ಮಹಾರಾಷ್ಟ್ರದ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು 5000 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ಘೋಷಿಸಿದೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆರ್‌ಆರ್‌ಪಿ ಎಲೆಕ್ಟ್ರಾನಿಕ್ ಸೆಮಿಕಂಡಕ್ಟರ್ ತಯಾರಿಕಾ ಘಟಕ ಇದಾಗಿದೆ. 


ಇದನ್ನು ಓದಿ : IPL 2024 : ಶಿವಂ ದುಬೆಯ ಸಿಕ್ಸ್ ಗಳ ಸುರಿಮಳೆ, ಜಿಟಿ ಗೆ 207ರನ್ ಗಳ  ಟಾರ್ಗೆಟ್


ನವೀ ಮುಂಬೈನಲ್ಲಿರುವ 25000 ಚದರ ಅಡಿ ವಿಸ್ತೀರ್ಣದ ಕಂಪನಿಯ ಜಾಗದಲ್ಲಿ ಈ ಘೋಷಣೆ ಕುರಿತು ಮಾಹಿತಿ ಹೊರಬಂದಿದೆ.  ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಕಂಪನಿಯ ಸಂಸ್ಥಾಪಕ, ನಿವೃತ್ತ ಪರಮಾಣುವಿಜ್ಞಾನಿ ಅನಿಲ್ ಕಾಕೋಡ್ಕರ್ ಮತ್ತು ಕಂಪನಿಯ ಅಧ್ಯಕ್ಷ ಹಾಗೂ ಸಿಇಓ ರಾಜೇಂದ್ರ ಚೋಡಂಕರ್ ಇದ್ದರು.


ಈ ತಯಾರಿಕಾ ಘಟಕದಲ್ಲಿ ಸರ್ಕಾರದ ಸಬ್ಸಿಡಿ ಯೋಚನೆಗಳನ್ನು ಯೋಜನಾಭದ್ಧವಾಗಿ ಬಳಸಿಕೊಳ್ಳಲಾಗುವುದು ಮತ್ತು ಆಟೋಮೊಬೈಲ್, ಇಂಧನ, ಎಲೆಕ್ಟ್ರಾನಿಕ್ಸ್ ಹಾಗೂ ಕೈಗಾರಿಕೆಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಕೆಲಸ ಮಾಡಲಿದೆ, ಸಚಿನ್ ತೆಂಡೂಲ್ಕರ್ ಅವರ ಈ ಹೂಡಿಕೆಯು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿರಲಿದೆ ಎಂದು ಕಂಪನಿ ತಿಳಿಸಿದೆ.


ಇದನ್ನು ಓದಿ : Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ


ಈ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಒಂದು ಅತ್ಯುತ್ತಮ ಕಂಪನಿಗಳಲ್ಲಿ ಆರ್ ಆರ್ ಪಿ ಒಂದಾಗಲಿದೆ ಮತ್ತು ಈ ಕಂಪನಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಚಿನ್ ತೆಂಡೂಲ್ಕರ್ ಅಂಥವರ ಯೋಚನಾಭತಾ ಹೂಡಿಕೆದಾರರು ಬಹಳ ಸಹಾಯಕವಾಗಿರುತ್ತದೆ ಎಂದು ಅಧ್ಯಕ್ಷ ಹಾಗೂ ಸಿಇಓ ರಾಜೇಂದ್ರ ತಿಳಿಸಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.