ಸಿಎಂ ಬೊಮ್ಮಾಯಿ ಮೊದಲ ಬಜೆಟ್: ಆರ್ಥಿಕ ಮುಗ್ಗಟ್ಟಿನ ಮಧ್ಯೆ ಆಯವ್ಯಯ! ಯಾವ ಯೋಜನೆಗಳಿಗೆ ಆದ್ಯತೆ?

ವಿಧಾನಸಭಾ ಚುನಾವಣೆ 2023ರಲ್ಲಿ (Assembly Election 2023) ನಡೆಯಲಿದ್ದು ಈ ಬಾರಿಯ ರಾಜ್ಯ ಸರ್ಕಾರದ ಆಯವ್ಯಯ ಚುನಾವಣಾ ಬಜೆಟ್ ಆಗಲಿದೆ.

Edited by - Zee Kannada News Desk | Last Updated : Feb 5, 2022, 04:21 PM IST
  • ಸರ್ಕಾರ ಮಾರ್ಚ್ ಮೊದಲ ವಾರದಲ್ಲಿ 2022-23 ಆರ್ಥಿಕ ವರ್ಷದ ಬಜೆಟ್ ಮಂಡನೆ ಮಾಡಲಿದೆ.
  • ಬಜೆಟ್ ಸಿದ್ಧತೆಗಳು ಮುಖ್ಯಮಂತ್ರಿಯ ದೆಹಲಿ ಪ್ರವಾಸದ ನಂತರ ಪ್ರಾರಂಭವಾಗಲಿದೆ.
  • ಇಲಾಖೆಗಳ ಆರ್ಥಿಕ ಸ್ಥಿತಿ ಅವಲೋಕನೆ ಕುರಿತ ಸಭೆಗಳು ಬುಧವಾರದಿಂದ ನಡೆಯಲಿದೆ.
ಸಿಎಂ ಬೊಮ್ಮಾಯಿ ಮೊದಲ ಬಜೆಟ್: ಆರ್ಥಿಕ ಮುಗ್ಗಟ್ಟಿನ ಮಧ್ಯೆ ಆಯವ್ಯಯ! ಯಾವ ಯೋಜನೆಗಳಿಗೆ ಆದ್ಯತೆ?  title=
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ವಿಧಾನಸಭಾ ಚುನಾವಣೆ 2023ರಲ್ಲಿ (Assembly Election 2023) ನಡೆಯಲಿದ್ದು ಈ ಬಾರಿಯ ರಾಜ್ಯ ಸರ್ಕಾರದ ಆಯವ್ಯಯ ಚುನಾವಣಾ ಬಜೆಟ್ ಆಗಲಿದೆ. ಎರಡು ವರ್ಷಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಜನಪ್ರಿಯ ಯೋಜನೆಗಳನ್ನ ಬಜೆಟ್ ನಲ್ಲಿ ಘೋಷಿಸಲು ಕಸರತ್ತು ಮಾಡುತ್ತಿದ್ದಾರೆ.

ಸರ್ಕಾರ ಮಾರ್ಚ್ ಮೊದಲ ವಾರದಲ್ಲಿ 2022-23 ಆರ್ಥಿಕ ವರ್ಷದ ಬಜೆಟ್ (Karnataka Budget) ಮಂಡನೆ ಮಾಡಲಿದೆ. ಬಜೆಟ್ ಸಿದ್ಧತೆಗಳು ಮುಖ್ಯಮಂತ್ರಿಯ ದೆಹಲಿ ಪ್ರವಾಸದ ನಂತರ ಪ್ರಾರಂಭವಾಗಲಿದೆ. ಸಿದ್ಧತೆಗಳಿಗೆ ಹಾಗೂ ಇಲಾಖೆಗಳ ಆರ್ಥಿಕ ಸ್ಥಿತಿ ಅವಲೋಕನೆ ಕುರಿತ ಸಭೆಗಳು ಬುಧವಾರದಿಂದ ನಡೆಯಲಿದೆ.

