Sabarimala Police Photoshoot : ಪವಿತ್ರ ಕ್ಷೇತ್ರ ಶಬರಿಮಲೆ ‘ಸನ್ನಿಧಾನಂ’ನಲ್ಲಿ ಪೊಲೀಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮುಗಿಸಿ ಮನೆಗೆ ಹಿಂದಿರುಗುವ ವೇಳೆ 18 ಮೆಟ್ಟಿಲುಗಳ ಮೇಲೆ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ. ಇರುಮುಡಿ ಹೊತ್ತ ಭಕ್ತರಷ್ಟೇ ಈ ಮೆಟ್ಟಿಲುಗಳನ್ನು ಹತ್ತಬೇಕು ಎಂಬ ನಿಯಮಗಳನ್ನೇ ಇಲ್ಲಿ ಅಧಿಕಾರಿಗಳು ಗಾಳಿಗೆ ತೂರಿದ್ದು, ಭಕ್ತರಿಗೆ ನೋವುಂಟು ಮಾಡಿದೆ..


COMMERCIAL BREAK
SCROLL TO CONTINUE READING

ಹೌದು.. ಶಬರಿಮಲೆ ದೇವಸ್ಥಾನದಲ್ಲಿ ಇರುವ ಪವಿತ್ರವಾದ 18 ಮೆಟ್ಟಿಲುಗಳನ್ನು 'ಪತ್ತಿನೆಟ್ಟಂಪಾಡಿ' ಎಂದು ಕರೆಯಲಾಗುತ್ತದೆ. ಒಂದು ಮಂಡಲ ವೃತ ಮಾಡಿ ಚಳಿ, ಮಳೆ ಎನ್ನದೇ ಕಲ್ಲು ಮುಳ್ಳುಗಳ ಹಾದಿಯನ್ನು ದಾಟಿ ಶಬರೀಶನನ್ನು ಕಾಣಲು ಅಯ್ಯಪ್ಪ ಭಕ್ತರು 18 ಮೆಟ್ಟಿಲುಗಳನ್ನು ಹತ್ತುತ್ತಾರೆ..


ಇದನ್ನೂ ಓದಿ:ವಿದ್ಯಾರ್ಥಿಗಳೇ ಗಮನಿಸಿ.. ನಾಳೆಯಿಂದ 3 ದಿನ ಶಾಲಾ ಕಾಲೇಜುಗಳಿಗೆ ರಜೆ ! ಕಾರಣವೇನು ಗೊತ್ತೇ?


ಇರುಮುಡಿ ಇಲ್ಲದೇ ಪ್ರಧಾನ ಮಂತ್ರಿಯೂ ಸಹ ಈ ಮೆಟ್ಟಿಲುಗಳನ್ನು ಹತ್ತಲು ನಿಯಮ ಒಪ್ಪಲ್ಲ.. ಆದರೆ, ಭಕ್ತರನ್ನು ನಿಯಂತ್ರಿಸಲು, ಅಹಿತಕರ ಘಟನೆಗಳು ನಡೆಯದಂತೆ ತಡೆಯಬೇಕಿದ್ದ ಪೊಲೀಸ್‌ ಅಧಿಕಾರಿಗಳೇ ಪತ್ತಿನೆಟ್ಟಂಪಾಡಿ ಮೇಲೆ ಫೋಟೋಶೂಟ್‌ ಮಾಡಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ..


ಸಂಪ್ರದಾಯದ ಪ್ರಕಾರ, ಪುರೋಹಿತರು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಗರ್ಭಗುಡಿಗೆ ಅಭಿಮುಖವಾಗಿ ಈ ಮೆಟ್ಟಿಲುಗಳನ್ನು ಇಳಿಯುತ್ತಾರೆ. ಇದೀಗ ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ.. ಫೋಟೋಗಳೂ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..


ಇದನ್ನೂ ಓದಿ:ಶಬರಿಮಲೆ ಮಾತ್ರವಲ್ಲ; ದೇಶದ ಈ ಪ್ರಸಿದ್ಧ ದೇವಸ್ಥಾನಗಳಿಗೆ ಕೂಡ ಮಹಿಳೆಯರು ಪ್ರವೇಶಿಸುವಂತಿಲ್ಲ...! ಅಚ್ಚರಿ ಅಂದ್ರೆ ಕರ್ನಾಟಕದಲ್ಲೇ ಇದೆ ಆ ದೇಗುಲ


ದೇವಾಲಯದ ಸನ್ನಿಧಾನಂನಲ್ಲಿರುವ ಪವಿತ್ರ 18 ಮೆಟ್ಟಿಲುಗಳನ್ನು ಹತ್ತಲು ಮಾಲಾಧಾರಿಗಳಾಗಿ ಇರುಮುಡಿ ತಲೆ ಮೇಲೆ ಇರುವುದು ಅವಶ್ಯಕ. ದೇವಾಲಯದ ನಿಯಮಗಳ ಪ್ರಕಾರ ಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಪೊಲೀಸರೇ ಈ ನಿಯಮ ಉಲ್ಲಂಘಿಸಿದ್ದು ವಿಪರ್ಯಾಸ, ಸಧ್ಯ ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಜರುಗಿಸಲಾಗುತ್ತದೆ.. ಎಂಬ ಚರ್ಚೆ ನಡೆಯುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.