EPFO Good News: ಜುಲೈ ತಿಂಗಳಿನಲ್ಲಿ ಸಿಗುತ್ತಾ ಬಡ್ಡಿ? EPFOಗೆ ಸಿಕ್ತು ಕಾರ್ಮಿಕ ಸಚಿವಾಲಯದ ಅನುಮತಿ

EPFO Latest News: ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ (EPFO) ವತಿಯಿಂದ ಆರ್ಥಿಕ ವರ್ಷ 2021ರ ಶೇ.8.5ರಷ್ಟು ಬಡ್ಡಿದರ ಜುಲೈ ತಿಂಗಳ ಅಂತ್ಯದವರೆಗೆ ಸಿಗುವ ಸಾಧ್ಯತೆ ಇದೆ.

Written by - Nitin Tabib | Last Updated : Jun 1, 2021, 03:30 PM IST
  • PF ಚಂದಾದಾರರಿಗೊಂದು ಸಂತಸದ ಸುದ್ದಿ ಪ್ರಕಟ.
  • ಜುಲೈ ಅಂತ್ಯದವರೆಗೆ PF ಬಡ್ಡಿ ನಿಮ್ಮ ಖಾತೆಗೆ ಬರುವ ಸಾಧ್ಯತೆ.
  • ಈಗಾಗಲೇ EPFO ಪ್ರಸ್ತಾವನೆಗೆ ಕಾರ್ಮಿಕ ಸಚಿವಾಲಯದ ಅನುಮತಿ ದೊರೆತಿದೆ ಎಂದ ಮೂಲಗಳು.
EPFO Good News: ಜುಲೈ ತಿಂಗಳಿನಲ್ಲಿ ಸಿಗುತ್ತಾ ಬಡ್ಡಿ? EPFOಗೆ ಸಿಕ್ತು ಕಾರ್ಮಿಕ ಸಚಿವಾಲಯದ ಅನುಮತಿ title=
EPFO Latest News (File Photo)

EPFO Latest News: PF ಅಡಿ ಬರುವ ದೇಶದ ಸುಮಾರು 6 ಕೋಟಿ ನೌಕರರ ಪಾಲಿಗೆ ಸಂತಸಸ ಸುದ್ದಿಯೊಂದು ಪ್ರಕಟವಾಗಿದೆ. ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ (EPFO)ವತಿಯಿಂದ ಆರ್ಥಿಕ ವರ್ಷ 2021ರ ಶೇ.8.5ರಷ್ಟು ಬಡ್ಡಿದರ ಜುಲೈ ತಿಂಗಳ ಅಂತ್ಯದವರೆಗೆ ಸಿಗುವ ಸಾಧ್ಯತೆ ಇದೆ. ಈ ಹಣವನ್ನು ನೇರವಾಗಿ ನೌಕರರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಬಡ್ಡಿಯನ್ನು ಪಾವತಿಸಲು ಈಗಾಗಲೇ ಕಾರ್ಮಿಕ ಸಚಿವಾಲಯದ (Labour Ministry) ಅನುಮತಿ ದೊರೆತಿದ್ದು, ಶೀಘ್ರದಲ್ಲಿಯೇ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಈ ಬಾರಿ ಕಾಯಬೇಕಾಗಿಲ್ಲ
ಕಳೆದ ವರ್ಷ ಅಂದರೆ 2019-20ರ ಬಡ್ಡಿ ದರ ಪಡೆಯಲು ಚಂದಾದಾರರು 8 ರಿಂದ 10 ತಿಂಗಳು ಕಾಯಬೇಕಾಗಿತ್ತು.  ಆರ್ಥಿಕ ವರ್ಷ 2020-21ರಲ್ಲಿ EPFO ತನ್ನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಇದಲ್ಲದೆ, EPFO ಕೊವಿಡ್-19 ಎರಡನೇ ಅಲೆಯ (Coronavirus Second Wave) ಹಿನ್ನೆಲೆ ಚಂದಾದಾರರಿಗೆ (PF Subscribers) ನೆರವು ಒದಗಿಸುವ ನಿಟ್ಟಿನಲ್ಲಿ ಎರಡನೇ ಬಾರಿಗೆ ನಾನ್-ರಿಫಂಡೆಬಲ್ ಅಡ್ವಾನ್ಸ್ (Non-Refundable Covid-19 Advance) ಪಡೆದುಕೊಳ್ಳಲು ಅನುಮತಿ ನೀಡಿದೆ. 

