List of Temples are females not allowed in India: ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾಗಿ ದೇವಾಲಯಗಳನ್ನು ಪ್ರವೇಶಿಸಲು ಅವಕಾಶವಿದೆ, ಏಕೆಂದರೆ ದೇವಸ್ಥಾನಗಳಲ್ಲಿ ಎಲ್ಲರೂ ಸಮಾನರು. ಆದರೆ ಭಾರತದ ಕೆಲ ದೇವಾಲಯಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಒಂದಷ್ಟು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧವಾಗಿದ್ದರೆ, ಇನ್ನೂ ಕೆಲವಷ್ಟು ದೇಗುಲಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ದೇಶದ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾಗಿ ದೇವಾಲಯಗಳನ್ನು ಪ್ರವೇಶಿಸಲು ಅವಕಾಶವಿದೆ, ಏಕೆಂದರೆ ದೇವಸ್ಥಾನಗಳಲ್ಲಿ ಎಲ್ಲರೂ ಸಮಾನರು. ಆದರೆ ಭಾರತದ ಕೆಲ ದೇವಾಲಯಗಳಲ್ಲಿ ಅದಕ್ಕೆ ಅವಕಾಶವಿಲ್ಲ. ಒಂದಷ್ಟು ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷಿದ್ಧವಾಗಿದ್ದರೆ, ಇನ್ನೂ ಕೆಲವಷ್ಟು ದೇಗುಲಗಳಲ್ಲಿ ಪುರುಷರಿಗೆ ಪ್ರವೇಶವಿರುವಿಲ್ಲ.
ಈ ಪದ್ಧತಿಗೆ ಅನೇಕ ಕಾರಣಗಳಿವೆ. ಇನ್ನು ಕೇರಳದಲ್ಲಿರುವ ಶಬರಿಮಲೆ ದೇಗುಲದ ಹೊರತಾಗಿ, ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಅಂತಹ ಕೆಲವು ದೇವಾಲಯಗಳ ಬಗ್ಗೆ ತಿಳಿಯೋಣ.
ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ: ಪದ್ಮನಾಭಸ್ವಾಮಿ ದೇವಾಲಯವು ಕೇರಳ ರಾಜ್ಯದ ತಿರುವನಂತಪುರಂನಲ್ಲಿರುವ ವಿಷ್ಣುವಿನ ಪ್ರಸಿದ್ಧ ದೇವಾಲಯವಾಗಿದೆ. ಭಾರತದ ಪ್ರಮುಖ ವೈಷ್ಣವ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯವು ತಿರುವನಂತಪುರದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ದೇವಾಲಯವು ಭಗವಾನ್ ವಿಷ್ಣುವಿನ ಭಕ್ತರ ಪ್ರಮುಖ ಪೂಜಾ ಸ್ಥಳವಾಗಿದೆ. ವಿಷ್ಣುವಿನ ಪ್ರತಿಮೆ ಈ ಸ್ಥಳದಲ್ಲೇ ಮೊದಲು ಕಂಡುಬಂದಿತ್ತು ಎಂದು ನಂಬಲಾಗಿದೆ, ಆನಂತರ ಈ ದೇವಾಲಯವನ್ನು ಸ್ಥಾಪಿಸಲಾಯಿತು. ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇನ್ನು ಈ ದೇವಾಲಯವನ್ನು ಶ್ರೀಮಂತ ದೇವಾಲಯ ಎಂದೂ ಕರೆಯುತ್ತಾರೆ.
ಶಬರಿಮಲೆ ಶ್ರೀ ಅಯ್ಯಪ್ಪ, ಕೇರಳ: ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯವು ಕೇರಳದ ಅತ್ಯಂತ ಪ್ರಾಚೀನ ಮತ್ತು ಭವ್ಯವಾದ ದೇವಾಲಯಗಳಲ್ಲಿ ಒಂದಾಗಿದೆ. ಅಯ್ಯಪ್ಪ ದೇಗುಲಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದೇವಾಲಯದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.
ಕಾರ್ತಿಕೇಯ ದೇವಸ್ಥಾನ, ಪುಷ್ಕರ್, ರಾಜಸ್ಥಾನ: ರಾಜಸ್ಥಾನದ ಪ್ರಸಿದ್ಧ ಯಾತ್ರಾಸ್ಥಳವಾದ ಪುಷ್ಕರ್ ಸಹಲ್ ಬ್ರಹ್ಮನ ಏಕೈಕ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿರುವ ಕಾರ್ತಿಕೇಯ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮುಕ್ತಗಿರಿ ಜೈನ ದೇವಾಲಯ, ಮಧ್ಯಪ್ರದೇಶ: ಮುಕ್ತಗಿರಿ ಜೈನ ದೇವಾಲಯವು ಮಧ್ಯಪ್ರದೇಶ ರಾಜ್ಯದ ಕುನಾ ನಗರದಲ್ಲಿದೆ. ಇದು ಜೈನ ಧರ್ಮದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ಯಾವುದೇ ಮಹಿಳೆ ಈ ದೇವಾಲಯವನ್ನು ಪ್ರವೇಶಿಸುವಂತಿಲ್ಲ. ದೇವಸ್ಥಾನಕ್ಕೆ ಇಂತಹ ವೇಷಭೂಷಣ ಸಂಪೂರ್ಣ ನಿಷೇಧವಿದೆ.
ಮಾವ್ಲಿ ಮಾತಾ ದೇವಸ್ಥಾನ, ಛತ್ತೀಸ್‌ಗಢ: ಈ ದೇವಾಲಯವು ಛತ್ತೀಸ್‌ಗಢದಲ್ಲಿದ್ದು, ಬಹಳ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯದ ವಿಶಿಷ್ಟ ಸಂಪ್ರದಾಯದ ಅಡಿಯಲ್ಲಿ, ಮಹಿಳೆಯರಿಗೆ ಇಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ, ಹೀಗಾಗಿ ಮಹಿಳೆಯದು ಈ ದೇವಾಲಯಕ್ಕೆ ಹೊರಗಿನಿಂದ ಮಾತ್ರ ಭೇಟಿ ನೀಡಬಹುದು. 400 ವರ್ಷಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಪುರುಷರು ಮಾತ್ರ ಒಳಗೆ ಹೋಗಿ ದರ್ಶನ ಪಡೆಯಬಹುದು.
ಶನಿ ಶಿಂಗ್ನಾಪುರ ದೇವಸ್ಥಾನ, ಮಹಾರಾಷ್ಟ್ರ: ಶನಿ ಶಿಂಗ್ನಾಪುರ ದೇವಾಲಯವು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿದೆ. ಇಲ್ಲಿಯೂ ಮಹಿಳೆಯರು ಒಳಗೆ ಹೋಗಿ ದರ್ಶನ ಮಾಡುವಂತಿಲ್ಲ ಹಾಗೂ ಹೊರಗಿನಿಂದ ದರ್ಶನ ಪಡೆಯಬೇಕೆಂಬ ನಿಯಮವಿದೆ.
ಅಣ್ಣಪ್ಪ ಬೆಟ್ಟ, ಧರ್ಮಸ್ಥಳ, ಕರ್ನಾಟಕ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಈ ಬೆಟ್ಟವಿದೆ. ಇಲ್ಲಿಗೆ ಕೂಡ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.