Exit Polls ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆ!
ಇಂದು ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಿದ್ದಂತೆ ರೂಪಾಯಿ ಮೌಲ್ಯ 73 ಪೈಸೆ ಏರಿಕೆ ಕಂಡಿದ್ದು, 1 ಡಾಲರ್ ಎದುರು ರೂಪಾಯಿ ಮೌಲ್ಯ 69.43 ಕ್ಕೆ ಏರಿಕೆಯಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಯ ಎಲ್ಲಾ ಹಂತದ ಮತದಾನ ಪೂರ್ಣಗೊಂಡು ಎಕ್ಸಿಟ್ ಪೋಲ್ ಅಂಕಿಅಂಶಗಳು ಪ್ರಕಟವಾದ ಬೆನ್ನಲ್ಲೇ ಸೋಮವಾರ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿದೆ.
ಸೋಮವಾರ ಬೆಳಗ್ಗೆ ರೂಪಾಯಿ ಮೌಲ್ಯ 79 ಪೈಸೆ ಏರಿಕೆ ಕಂಡು ಬಂದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 69.44 ಗೆ ತಲುಪಿದೆ.
ಆರಂಭಿಕ ವಹಿವಾಟಿನಲ್ಲಿ ಹಿಂದಿನ ಮೌಲ್ಯಕ್ಕಿಂತ ರೂಪಾಯಿ 86 ಪೈಸೆ ಏರಿಕೆಯಾಗಿ 69.36 ರೂಪಾಯಿಗಳಿಗೆ ತಲುಪಿತ್ತು. ಹಿಂದಿನ ಅವಧಿಯಲ್ಲಿ, ಪ್ರತಿ ಡಾಲರ್ ಎದುರು ರುಪಾಯಿ ಮೌಲ್ಯ 70.22ಕ್ಕೆ ಅಂತ್ಯವಾಗಿತ್ತು.