ಆರ್ಥಿಕ ವೇದಿಕೆಗೆ ರಷ್ಯಾ ನಮ್ಮನ್ನು ಆಹ್ವಾನಿಸಿರುವುದು ಗೌರವದ ಸಂಗತಿ- ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಎರಡು ದಿನಗಳ ದ್ವಿಪಕ್ಷೀಯ ಭೇಟಿಯಲ್ಲಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಶೃಂಗಸಭೆ ಮಾತುಕತೆಯಲ್ಲಿ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಎರಡು ದಿನಗಳ ದ್ವಿಪಕ್ಷೀಯ ಭೇಟಿಯಲ್ಲಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಶೃಂಗಸಭೆ ಮಾತುಕತೆಯಲ್ಲಿ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ' ಪೂರ್ವ ಆರ್ಥಿಕ ವೇದಿಕೆಗೆ ನಿಮ್ಮ ಆಹ್ವಾನ ನನಗೆ ಬಹಳ ಗೌರವದ ವಿಷಯವಾಗಿದೆ.ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹೊಸ ಆಯಾಮ ನೀಡುವ ಐತಿಹಾಸಿಕ ಸಂದರ್ಭವಿದು. ನಾಳೆ ವೇದಿಕೆಯಲ್ಲಿ ಭಾಗವಹಿಸಲು ನಾನು ಕಾಯುತ್ತಿದ್ದೇನೆ' ಎಂದು ಹೇಳಿದರು.
ತಮಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಿದ್ದಕ್ಕೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. "ನಾನು ನಿಮಗೆ ಮತ್ತು ರಷ್ಯಾದ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇದು ನಮ್ಮ ಎರಡು ದೇಶಗಳ ಜನರ ನಡುವಿನ ಸ್ನೇಹ ಸಂಬಂಧವನ್ನು ತೋರಿಸುತ್ತದೆ. ಇದು 1.3 ಬಿಲಿಯನ್ ಭಾರತೀಯರಿಗೆ ಗೌರವದ ವಿಷಯವಾಗಿದೆ ಎಂದರು.
ರಷ್ಯಾ ದೇಶವು ಭಾರತದ ಅವಿಭಾಜ್ಯ ಸ್ನೇಹಿತ ಅಂಗ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ವಾಖ್ಯಾನಿಸಿದ ಮೋದಿ 'ನಮ್ಮ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಸಹಭಾಗಿತ್ವವನ್ನು ವಿಸ್ತರಿಸಲು ನೀವು ವೈಯಕ್ತಿಕವಾಗಿ ಗಮನಹರಿಸಿದ್ದೀರಿ" ಎಂದು ತಿಳಿಸಿದರು. ಈಗಾಗಲೇ ಇಬ್ಬರು ಅವಿಭಾಜ್ಯ ಸ್ನೇಹಿತರಾಗಿ ಹಲವಾರು ಭಾರಿ ಭೇಟಿಯಾಗಿದ್ದೇವೆ. ವಿವಿಧ ವಿಷಯಗಳ ಕುರಿತಾಗಿ ದೂರವಾಣಿಯಲ್ಲಿ ನಿಮ್ಮೊಂದಿಗೆ ಮಾತನಾಡಲು ನಾನು ಯಾವತ್ತು ಹಿಂಜರಿಯಲಿಲ್ಲ ಎಂದು ತಿಳಿಸಿದರು.