ನವದೆಹಲಿ: ಒಂದು ವೇಳೆ ನೀವೂ ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಡೆಬಿಟ್ ಕಾರ್ಡ್ ಅಥವಾ ATM ಕಾರ್ಡ್ ಬಳಸುತ್ತಿದ್ದಾರೆ ಈ ಬದಲಾಗಿರುವ ನಿಯಮ ನಿಮಗೂ ತಿಳಿದಿರಲಿ. ಏಕೆಂದರೆ ಇದೀಗ SBIನ ಏಟಿಎಂ (ATM) ಮೂಲಕ ದಿನದ ಅವಧಿಯಲ್ಲಿಯೂ ಕೂಡ 10,000 ಅಥವಾ ಅದಕ್ಕಿಂತ  ಹೆಚ್ಚಿನ ಮೊತ್ತವನ್ನು ಹಿಂಪಡೆಯಬೇಕಾದರೆ OTP ನಮೂದಿಸುವುದು ಕಡ್ಡಾಯವಾಗಿದೆ. ಸೆಪ್ಟೆಂಬರ್ 18 ಕ್ಕಿಂತ ಮೊದಲು ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಒಳಗೆ ನಡೆಸಲಾಗುವ ವ್ಯವಹಾರಕ್ಕೆ ಮಾತ್ರ ಇದು ಕಡ್ಡಾಯವಾಗಿತ್ತು. ಆದರೆ ಇದೀಗ ದಿನದ ಅವಧಿಯಲ್ಲಿಯೂ ಕೂಡ OTP ನಮೂದಿಸುವುದು ಕಡ್ಡಾಯವಾಗಲಿದೆ. ಸೆಪ್ಟೆಂಬರ್ 18 ಅಂದರೆ ಇಂದು ಮಧ್ಯಾಹ್ನದ ನಂತರ ಈ ವ್ಯವಸ್ಥೆ ದೇಶಾದ್ಯಂತ ಜಾರಿಯಾಗಲಿದೆ. ಇದಲ್ಲದೆ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ತಮ್ಮ ಮೊಬೈಲ್ ಸಂಖ್ಯೇಯನ್ನು ಅಪ್ಡೇಟ್ ಕೂಡ ಮಾಡಲು ಸೂಚಿಸಿದೆ.


ಇನ್ಮುಂದೆ Debit Card ಅಲ್ಲ, Watch ಬಳಸಿ ಈ ಕೆಲಸ ಮಾಡಿ, SBI ಆರಂಭಿಸಿದೆ ಈ ಅದ್ಭುತ ಸೇವೆ


COMMERCIAL BREAK
SCROLL TO CONTINUE READING

ಏಟಿಎಂ ವ್ಯವಹಾರ ಪ್ರಣಾಳಿಯನ್ನು ಸುರಕ್ಷಿತಗೊಳಿಸಲು ಹಾಗೂ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸ್ಟೇಟ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಜನವರಿ 1, 2020 ರಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಏಟಿಎಂ ನಿಂದ 10 ಸಾವಿರ ಹಣ ಹಿಂಪಡೆಯಲು ಕೂಡ OTP ಕಡ್ಡಾಯಗೊಳಿಸಿತ್ತು.  ಇದೀಗ ಈ ನಿಯಮ 24 ಗಂಟೆಗಳಿಗೆ ಅನ್ವಯಿಸಲಿದೆ. ಒಂದು OTP ಬಳಕೆಯನ್ನು ಒಂದು ವ್ಯವಹಾರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.  ಬ್ಯಾಂಕ್ ಗ್ರಾಹಕರು ಹಣ ಹಿಂಪಡೆಯಲು ಏಟಿಎಂ ಯಂತ್ರಗಳ ಸಹಾಯ ಪಡೆದುಕೊಂಡಾಗ ಏಟಿಎಂ ಸ್ಕ್ರೀನ್ ಇದೀಗ ಗ್ರಾಹಕರಿಗೆ OTP ನಮೂದಿಸಲು ಹೇಳಲಿದೆ. ಈ OTP ಯನ್ನು ಬ್ಯಾಂಕ್ ನಲ್ಲಿ ಗ್ರಾಹಕರು ನಮೂದಿಸಿರುವು ಅಧಿಕೃತ ಮೊಬೈಲ್ ಸಂಖ್ಯೆಗೆ ಮಾತ್ರ ಕಳುಹಿಸಲಾಗುವುದು. ಆದರೆ, ಈ ಸೌಕರ್ಯ ಕೇವಲ SBI ಏಟಿಎಂ ಗಳಿಗೆ ಮಾತ್ರ ಸೀಮಿತವಾಗಿದೆ.


Also Read- FDಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಿದ SBI


ಹೀಗಾಗಿ ಇನ್ಮುಂದೆ ದೇಶಾದ್ಯಂತ ಇರುವ SBI ಗ್ರಾಹಕರಿಗೆ 10,000 ಅಥವಾ ಅದಕ್ಕಿಂತ ಹೆಚ್ಚಿನ ಹಣ ಪಡೆಯಬೇಕಾದರೆ. ಅವರ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಕಾರ್ಡ್ ಪಿನ್ ನಮೂದಿಸುವುದರ ಜೊತೆಗೆ ಇನ್ಮುಂದೆ OTP ನಮೂದಿಸುವುದು ಕೂಡ ಅನಿವಾರ್ಯವಾಗಲಿದೆ. ಮೊದಲು ಈ ಸೌಲಭ್ಯ ಕೇವಲ 12ಗಂಟೆಯ ಅವಧಿಗಾಗಿ ಮಾತ್ರ ಸೀಮಿತವಾಗಿತ್ತು. ಆದರೆ, ಇನ್ಮುಂದೆ ಇದು 24 ಗಂಟೆಗಳಿಗೆ ಅನ್ವಯವಾಗಲಿದೆ.


Also Read- ತನ್ನ ಖಾತೆದಾರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ SBI