ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ(Russia Ukraine War) ಮುಂದುವರೆದಿದ್ದು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಭಾರತೀಯರು ಯುದ್ಧಭೂಮಿಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ವಿರುದ್ಧ ಅಮೆರಿಕ, ಬ್ರಿಟನ್ ಸೇರದಂತೆ ಅನೇಕ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಪುಟೀನ್(Vladimir Putin) ಯುದ್ಧ ನೀತಿಯನ್ನು ಖಂಡಿಸಿರುವ ಹಲವು ರಾಷ್ಟ್ರಗಳು ಕೂಡಲೇ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿವೆ.


COMMERCIAL BREAK
SCROLL TO CONTINUE READING

ಯಾರ ಮಾತಿಗೆ ಕ್ಯಾರೆ ಎನ್ನದ ರಷ್ಯಾ ಸೇನೆಯು ಉಕ್ರೇನ್(Russia Ukraine Crisis)ಗೆ ಸೇರಿದ ಒಂದೊಂದೇ ಪ್ರದೇಶಗಳನ್ನು ಕಬ್ಜಾ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಉಕ್ರೇನ್‌ ಮೇಲಿನ ರಷ್ಯಾ ದಾಳಿಯಲ್ಲಿ ಮಂಗಳವಾರ(ಮಾ.1) ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್(Naveen Shekarappa Gyanagoudar) ಸಾವನ್ನಪ್ಪಿದ್ದಾರೆ. ಡಾಕ್ಟರ್ ಆಗುವ ಕನಸು ಕಂಡಿದ್ದ 21 ವರ್ಷದ ಪ್ರತಿಭಾವಂತ ವಿದ್ಯಾರ್ಥಿ ರಷ್ಯಾ ನಡೆಸಿದ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಉಕ್ರೇನ್ ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.


ಇದನ್ನೂ ಓದಿ: ನವೀನ್ ಸಾವಿಗೆ ರಷ್ಯಾ ಸೇನೆ ಎಷ್ಟು ಹೊಣೆಯೋ, ಬಿಜೆಪಿ ಸರ್ಕಾರವೂ ಅಷ್ಟೇ ಹೊಣೆ: ಸಿದ್ದರಾಮಯ್ಯ


‘ಮಲಿಬು’ ರಕ್ಷಣೆಗೆ ಮುಂದಾದ ಬೆಂಗಳೂರು ಯುವಕರ ತಂಡ


ಉಕ್ರೇನ್-ರಷ್ಯಾ ನಡುವಿನ ಸಮರ(Russia Ukraine War)ವು ವಿಶ್ವ ಯುದ್ಧವಾಗುವ ಆತಂಕ ಎದುರಾಗಿದೆ. ಇದುವರೆಗೆ Operation Ganga ಮೂಲಕ ಸಾವಿರಾರು ಭಾರತೀಯರನ್ನು ಉಕ್ರೇನ್ ಯುದ್ಧಭೂಮಿಯಿಂದ ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಈ ಮಧ್ಯೆ ಉತ್ತರಾಖಂಡ ಮೂಲದ ವಿದ್ಯಾರ್ಥಿಯೊಬ್ಬ ತನ್ನ ಸಾಕು ನಾಯಿ(Pet Dog)ಯನ್ನು ರಕ್ಷಿಸುವಂತೆ ಅಳಲು ತೋಡಿಕೊಂಡಿದ್ದ. ಸಾಕುನಾಯಿ ‘ಮಲಿಬು’ ಬಿಟ್ಟು ನಾನು ಭಾರತಕ್ಕೆ ಬರುವುದಿಲ್ಲವೆಂದು ಆತ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾ(Social Media)ದಲ್ಲಿ ಹರಿಬಿಟ್ಟಿದ್ದ.


ಉಕ್ರೇನ್ ನಲ್ಲಿ ರೇಡಿಯೋ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ರಿಷಭ್ ಕೌಶಿಕ್(Rishabh Kaushik), ‘ನನ್ನ ಸಾಕುನಾಯಿ ‘ಮಲಿಬು’(Malibu Pet Dog)ವನ್ನು ಬಿಟ್ಟು ನಾನೆಲ್ಲೂ ಹೋಗಲ್ಲ. ನನ್ನ ಜೊತೆಗೆ ‘ಮಲಿಬು’ವನ್ನು ರಕ್ಷಿಸಿ ಅಂತಾ ಮನವಿ ಮಾಡಿಕೊಂಡಿದ್ದ. ಸಾಕುನಾಯಿ ಜೊತೆಗೆ ರಿಷಭ್ ಇರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿತ್ತು. ಅನೇಕರು ರಿಷಭ್ ಜೊತೆಗೆ ‘ಮಲಿಬು’ವನ್ನು ರಕ್ಷಿಸುವಂತೆ ಒತ್ತಾಯಿಸಿದ್ದರು.


ಇದನ್ನೂ ಓದಿ: Russia Ukraine War: ಉಕ್ರೇನ್‌ನಿಂದ ಐದು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್


ಉಕ್ರೇನ್(Ukraine)ನ ಬಂಕರ್ ನಲ್ಲಿರುವ ಯುವಕನ ಮನವಿಗೆ ಬೆಂಗಳೂರು ಹುಡುಗರ ತಂಡವೊಂದು ಸ್ಪಂದಿಸಿದೆ. ಬೆಂಗಳೂರು ಮೂಲದ ಫೆಲ್ಕಾನ್ ಪೆಟ್ ರಿಲೊಕೇಟ್ ಎಂಬ ಸಂಸ್ಥೆಯಿಂದ ರಿಷಭ್ ಸಾಕುನಾಯಿ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ. ಅನಿಮಲ್ ಕ್ವಾರಂಟೀನ್(AQCS) ಎಂಬ ಸರ್ಕಾರಿ ಸಂಸ್ಥೆ ಜೊತೆಗೆ ರಿಷಭ್ ಜೊತೆಗೆ ‘ಮಲಿಬು’ವನ್ನು ಕರೆತರುವ ಕೆಲಸ ನಡೆಯುತ್ತಿದೆ.


ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿರುವ ರಿಷಭ್ ರನ್ನು ಕರೆತರಲು ಈಗಾಗಲೇ ಕೇಂದ್ರ ಸರ್ಕಾರದಿಂದ ಸಿದ್ಧತೆ ನಡೆದಿದೆ. ಆದರೆ ಸಾಕುನಾಯಿ(Malibu Pet Dog)ಯನ್ನು ಕರೆತರಲು ಅನುಮತಿ‌ ನೀಡಿರಲಿಲ್ಲ. ಹೀಗಾಗಿ ಆನಿಮಲ್ ಕ್ವಾರಂಟೈನ್ ಸಂಸ್ಥೆ ಜೊತೆ ಮಾತುಕತೆ ನಡೆಸಿದ ಬೆಂಗಳೂರು ಯುವಕರ ತಂಡ ರಿಷಭ್ ಜೊತೆ ‘ಮಲಿಬು’ವನ್ನೂ ಕರೆತರಲು ವ್ಯವಸ್ಥೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.