Covid Vaccination Slot On Google: ದೇಶದಲ್ಲಿ ಕರೋನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಲಸಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ದೇಶದ ಪ್ರತಿ ಪ್ರಜೆಗೂ ಸಾಧ್ಯವಾದಷ್ಟು ಬೇಗ ಕರೋನಾ ಲಸಿಕೆಯನ್ನು (Corona Vaccine) ತಲುಪಿಸುವುದು ಸರ್ಕಾರದ ಪ್ರಯತ್ನವಾಗಿದೆ. ಇದಕ್ಕಾಗಿ ಹಲವು ಆಪ್‌ಗಳು ಮತ್ತು ಆಯ್ಕೆಗಳನ್ನು ಪರಿಚಯಿಸಲಾಗಿದೆ. ಅದೇ ಸಮಯದಲ್ಲಿ, ಕೇಂದ್ರ ಆರೋಗ್ಯ ಸಚಿವರು ಈಗ ಜನರ ಅನುಕೂಲಕ್ಕಾಗಿ ಒಂದು ವಿಶೇಷ ಉಪಕ್ರಮವನ್ನು ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ನೀವು ಈಗ ಗೂಗಲ್‌ನಲ್ಲಿಯೇ ಕೋವಿಡ್ ಲಸಿಕೆಯ (Covid Vaccination Slot On Google) ಬಗ್ಗೆ ಹುಡುಕಬಹುದು. ಹುಡುಕಾಟದ ಜೊತೆಗೆ, ನೀವು ಲಸಿಕೆ ಸ್ಲಾಟ್‌ಗಳನ್ನು ಸಹ ಬುಕ್ ಮಾಡಬಹುದು. ಈ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಅನುಕೂಲಕರವಾಗಿದೆ. ಏಕೆಂದರೆ ಗೂಗಲ್ ಅನ್ನು ಎಲ್ಲರೂ ಬಳಸುತ್ತಾರೆ ಮತ್ತು ಲಸಿಕೆ ಸ್ಲಾಟ್ ಬುಕ್ ಮಾಡಲು ನೀವು ಬೇರೆ ಯಾವುದೇ ಆಪ್‌ಗೆ ಹೋಗುವ ಅಗತ್ಯವಿರುವುದಿಲ್ಲ.
ಗೂಗಲ್ ನಲ್ಲಿ ಲಸಿಕೆ ಸ್ಲಾಟ್ ಹುಡುಕಿ:
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಟ್ವಿಟರ್ ಖಾತೆಯ ಮೂಲಕ ಗೂಗಲ್‌ನಲ್ಲಿ ಪರಿಚಯಿಸಿದ ಈ ಹೊಸ ಫೀಚರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಇದನ್ನು ಹೇಗೆ ಬಳಸಬಹುದು ಎಂದು ತಿಳಿಸಲಾಗಿದೆ. ಗೂಗಲ್‌ಗೆ ಹೋಗಿ ಮತ್ತು 'ನನ್ನ ಹತ್ತಿರ ಕೋವಿಡ್ ಲಸಿಕೆ' (Covid Vaccine Near Me) ಎಂದು ಸರ್ಚ್ ಮಾಡಿ. ಇದರ ನಂತರ ನಿಮ್ಮ ಹತ್ತಿರದ ಲಸಿಕೆ ಕೇಂದ್ರ ಮತ್ತು ಅಲ್ಲಿ ಲಸಿಕೆಯ ಲಭ್ಯತೆಗೆ ಸಂಬಂಧಿಸಿದ ಮಾಹಿತಿಯನ್ನು ನೀವು ಪಡೆಯುತ್ತೀರಿ. ಸ್ಲಾಟ್ ಬುಕ್ ಮಾಡಲು 'ಬುಕ್ ಅಪಾಯಿಂಟ್ಮೆಂಟ್' ಮೇಲೆ ಕ್ಲಿಕ್ ಮಾಡಿ.
The @MoHFW_INDIA has taken yet another significant initiative to enhance access to #COVID19 vaccine:
🔎 Search 'covid vaccine near me' on Google
✅ Check availability of slots & more
💉 Use 'Book Appointment' feature to book a slot
📖 More details: https://t.co/zsI9A5fkCp
— Mansukh Mandaviya (@mansukhmandviya) September 1, 2021
ಇದನ್ನೂ ಓದಿ- Google Pay ಬಳಕೆದಾರರು ಬ್ಯಾಂಕ್ ಖಾತೆಯಿಲ್ಲದೆ ಎಫ್‌ಡಿ ಸೌಲಭ್ಯ ಪಡೆಯಬಹುದು, ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ
ಕರೋನಾ ಲಸಿಕೆ (Corona Vaccine) ಲಭ್ಯತೆಯ ಮಾಹಿತಿಯೊಂದಿಗೆ ಇದುವರೆಗೆ ದೇಶದಾದ್ಯಂತ 13,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಳಕೆದಾರರಿಂದ ಸ್ಲಾಟ್‌ಗಳನ್ನು ಬುಕ್ ಮಾಡಲಾಗಿದೆ ಎಂದು ಗೂಗಲ್ ತಿಳಿಸಿದೆ.
ಇದನ್ನೂ ಓದಿ- Corona Vaccination: ಕರೋನಾ ಲಸಿಕೆ ಹಾಕುವಲ್ಲಿ ಹೊಸ ದಾಖಲೆ ಬರೆದ ಭಾರತ
ಲಸಿಕೆ ಕೇಂದ್ರಗಳ ವಿವರ:
ಗೂಗಲ್‌ನಲ್ಲಿ ಲಸಿಕೆ ಕೇಂದ್ರಗಳ ವಿವರಗಳನ್ನು ಕೂಡ ಕಾಣಬಹುದು. ಇದರಲ್ಲಿ ಒಟ್ಟು 13,000 ಸ್ಥಳಗಳಲ್ಲಿ ಲಭ್ಯವಿರುವ ಲಸಿಕೆ ಕೇಂದ್ರಗಳ ಬಗ್ಗೆ ನೀವು ಮಾಹಿತಿಯನ್ನು ಪಡೆಯುತ್ತೀರಿ. ಲಸಿಕೆ ಸ್ಲಾಟ್‌ಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ನೀವು ಸ್ಲಾಟ್‌ಗಳನ್ನು ಕೂಡ ಬುಕ್ ಮಾಡಬಹುದು. ಇದರ ಹೊರತಾಗಿ, ಕೇಂದ್ರಗಳಲ್ಲಿ ಲಭ್ಯವಿರುವ ಲಸಿಕೆ, ಡೋಸೇಜ್, ಲಸಿಕೆಯ ಬೆಲೆ, ಉಚಿತ ಅಥವಾ ಪಾವತಿ ಮುಂತಾದ ಹಲವು ಪ್ರಮುಖ ಮಾಹಿತಿಯನ್ನು ನೀವು Google ಮೂಲಕ ಪಡೆಯಬಹುದು. ಈ ವೈಶಿಷ್ಟ್ಯವನ್ನು ಮೊದಲು ಗೂಗಲ್ ಮ್ಯಾಪ್ಸ್ ಮತ್ತು ಅಸಿಸ್ಟೆಂಟ್ ನಲ್ಲಿ ಆರಂಭಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