ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದಲ್ಲಿ  ನೀವು ಉಳಿತಾಯ ಖಾತೆ ಹೊಂದಿದ್ದರೆ ಈ ಮಾಹಿತಿಯು ನಿಮಗೆ ಮುಖ್ಯವಾಗಿದೆ. ಕೊರೊನಾವೈರಸ್ (Coronavirus)   ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‍ಡೌನ್ (Lockdown) ಜಾರಿಗೆ ಬರುವ ಮೊದಲು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿ ಕಡಿತವನ್ನು ಘೋಷಿಸಿತು. ಈ ಪ್ರಕಟಣೆ ಏಪ್ರಿಲ್ 15 ಬುಧವಾರದಿಂದ ಜಾರಿಗೆ ಬಂದಿದೆ. ಈ ಪ್ರಕಟಣೆಯೊಂದಿಗೆ ಈಗ ಖಾತೆದಾರರಿಗೆ 0.25% ಕಡಿಮೆ ಬಡ್ಡಿ ಸಿಗುತ್ತದೆ. ಆದರೆ ಬ್ಯಾಂಕ್ ತನ್ನ ಎಟಿಎಂ (ATM) ಕಾರ್ಡ್ ಹೊಂದಿರುವವರಿಗೆ ದೊಡ್ಡ ಪರಿಹಾರವನ್ನೂ ನೀಡಿದೆ.


ವಂಚಕರಿಂದ ಹೊಸ ರೀತಿಯಲ್ಲಿ ಮೋಸ: ಗ್ರಾಹಕರಿಗೆ ಎಸ್‌ಬಿಐ ಅಲರ್ಟ್


COMMERCIAL BREAK
SCROLL TO CONTINUE READING

ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದ ಬ್ಯಾಂಕ್ :
ಇಂದಿನಿಂದ ಖಾತೆದಾರರು ತಮ್ಮ ಉಳಿತಾಯ ಖಾತೆಯಲ್ಲಿ ಶೇಕಡಾ 2.75 ರಷ್ಟು ಬಡ್ಡಿಯನ್ನು ಪಡೆಯುತ್ತಾರೆ ಎಂದು ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಬ್ಯಾಂಕುಗಳು ಸಾಕಷ್ಟು ಹಣವನ್ನು ಹೊಂದಿರುವುದರಿಂದ ಉಳಿತಾಯ ಠೇವಣಿ ಬಡ್ಡಿದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.


ಈ ಏಳು ನಿಯಮಗಳನ್ನು ಪಾಲಿಸಿದರೆ ONLINE ವಂಚನೆಯಿಂದ ಪಾರಾಗಬಹುದು


ಗೃಹ ಸಾಲದ ದರವೂ ಕಡಿಮೆ:
ಎಸ್‌ಬಿಐ ಕನಿಷ್ಠ ವೆಚ್ಚ ಆಧಾರಿತ ಸಾಲ ಬಡ್ಡಿದರದಲ್ಲಿ (ಎಂಸಿಎಲ್‌ಆರ್) 0.35% ಕಡಿತವನ್ನು ಘೋಷಿಸಿದೆ. ಇದು ನಿಮ್ಮ ಗೃಹ ಸಾಲದ ಇಎಂಐ ಅನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ 30 ವರ್ಷಗಳ ಅವಧಿಯ ಗೃಹ ಸಾಲದ ಮಾಸಿಕ ಕಂತು 1 ಲಕ್ಷ ರೂ.ಗೆ 24 ರೂಪಾಯಿಗಳಷ್ಟು ಕಡಿಮೆಯಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.


ಲಾಕ್‌ಡೌನ್‌ ವೇಳೆ ಹಣದ ತೊಂದರೆ ಎದುರಾಗಿದೆಯೇ? ಈ ಬ್ಯಾಂಕುಗಳಿಂದ ಸಿಗಲಿದೆ ಸಾಲ


ಏಪ್ರಿಲ್ 15 ರಿಂದ ಎಸ್‌ಬಿಐ ಉಳಿತಾಯ ಖಾತೆ ಬಡ್ಡಿದರ:
ಮಾರ್ಚ್ 11 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಉಳಿತಾಯ ಖಾತೆಗಳ ಬ್ಯಾಂಕ್ ಬಡ್ಡಿದರವನ್ನು ಎಲ್ಲಾ ಗ್ರಾಹಕರಿಗೆ ಶೇಕಡಾ 3ಕ್ಕೆ ಇಳಿಸಿತು. ಹಿಂದೆ ಇದು 1 ಲಕ್ಷದವರೆಗಿನ ಬಾಕಿ ಮೊತ್ತದ ಮೇಲೆ 3.25 % ಮತ್ತು 1 ಲಕ್ಷಕ್ಕಿಂತ ಹೆಚ್ಚಿನದರಲ್ಲಿ 3 ಪ್ರತಿಶತಕ್ಕಿಂತ ಹೆಚ್ಚಿತ್ತು. ಈಗ ಅದು ಎಲ್ಲಾ ಉಳಿತಾಯದ ಮೇಲೆ  2.75 % ಬಡ್ಡಿ ದೊರೆಯಲಿದೆ.


ಎಟಿಎಂ ಕಾರ್ಡ್ ಹೊಂದಿರುವವರಿಗೆ ದೊಡ್ಡ ಪರಿಹಾರ:
ಆದಾಗ್ಯೂ ಬ್ಯಾಂಕ್ ತನ್ನ ಎಟಿಎಂ ಕಾರ್ಡ್ ಹೊಂದಿರುವವರಿಗೆ ದೊಡ್ಡ ಪರಿಹಾರವನ್ನು ನೀಡಿದೆ, ಜೂನ್ 30ರವರೆಗೆ ಎಟಿಎಂಗಳಲ್ಲಿ ಉಚಿತ 5 ವಹಿವಾಟಿನ ನಂತರ ನಡೆಸಲಾಗುವ ವಹಿವಾಟಿಗೆ ಯಾವುದೇ ಸೇವಾ ಶುಲ್ಕ ವಿಧಿಸದಿರಲು ಬ್ಯಾಂಕ್ ನಿರ್ಧರಿಸಿದೆ.