ನವದೆಹಲಿ: SBI Latest News - ಕೊರೊನಾ ವೈರಸ್ ನ ಎರಡನೇ ಅಲೆ ಕ್ರಮೇಣ ಕಡಿಮೆಯಾಗುತ್ತಿದೆ. ಹಲವು ರಾಜ್ಯಗಳು ಜಾರಿಗೊಳಿಸಿದ್ದ ನಿರ್ಬಂಧಗಳಲ್ಲಿ ಸಡಿಲಿಕೆಯನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಏತನ್ಮಧ್ಯೆ ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಕೂಡ ತನ್ನ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿದೆ. ಈ ಮೊದಲು SBI ಶಾಖೆಗಳು ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಈ ಅವಧಿಯನ್ನು 2 ಗಂಟೆಗಳವರೆಗೆ ಹೆಚ್ಚಿಸಲಾಗಿದ್ದು, ಇದೀಗ ಬ್ಯಾಂಕ್ ಶಾಖೆಗಳು ಸಂಜೆ 4ರವರೆಗೆ ತೆರದಿರಲಿವೆ.


SBI Changes Branch Timings)


COMMERCIAL BREAK
SCROLL TO CONTINUE READING

ಇದನ್ನೂ ಓದಿ- Banking Alert : ನಿಮ್ಮ ಖಾತೆಗೆ ನಿಮ್ಮದಲ್ಲದ ದೊಡ್ಡ ಮೊತ್ತದ ಹಣ ಕ್ರೆಡಿಟ್ ಆದರೆ ಏನು ಮಾಡಬೇಕು?


ಕ್ಯಾಶ್ ಹಿಂಪಡೆತದ ನಿಯಮದಲ್ಲಿ ಬದಲಾವಣೆ
ಇದಕ್ಕೂ ಮೊದಲು SBI ತನ್ನ ಗ್ರಾಹಕರಿಗೆ ಅಧಿಸೂಚನೆ ಜಾರಿಗೊಳಿಸಿ, ಕ್ಯಾಶ್ ಹಿಂಪಡೆತಡ ನೂತನ ನಿಯಮಗಳ ಕುರಿತು ಮಾಹಿತಿ ನೀಡಿತ್ತು. ಈ ನಿಯಮಗಳ ಅನುಸಾರ, ನೋಂ-ಹೋಮ್ ಬ್ರಾಂಚ್ ಗಳಲ್ಲಿ ನಗದು ಹಿಂಪಡೆತಡ ಮಿತಿಯನ್ನು ಹೆಚ್ಚಿಸಿತ್ತು. ಹೀಗಾಗಿ ಗ್ರಾಹಕರು ಒಂದು ದಿನದಲ್ಲಿ 25,000 ರೂ.ಗಳವರೆಗೆ ಹಣವನ್ನು ಹಿಂಪಡೆಯಬಹುದಾಗಿದೆ.


ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO


ಒಂದು ದಿನದಲ್ಲಿ ರೂ.25,000 ವಿಥ್ ಡ್ರಾ ಮಾಡಬಹುದು
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದ್ದ ಬ್ಯಾಂಕ್, 'ಕೊರೊನಾ ಮಹಾಮಾರಿ ಕಾಲದಲ್ಲಿ ತನ್ನ ಗ್ರಾಹಕರನ್ನು ಬೆಂಬಲಿಸಲು SBI ಚೆಕ್ ಹಾಗೂ ವಿಥ್ ಡ್ರಾವಲ್ ಫಾರ್ಮ್ ಮೂಲಕ ನಾನ್-ಹೋಮ್ ಬ್ರಾಂಚ್ ಹಣ ಹಿಂಪಡೆತದ ಮಿತಿಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ಗ್ರಾಹಕರು ತಮ್ಮ ಹತ್ತಿರದ ಬ್ರಾಂಚಗೆ ಖುದ್ದು ಭೇಟಿ ನೀಡುವ ಮೂಲಕ ಒಂದು ದಿನದಲ್ಲಿ ತಮ್ಮ ಖಾತೆಯಿಂದ ರೂ.25,000 ಹಿಂಪಡೆಯಬಹುದು' ಎಂದು ಹೇಳಿತ್ತು.


ಇದನ್ನೂ ಓದಿ-ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.