ಇದನ್ನೂ ಓದಿ: ಸಾರಿಗೆ ಇಲಾಖೆ ಸೇವೆಗಳಿಗೆ ಸಾರಥಿ-4 ತಂತ್ರಾಂಶ ಬಳಸಲು ಸೂಚನೆ

2023ರ ವಿಧಾನಸಭಾ ಚುನಾವಣೆ ಮೊದಲು, ಬಿಬಿಎಂಪಿ ಚುನಾವಣೆ (BBMP Election) ಇದೆ ವರ್ಷ ನಡೆಯಲಿದೆ. ಬಜೆಟ್ ನಂತರ ಬರುವ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಕಾರ್ಯಕ್ಕೆ ಅನಿವಾರ್ಯವಾಗಿ ಹೆಚ್ವಿನ ಹಣ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ನೀರಾವರಿ ಯೋಜನೆಗೆ ಆದ್ಯತೆ:

ಮಾಜಿ ಮುಖ್ಯಮಂತ್ರಿ ಬಿಎಸ್ ವೈ (BS Yeddyurapppa) ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಬೊಮ್ಮಾಯಿ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚು ಹಿಡಿತ ಸಾಧಿಸಿದ್ದಾರೆ. ನೀರಾವರಿ ಯೋಜನೆಗಳಿಂದ ರೈತಾಪಿ ಕುಟುಂಬಗಳನ್ನ ಸೆಳೆಯಲು ಸುಲಭ ಎಂಬ ಲೆಕ್ಕಾಚಾರ ಆಗಿದೆ. 

ಈ ಕಾರಣಕ್ಕೆ ಅಭಿವೃದ್ಧಿ ಕೆಲಸಕ್ಕೆ ಮೀಸಲಿಡುವ ಹಣಕಾಸಿನಲ್ಲಿ ನೀರಾವರಿ ಯೋಜನೆಗೆ ಸಿಂಹಪಾಲು ಎನ್ನಲಾಗಿದೆ. ಇದರ ಜತೆಗೆ ಕಾಂಗ್ರೆಸ್ ನೀರಾವರಿ ಯೋಜನೆಗಳಿಗೆ ಪಾದಯಾತ್ರೆಗೆ ಕೌಂಟರ್ ಕೊಡಲು ಸರಣಿ ನೀರಾವರಿ ಘೋಷಣೆಗಳ ಜೊತೆಗೆ ನೀರಾವರಿ ಇಲಾಖೆಯಲ್ಲಿ ಒಂದು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳ ಮಾದರಿಯ ಋಣಭಾರ ಪರಿಹಾರ ಆಯೋಗ-ನೀತಿ ರಚನೆ:

ಕೇರಳ ಮಾದರಿಯಲ್ಲಿ ರಾಜ್ಯ ಸರ್ಕಾರ ಖಾಯಂ ಋಣಭಾರ ಪರಿಹಾರ ಆಯೋಗ ರಚಿಸಲು ಚಿಂತನೆ ನಡೆಸಿದೆ. ಈ ಆಯೋಗ ರಾಜ್ಯದಲ್ಲಿನ ಋಣಭಾರ ಪೀಡಿತ ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಪರಿಹಾರ ಕಲ್ಪಿಸಲು ಕೆಲಸ ಮಾಡಲಿದೆ. ಈ ಆಯೋಗ ಕರ್ನಾಟಕ ಋಣಭಾರ ಪರಿಹಾರ ನೀತಿ ಅಡಿಯಲ್ಲಿ ಕೆಲಸ ಮಾಡಲಿದೆ.

ಇದನ್ನೂ ಓದಿ: ನದಿ ಜೋಡಣೆಯಿಂದ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕಿಡಿ

ದುರ್ಬಲ ವರ್ಗಗಳ ಋಣಭಾರ ಸಮಸ್ಯೆಗೆ ಸ್ಪಂದಿಸಲಿದೆ. ಕೃಷಿ ಸಾಲ (Agricultural loan) ನೀಡುವಿಕೆ, ಸಾಲ ವಸೂಲಿ, ಬಡ್ಡಿ ಮನ್ನಾ ಷರತ್ತುಗಳು, ಯಾವಾಗ ರೈತರ ಸಾಲದ ಹೊರೆ ಸರ್ಕಾರ ಹೊತ್ತು, ಸಾಲ ಮನ್ನಾ ಮಾಡಬೇಕು ಎಂಬ ವಿಸ್ತೃತ ಮಾರ್ಗಸೂಚಿ ಈ ನೀತಿಯಲ್ಲಿರಲಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಜೀ ಕನ್ನಡ ನ್ಯೂಸ್ ಗೆ ಮಾಹಿತಿ ನೀಡಿದರು.