ಇದನ್ನೂ ಓದಿ-'Patient Su': ಸಿಕ್ ಹಾಕೊಂಡ್ಲು 'ಪೇಶಂಟ್ ಸೂ', ಇನ್ನು ಚೀನಾ 'ಖೇಲ್ ಖತಂ'

ಮಾರ್ಚ್ 4 ರ ಸಭೆಯಲ್ಲಿ ಬಡ್ಡಿ ದರ ನಿಗದಿಪಡಿಸಲಾಗಿತ್ತು
ಇದಕ್ಕೂ ಮೊದಲು, EPFO ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 2020-21ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿಯ (Provident Fund) ಮೇಲಿನ ಬಡ್ಡಿದರವನ್ನು ಶೇ.8.5 ರಷ್ಟೇ ಕಾಯ್ದಿರಿಸಿದೆ. ಮಾರ್ಚ್ 4 ರಂದು ಶ್ರೀನಗರದಲ್ಲಿ ನಡೆದ ಸಭೆಯಲ್ಲಿ ಪಿಎಫ್ ಮೇಲಿನ ಶೇ 8.5 ರಷ್ಟು ಬಡ್ಡಿ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ-ಮೊಟ್ಟಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾದ ವೈರಸ್ ನ H10N3 ಸ್ಟ್ರೆನ್

ನಿರ್ಧಾರದ ಪ್ರಮುಖಾಂಶಗಳು
>> ಜುಲೈವರೆಗೆ ಎಲ್ಲಾ ಖಾತೆದಾರರಿಗೆ EPFO ಬಡ್ಡಿ ಸಿಗಲಿದೆ (PF Interest): ಮೂಲಗಳು
>> FY21 ನಲ್ಲಿ ಪ್ರಾವಿಡೆಂಟ್ ಫಂಡ್ ಮೇಲೆ ಶೇ.8.5 ರಷ್ಟು ಬಡ್ಡಿ ಸಿಗಲಿದೆ.
>> ಕೇಂದ್ರ ಕಾರ್ಮಿಕ ಸಚಿವಾಲಯದ ಅನುಮೋದನೆ, ಶೀಘ್ರವೇ ಪ್ರಕ್ರಿಯೆ ಆರಂಭ: ಮೂಲಗಳು
>> ನೌಕರರ ಖಾತೆಗೆ ಶೀಘ್ರದಲ್ಲಿಯೇ ಈ ಹಣ ವರ್ಗಾವಣೆಗೆ ಸಿದ್ಧತೆ ಆರಂಭ: ಮೂಲಗಳು .
>> FY20ರ ಬಡ್ಡಿ ಹಲವು ಚಂದಾದಾರರಿಗೆ 8 ರಿಂದ 10 ತಿಂಗಳ ಬಳಿಕ ಸಿಕ್ಕಿತ್ತು.
>> ಶೇ.8.5 ರ ಬಡ್ಡಿದರ ಕಳೆದ 7 ವರ್ಷಗಳ ಅತ್ಯಂತ ಕನಿಷ್ಠ ಬಡ್ಡಿ ದರವಾಗಿದೆ.
>> ದೇಶದಲ್ಲಿ ಸುಮಾರು 6.44 ಕೋಟಿ ನೌಕರರು PF ಪರಿಧಿಯಲ್ಲಿ ಬರುತ್ತಾರೆ.
>> ನಾನ್-ರಿಫಂಡೆಬಲ್ ಹಣ ಪಡೆಯಲು ಅನುಮತಿ ನೀಡಲಾಗಿದೆ.
>> ಕೊವಿಡ್-19 ಹಿನ್ನೆಲೆ ಚಂದಾದಾರರಿಗೆ ನೆರವು ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ-Jackky Bhagnani ವಿರುದ್ಧ ರೇಪ್ ಆರೋಪ, 9 ಜನರ ಮೇಲೆ FIR ದಾಖಲಿಸಿದ ಮಾಡೆಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News