ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD) ಖಾತೆದಾರರಿಗೆ ಸೇವಾ ಶುಲ್ಕ ಪರಿಷ್ಕರಣೆ ಯನ್ನು ಘೋಷಿಸಿದ್ದು, ಅದು ಮುಂದಿನ ವಾರದಿಂದ (ಜುಲೈ 1) ಪ್ರಾರಂಭವಾಗಲಿದೆ.


COMMERCIAL BREAK
SCROLL TO CONTINUE READING

ನಗದು ಹಿಂಪಡೆಯುವಿಕೆಗಾಗಿ, ಶಾಖೆಗಳಲ್ಲಿ ಶುಲ್ಕಗಳನ್ನು 4 ಉಚಿತ ನಗದು ಹಿಂಪಡೆಯುವ ವಹಿವಾಟುಗಳನ್ನು (ಬ್ರಾಂಚ್ ಮತ್ತು ಎಟಿಎಂ ಸೇರಿದಂತೆ) ಮೀರಿ ವಸೂಲಿ ಮಾಡಲಾಗುತ್ತದೆ ಮತ್ತು ಎಟಿಎಂ(ATM Cash Withdrawal)ಗಳಲ್ಲಿ ಶುಲ್ಕಗಳನ್ನು 4 ಉಚಿತ ನಗದು ಹಿಂಪಡೆಯುವ ವಹಿವಾಟು (ಎಟಿಎಂ ಮತ್ತು ಶಾಖೆ ಸೇರಿದಂತೆ) ಮೀರಿ ವಸೂಲಿ ಮಾಡಲಾಗುತ್ತದೆ.ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ ಎಂದು ಎಸ್ ಬಿಐ ತಿಳಿಸಿದೆ.


ಇದನ್ನೂ ಓದಿ : ಮದುವೆ ಮುರಿಯಲು ಕಾರಣವಾಯ್ತು ಒಂದು ಸನ್ ಗ್ಲಾಸ್..!


ಈ ಎಸ್ ಬಿಐ(State Bank of India) ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆ, ಚೆಕ್ ಬುಕ್, ವರ್ಗಾವಣೆ ಮತ್ತು ಇತರ ಹಣಕಾಸು ಯೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಿಗೆ ಸಂಬಂಧಿಸಿವೆ.


ಇದನ್ನೂ ಓದಿ : Ravi Shankar Prasad : ಐಟಿ ಸಚಿವ ರವಿ ಶಂಕರ್ ಪ್ರಸಾದ್‌ ಟ್ವಿಟರ್ ಅಕೌಂಟ್ ಲಾಕ್..!


ನಗದು ಹಿಂಪಡೆಯುವಿಕೆಗಾಗಿ ಬಿಎಸ್ ಬಿಡಿ(Basic Savings Bank Deposit) ಖಾತೆದಾರರು ಈ ಶುಲ್ಕಗಳನ್ನು ಅನುಸರಿಸಬೇಕಾಗುತ್ತದೆ :


ಇದನ್ನೂ ಓದಿ : ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಹುದ್ದೆ ಅಲಂಕರಿಸಲು ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ


- ಬ್ರಾಂಚ್ ಚಾನೆಲ್ /ಎಟಿಎಂನಲ್ಲಿ ಪ್ರತಿ ನಗದು ಹಿಂಪಡೆಯುವ ವಹಿವಾಟಿಗೆ ರೂ 15 ಮತ್ತು GST(Goods and Services Tax).


- ಎಸ್ ಬಿಐ ಎಟಿಎಂ(SBI ATM)ಗಳು: ರೂ 15 +GST


- ಇತರ ಬ್ಯಾಂಕ್(Banks) ಗಳ ಎಟಿಎಂಗಳು: ರೂ 15 + GST


ಇದನ್ನೂ ಓದಿ : EPFO: ನಿಮ್ಮ ಖಾತೆ ಈ ಬ್ಯಾಂಕುಗಳಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ


- ಚೆಕ್ ಬುಕ್(Cheque Book) ಗೆ ಈ ಕೆಳಗಿನ ಶುಲ್ಕಗಳನ್ನು ವಿಧಿಸಲಾಗುತ್ತದೆ. ಅಂದರೆ ಮೊದಲ 10 ಚೆಕ್ ಗಳು ಒಂದು ಆರ್ಥಿಕ ವರ್ಷದಲ್ಲಿ ಉಚಿತವಾಗಿದ್ದು, ತದನಂತರ ಚೆಕ್ ಬುಕ್ ರೂ. 40/- + GST


- 25 ಚೆಕ್ ಬುಕ್ ರೂ. 75/- + GST ತುರ್ತು ಚೆಕ್ ಬುಕ್ ರೂ. 50/- + 10 GST. ಹಿರಿಯ ನಾಗರಿಕ ಗ್ರಾಹಕರಿಗೆ ವಿನಾಯಿತಿ ನೀಡಲಾಗಿದೆ.


ಇದನ್ನೂ ಓದಿ : Impact Feature: ಲಕ್ ಬೈ ಚಾನ್ಸ್ ಮಾರಾಟದಲ್ಲಿ ಭಾಗವಹಿಸಿ, 2899 ರೂ.ಗಳಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ


ಬ್ರಾಂಚ್ ಚಾನೆಲ್/ಎಟಿಎಂ/ಸಿಡಿಎಂ/ನಲ್ಲಿ ನ ಹಣಕಾಸು ಯೇತರ ವಹಿವಾಟುಗಳು ಎಸ್ ಬಿಐ(SBI) ಮತ್ತು ಇತರ ಬ್ಯಾಂಕ್ ಗಳೆರಡರಲ್ಲೂ ಬಿಎಸ್ ಬಿಡಿ ಖಾತೆದಾರರಿಗೆ ಉಚಿತವಾಗಿರುತ್ತದೆ. ಬಿಎಸ್ ಬಿಡಿ ಖಾತೆದಾರರ ವರ್ಗಾವಣೆ ವಹಿವಾಟುಗಳು ಶಾಖೆ ಮತ್ತು ಪರ್ಯಾಯ ಚಾನೆಲ್ ಗಳಿಗೆ ಉಚಿತವಾಗಿರುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.