ರಾಜ್ಯ ಜಿಡಿಪಿ ದುಪ್ಪಟ್ಟು ಮಾಡುವ ನೀತಿಯುಳ್ಳ ಬಜೆಟ್:

ಇನ್ನು ರಾಜ್ಯದ ಜಿಡಿಪಿ (GDP) ಸದ್ಯ ₹17 ಲಕ್ಷ ಕೋಟಿ ಇದೆ, 2025 ಅಷ್ಟರಲ್ಲಿ ರಾಜ್ಯದ ಜಿಡಿಪಿ ದುಪ್ಪಟ್ಟು ಆಗಬೇಕು. ಜಿಡಿಪಿ ₹34 ಲಕ್ಷ ಕೋಟಿ ಮಾಡುವ ಪೂರಕ ನೀತಿಯನ್ನ ರೂಪಿಸುವಂತೆ ಸಲಹೆ ನೀಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉತ್ಪಾದನಾ ವಲಯ, ಕೃಷಿ ವಲಯ ಹಾಗೂ ಸೇವಾ ವಲಯಗಳಿಗೆ ಹೆಚ್ಚಿನ ಅನುದಾನ ನೀಡಲು ಚಿಂತನೆ ನಡೆಸಿದ್ದಾರೆ. ಕೃಷಿ ವಲಯಗಳಲ್ಲಿ ಜಿಡಿಪಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಯೋಜನೆಗಳನ್ನು ರೂಪಿಸಲು ಸಜ್ಜಾಗುತ್ತಿದ್ದಾರೆ. 

ರಾಜ್ಯ ಆರ್ಥಿಕತೆಗೆ ಕೋವಿಡ್-19 (Corona) ಶಾಪವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷದಿಂದ ಆದಾಯ ಪ್ರಮಾಣ ಕುಸಿದಿದೆ. ಇನ್ನು ಆರ್ಥಿಕ ಇಲಾಖೆಯ ಕೆಲ ಅಧಿಕಾರಿಗಳು ಹೇಳುವ ಪ್ರಕಾರ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ರಿಲೀಫ್ ಕೊಡುವ ಯಾವುದೇ ಅನುದಾನ ಬಂದಿಲ್ಲ. ಈಗಾಗಲೇ ಸಾಲ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನಪ್ರಿಯ ಬಜೆಟ್ ನೀಡುವ ಹುಮ್ಮಸ್ಸು, ರಾಜ್ಯ ಸಾಲದ ಸುಲಿಗೆ ಸಿಲುಕಬಾರದು. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯವಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ಒಟ್ಟಿನಲ್ಲಿ ಮುಳ್ಳಿನ ಹಾದಿಯಾಗಿರುವ 2022-23 ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಹೇಗೆ ನಡೆಯುತ್ತಾರೆ ಎಂಬ ಪ್ರಶ್ನೆ ಬಿಜೆಪಿಗೆ ಎದುರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸವಾಲಾಗಿರುವ ಈ ಬಜೆಟ್ ನಲ್ಲಿ ಎಲ್ಲಾ ವರ್ಗದ ಜನರಿಗೆ ಯೋಜನೆಗಳನ್ನ ನೀಡುತ್ತಾರಾ? "ಸರ್ವ ಸ್ಪರ್ಶಿ" ಬಜೆಟ್ ನೀಡಲು ಸಾದ್ಯವೇ? ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಸುಧಾರಣಾ ಬಜೆಟ್ ನೀಡುತ್ತಾರ? ಈ ರೀತಿ ಸರಣಿ ಪ್ರಶ್ನೆಗಳು ಬೊಮ್ಮಾಯಿ ಬಜೆಟ್ ಸುತ್ತ ಬೆಳೆದಿದೆ, ಇವೆಲ್ಲಾ ಪ್ರಶ್ನೆಗೆ ಮಾರ್ಚ್ ಮೊದಲ ವಾರದ ಮಂಡಿಸುವ ಆಯವ್ಯಯದಲ್ಲಿ ಉತ್ತರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News