ಮದುವೆ ಮುರಿಯಲು ಕಾರಣವಾಯ್ತು ಒಂದು ಸನ್ ಗ್ಲಾಸ್..!

ಔರಯ್ಯ ನಿವಾಸಿ ಅರ್ಜುನ್ ಸಿಂಗ್ ತನ್ನ ಮಗಳು ಅರ್ಚನಾ ಮದುವೆಯನ್ನು ಶಿವಂ ಎಂಬ ಹುಡುಗನೊಂದಿಗೆ ಮದುವೆ  ನಿಶ್ಚಯ ಮಾಡಿದ್ದರು. ಅದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಶಿವಂ ವಿದ್ಯಾವಂತ ಎಂದು ಹೇಳಿಕೊಂಡಿದ್ದರಿಂದ, ತಮ್ಮ ಮಗಳನ್ನು ಶಿವಂಗೆ ಕೊಡಲು ಅರ್ಚನಾ ಹೆತ್ತವರು ಕೂಡಾ ಒಪ್ಪಿದ್ದರು.  

Written by - Ranjitha R K | Last Updated : Jun 25, 2021, 05:07 PM IST
  • ಮದುವೆ ದಿಬ್ಬಣದಲ್ಲಿ ಸನ್ ಗ್ಲಾಸ್ ಹಾಕಿಕೊಂಡು ಬಂದ ವರ
  • ಶಾಸ್ತ್ರ ನಡೆಯುವಾಗಲೂ ಸನ್ ಗ್ಲಾಸ್ ಹಾಕಿಕೊಂಡೇ ಇದ್ದ ವರ
  • ಮದುವೆ ಮುರಿಯಲು ಕಾರಣವಾಯಿತು ಇದೇ ಸನ್ ಗ್ಲಾಸ್
ಮದುವೆ ಮುರಿಯಲು ಕಾರಣವಾಯ್ತು ಒಂದು ಸನ್ ಗ್ಲಾಸ್..! title=
ಮದುವೆ ದಿಬ್ಬಣದಲ್ಲಿ ಸನ್ ಗ್ಲಾಸ್ ಹಾಕಿಕೊಂಡು ಬಂದ ವರ (photo india.com)

ನವದೆಹಲಿ : ಸನ್ ಗ್ಲಾಸ್ ಹಾಕುವುದು ಎಂದರೆ ಸ್ಟೈಲಿಶ್ ಲುಕ್ ನೀಡುತ್ತದೆ. ಆದರೆ ಇಲ್ಲಿ ಸನ್ ಗ್ಲಾಸ್ ಹಾಕಿರುವುದೇ ಮದುವೆ ಮುರಿಯಲು ಕಾರಣವಾಗಿದೆ. ಹೌದು ಇಲ್ಲಿ ಮದುಮಗ ದಿಬ್ಬಣದೊಂದಿಗೆ ಬರುವಾಗ ಸನ್ ಗ್ಲಾಸ್ ಹಾಕಿಕೊಂಡೇ ಬಂದಿದ್ದಾನೆ, ಶಾಸ್ತ್ರಗಳು ನೆರವೇರುವಾಗಲೂ ಮದುಮಗ ಸನ್ ಗ್ಲಾಸ್ ಅನ್ನು ಮಾತ್ರ ತೆಗೆಯಲೇ ಇಲ್ಲ. ಸ್ವಲ್ಪ ಹೊತ್ತು ಇದನ್ನು ನೋಡಿದವರಿಗೆ ಪರವಾಗಿಲ್ಲ ಎಂದೆನಿಸದರೂ, ಮದುಮಗ ಯಾಕೆ ನ್ ಗ್ಲಾಸ್ ತೆಗೆಯುತ್ತಲೇ ಇಲ್ಲ ಎಂಬ ಪ್ರಶ್ನೆ ಸೇರಿದ್ದವರನ್ನು ಕಾಡದೇ ಇರಲಿಲ್ಲ.  

