`ಧರ್ಮ ಸಂಸತ್ ನಲ್ಲಿನ ಹೇಳಿಕೆಗಳು ಹಿಂದೂಗಳ ಮಾತಲ್ಲ, ಹಿಂದುತ್ವ ಸಂವಿಧಾನದ ಪೀಠಿಕೆಯ ಪ್ರತಿಬಿಂಬ`
RSS Chief Mohan Bhagwat: `ಧರ್ಮ ಸಂಸತ್` ನಲ್ಲಿ ಹೇಳಿರುವ ವಿವಾದಾತ್ಮಕ ವಿಷಯಗಳಿಗೆ ಮೋಹನ್ ಭಾಗವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. `ಧರ್ಮ ಸಂಸತ್`ನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagavat) ಅವರು 'ಧರ್ಮ ಸಂಸತ್'ನಲ್ಲಿ ಹೇಳಿದ್ದಾರೆ ಎನ್ನಲಾದ ಹಿಂದುತ್ವದ ಮಾತುಗಳನ್ನು ಒಪ್ಪುವುದಿಲ್ಲ. 'ಧರ್ಮ ಸಂಸತ್'ನಲ್ಲಿ ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ ಮತ್ತು ಹಿಂದುತ್ವವನ್ನು ಅನುಸರಿಸುವ ಜನರು ಅದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video : ಕೋಳಿ ಮತ್ತು ಹಕ್ಕಿಯ ನಡುವಿನ ಕಾಳಗದಲ್ಲಿ ಸೋತು ಪರಾರಿಯಾದವರು ಯಾರು ?
ಮಾಧ್ಯಮ ಸಮೂಹ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ' ವಿಷಯದ ಕುರಿತು ಮಾತನಾಡುತ್ತಾ ಅವರು, ನಾನು ಕೋಪದಲ್ಲಿ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ (Hindutva) ಎಂದಿದ್ದಾರೆ.
ಧರ್ಮ ಸಂಸತ್ತಿನಲ್ಲಿ (Dharma Sansat) ನೀಡಿರುವ ಹೇಳಿಕೆಗಳು ಹಿಂದೂಗಳ ಮಾತುಗಳಲ್ಲ. ನಾನು ಕೋಪದಿಂದ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ. ಇನ್ನು ವೀರ ಸಾವರ್ಕರ್ ಕೂಡ ಹಿಂದೂ ಸಮಾಜ ಒಗ್ಗಟ್ಟಾದರೆ ಭಗವದ್ಗೀತೆಯ ಬಗ್ಗೆ ಮಾತನಾಡುತ್ತೇನೆಯೇ ಹೊರತು ಯಾರನ್ನೂ ಹಾಳು ಮಾಡುವ ಅಥವಾ ಹಾನಿ ಮಾಡುವ ಬಗ್ಗೆ ಅಲ್ಲ ಎಂದು ಹೇಳಿದ್ದರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.
ದೇಶವು 'ಹಿಂದೂ ರಾಷ್ಟ್ರ'ವಾಗುವ ಹಾದಿಯನ್ನು ಅನುಸರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಂಬಿ ಅಥವಾ ಬಿಡಿ, ಇದು ಹಿಂದೂ ರಾಷ್ಟ್ರ. ಸಂಘವು ಜನರನ್ನು ವಿಭಜಿಸುವುದಿಲ್ಲ. ಆದರೆ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:' ಗ್ಲೋಬಲ್ ಲೀಡರ್ ಅಪ್ರೂವಲ್' ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ.. ಬೈಡನ್ ಸೇರಿ 11 ಜನರನ್ನು ಹಿಂದಿಕ್ಕಿದ ಪ್ರಧಾನಿ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ (Haridwar) ನಡೆದ ಧರ್ಮ ಸಂಸತ್ತಿನಲ್ಲಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿತ್ತು ಮತ್ತು ರಾಯ್‌ಪುರದಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಅಸಭ್ಯ ಹೇಳಿಕೆ ನೀಡಲಾಗಿತ್ತು ಇದಕ್ಕೆ ಮೋಹನ್ ಭಾಗವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.