ಆರಾಧಿಸುವ ದಿನ. ಸರಸ್ವತಿ ದೇವಿ ಎಲ್ಲರಿಗೂ ಬುದ್ಧಿ ಕೊಡಲಿ, ದೇವಿ ಬೇಧ-ಭಾವ ತೋರಿಸುವುದಿಲ್ಲ’ ಅಂತಾ ರಾಹುಲ್ ಗಾಂಧಿ ಶನಿವಾರ ಟ್ವೀಟ್ ಮಾಡಿದ್ದಾರೆ.  


ಸಿಎಂ ಬೊಮ್ಮಾಯಿ ಮೊದಲ ಬಜೆಟ್: ಆರ್ಥಿಕ ಮುಗ್ಗಟ್ಟಿನ ಮದ್ಯೆ ಆಯವ್ಯಯ! ಯಾವ ಯೋಜನೆಗಳಿಗೆ ಆದ್ಯತೆ?


ಏನಿದು ಹಿಜಾಬ್ ವಿವಾದ..?


ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ(Hijab Row) ಬಂದಿದ್ದಕ್ಕೆ ತರಗತಿಯೊಳಗೆ ಬಿಡದ ಕಾರಣ ವಿವಾದ ಸೃಷ್ಟಿಯಾಗಿತ್ತು. ಬಳಿಕ ಈ ಹಿಜಾಬ್ ವಿವಾದದ ಕಿಚ್ಚು ರಾಷ್ಟ್ರವ್ಯಾಪಿ ಹರಡಿದೆ. ಪ್ರಮುಖ ರಾಜಕೀಯ ಮುಖಂಡರು ಪರ-ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬಂದರೆ ಏನು ತಪ್ಪು..? ಹಿಜಾಬ್ ಧರಿಸಲು ಬಿಜೆಪಿಯವರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಬಿಜೆಪಿ ನಾಯಕರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನವರು ಆರೋಪಿಸಿದ್ದಾರೆ.


‘ಹೆಣ್ಣು ಮಕ್ಕಳನ್ನು ತರಗತಿಗೆ ಹೋಗದಂತೆ ತಡೆಯುವುದು ಅಮಾನವೀಯ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ(Muslim Girls) ಶಿಕ್ಷಣ ನಿರಾಕರಿಸುವ ಪ್ರಯತ್ನ ಇದಾಗಿದೆ. ಅವರು ಹಿಜಾಬ್ ಧರಿಸಿದರೆ ಏನು ಸಮಸ್ಯೆ?’ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿ ಬಿಜೆಪಿ(BJP Government) ಮತ್ತು ಸಂಘ ಪರಿವಾರದ ವಿರುದ್ಧ ಹರಿಹಾಯ್ದಿದ್ದರು. ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದವನ್ನು ತುರುಕಲು ಸಿದ್ದರಾಮಯ್ಯ(Siddaramaiah) ಪ್ರಯತ್ನಿಸುತ್ತಿದ್ದಾರೆ’ ಅಂತಾ ಆರೋಪಿಸಿದೆ.


ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ


ಹಿಜಾಬ್ ವಿವಾದದ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಉಡುಪಿ, ಕುಂದಾಪುರದಲ್ಲಿ ಕಾಲೇಜುಗಳಲ್ಲಿ ಇಂದು ರಜೆ ಘೋಷಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದು, ಕೆಲವೆಡೆ ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿರುವುದು ವರದಿಯಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.