ವಾಸ್ತವವಾಗಿ, ಔರಯ್ಯ ನಿವಾಸಿ ಅರ್ಜುನ್ ಸಿಂಗ್ ತನ್ನ ಮಗಳು ಅರ್ಚನಾ ಮದುವೆಯನ್ನು ಶಿವಂ ಎಂಬ ಹುಡುಗನೊಂದಿಗೆ ಮದುವೆ (Marriage) ನಿಶ್ಚಯ ಮಾಡಿದ್ದರು. ಅದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಶಿವಂ ವಿದ್ಯಾವಂತ ಎಂದು ಹೇಳಿಕೊಂಡಿದ್ದರಿಂದ, ತಮ್ಮ ಮಗಳನ್ನು ಶಿವಂಗೆ ಕೊಡಲು ಅರ್ಚನಾ ಹೆತ್ತವರು ಕೂಡಾ ಒಪ್ಪಿದ್ದರು.  

ಇದನ್ನೂ ಓದಿ : Ravi Shankar Prasad : ಐಟಿ ಸಚಿವ ರವಿ ಶಂಕರ್ ಪ್ರಸಾದ್‌ ಟ್ವಿಟರ್ ಅಕೌಂಟ್ ಲಾಕ್..!

ಮದುವೆಯ ದಿನ ಬಂದಿತು. ಮದುವೆ ಮನೆಗೂ ದಿಬ್ಬಣವೂ ಬಂತು. ದಿಬ್ಬಣದಲ್ಲಿದ್ದ ವರ ಮೊದಲೇ ಹೇಳಿದ ಹಾಗೆ ಸನ್ ಗ್ಲಾಸ್ (Sun glass) ಹಾಕಿಕೊಂಡಿದ್ದ. ದಿಬ್ಬಣ ಬರುವ ವೇಳೆ ಸನ್ ಗ್ಲಾಸ್ ಹಾಕಿಕೊಂಡಿರುವುದು ಆಶ್ಚರ್ಯ  ಎಂದು ಯಾರಿಗೂ ಅನಿಸಲಿಲ್ಲ. ಒಂದೊಂದೇ ಶಾಸ್ತ್ರ ನಡೆಯಲು ಆರಂಭವಾಯಿತು. ಶಾಸ್ತ್ರಗಳು ನಡೆಯುತ್ತಿದ್ದರೂ ವರ ಸನ್ ಗ್ಲಾಸ್ ಮಾತ್ರ ತೆಗೆಯಲಿಲ್ಲ. ಇಲ್ಲೇ ಹೆಣ್ಣಿನ ಕಡೆಯವರಿಗೆ ಇರಿಸು ಮುರುಸಾಗಿದ್ದು. ಹುಡುಗನಿಗೆ ದೃಷ್ಟಿ ದೋಷವಿದೆಯೇ ಎಂಬ ಮಾತು ಮದುವೆ ಮನೆಯಲ್ಲಿ ಕೇಳಿ ಬಂತು. ಈ ಮಾತು ವಧುವಿನ ಕಿವಿಗೂ ತಲುಪಿತು. 

ಏನೋ ಸಮಸ್ಯೆ ಇದೆ ಎನ್ನುವುದನ್ನು ಅರಿತ ವಧು ಮದುವೆಯಾಗಬೇಕಾದರೆ ಒಂದು ಷರತ್ತು ಪೂರೈಸಬೇಕು ಎಂದು ಹೇಳಿದ್ದಾಳೆ. ವಧುವಿನ ಷರತ್ತು ಬೇರೆ ಏನೂ ಅಲ್ಲ. ವರ ಹಿಂದಿ (Hindi) ದಿನಪತ್ರಿಕೆಯನ್ನು ಓದಬೇಕು ಎನ್ನುವುದು. ವರ ದಿನಪತ್ರಿಕೆ ಓದಿ ಮುಗಿಸಿದರೆ ಮಾತ್ರ ಮದುವೆ ಮುಂದುವರೆಯುತ್ತದೆ ಎಂಬ ಷರತ್ತನ್ನು ವಧು ಮುಂದಿಟ್ಟಿದ್ದಾಳೆ. ಆದರೆ ವಧುವಿನ ಷರತ್ತಿನಂತೆ ಹಿಂದಿ ಪತ್ರಿಕೆ ಓದುವುದು ವರನಿಗೆ ಸಾಧ್ಯವಾಗಲಿಲ್ಲ. ವಧು ಕೂಡಲೇ ಮದುವೆಯನ್ನು ಮುರಿದಿದ್ದಾಳೆ. 

ಇದನ್ನೂ ಓದಿ : ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಹುದ್ದೆ ಅಲಂಕರಿಸಲು ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಇಷ್ಟಾದ ಮೇಲೆ ವಧುವಿನ ಕಡೆಯವರು ವರನ ಮನೆಯವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News