ನವದೆಹಲಿ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India ) ದ  ಗ್ರಾಹಕರಾಗಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಎಸ್‌ಬಿಐನಲ್ಲಿ ಠೇವಣಿ ಇರಿಸಿದ 5 ಲಕ್ಷ ರೂ.ಗಳ ಮೊತ್ತವನ್ನು ಸಂಪೂರ್ಣವಾಗಿ ವಿಮೆ ಮಾಡಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಅಂದರೆ ಅವರು 5 ಲಕ್ಷ ರೂಪಾಯಿಗಳವರೆಗೆ ಠೇವಣಿಗಳಿಗೆ ವಿಮೆ ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಎಸ್‌ಬಿಐ (SBI)  ಬ್ಯಾಂಕ್ ಪ್ರಕಾರ ಇದು ಠೇವಣಿ ಇರಿಸಿದ ಹಣ + ಬಡ್ಡಿ ಎರಡನ್ನೂ ಒಳಗೊಂಡಿದೆ. ಈ ಹಿಂದೆ ಬ್ಯಾಂಕ್ ಠೇವಣಿಗಳ ವಿಮಾ ಮೊತ್ತದ ಹೆಚ್ಚಳದಿಂದಾಗಿ ಗ್ರಾಹಕರಿಗೆ ಪ್ರೀಮಿಯಂ ರವಾನಿಸುವುದಿಲ್ಲ ಎಂದು ತಿಳಿಸಿತ್ತು. 2020 ರ ಬಜೆಟ್‌ನಲ್ಲಿ ