ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಹಿರಿಯ ಪ್ರಚಾರಕರಾದ ಇಂದ್ರೇಶ್ ಕುಮಾರ್ (Indresh Kumar) ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಬಹು ದೊಡ್ಡ ಹೇಳಿಕೆಯನ್ನೇ ನೀಡಿದ್ದಾರೆ. ಈ ಹೇಳಿಕೆಯ ಮೂಲಕ ಪಾಕಿಸ್ತಾನಕ್ಕೆ (Pakistan) ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನ ಕಾಶ್ಮೀರವನ್ನು ತನ್ನದು ಎಂದು ಹೇಳಿಕೊಂಡರೆ, ಅಖಂಡ ಭಾರತದಲ್ಲಿ ಲಾಹೋರ್ (Lahore) ಮತ್ತು ಕರಾಚಿ ಎರಡೂ ಇತ್ತು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಈ ಎರಡು ಪ್ರದೇಶಗಳು ನಮ್ಮದು ಎಂದಿದ್ದಾರೆ. 


COMMERCIAL BREAK
SCROLL TO CONTINUE READING

'ಪಾಕಿಸ್ತಾನ ಪಿಒಕೆಯನ್ನು ಖಾಲಿ ಮಾಡಬೇಕು'
ಹಿರಿಯ ಆರ್ ಎಸ್ ಎಸ್ ಪ್ರಚಾರಕ ಇಂದ್ರೇಶ್ ಕುಮಾರ್ (Indresh Kumar) ಚೀನಾಕ್ಕೆ ಕೂಡಾ ಎಚ್ಚರಿಕೆ ನೀಡಿದ್ದಾರೆ. ಟಿಬೆಟ್ ಎಂದಿಗೂ ಚೀನಾದ ಭಾಗವಾಗಿರಲಿಲ್ಲ. ಹಾಗಾಗಿ ಚೀನಾ ಟಿಬೆಟ್ ಅನ್ನು ಬಿಟ್ಟು ಬಿಡಬೇಕು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (POK) ಸ್ವಾತಂತ್ರ್ಯದ ಬಗ್ಗೆ ಅವರು  ಪುನರುಚ್ಚರಿಸಿದ್ದಾರೆ.  ಪಾಕಿಸ್ತಾನ ಪಿಒಕೆಯನ್ನು ತೊರೆಯಬೇಕು ಎಂದು ಅವರು ಹೇಳಿದ್ದಾರೆ. ಇದಕ್ಕೆ ಮೊದಲು ಕೂಡಾ ಇಂದ್ರೇಶ್  ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುತ್ತಾ ಬಂದಿದ್ದಾರೆ.  


ಇದನ್ನೂ ಓದಿ :ಪ್ರಶಾಂತ್ ಕಿಶೋರ್ ಸೇರ್ಪಡೆಗೆ ಕಾಂಗ್ರೆಸ್ ವಲಯದಲ್ಲಿ ಹೇಳುತ್ತಿರುವುದೇನು?


ಇಮ್ರಾನ್‌ಗೆ ಖಡಕ್ ಉತ್ತರ : 
ಆರ್‌ಎಸ್‌ಎಸ್ (RSS) ನಾಯಕ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸಂರಕ್ಷಕ  ಇಂದ್ರೇಶ್ ಕುಮಾರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯದ ಬೇಡಿಕೆಯನ್ನು ನಿರಂತರವಾಗಿ ಮುಂದಿಡುತ್ತಲೇ ಬಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಪಾಕಿಸ್ತಾನವನ್ನು ತಾಲಿಬಾನಿ (Taliban) ಮನಸ್ಥಿತಿಯ ದೇಶ ಎಂದು ಅವರು ಕರೆದಿದ್ದಾರೆ. ಎರಡು ದೇಶಗಳ ನಡುವೆ ಸ್ಥಗಿತಗೊಂಡ ಮಾತುಕತೆಗೆ ಇಮ್ರಾನ್ ಖಾನ್ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ ನಂತರ ಇಂದ್ರೇಶ್ ಈ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ : Covid Vaccination Slot: ಕೋವಿಡ್ ಲಸಿಕೆ ಸ್ಲಾಟ್ ಅನ್ನು Google ನಲ್ಲಿಯೂ ಬುಕ್ ಮಾಡಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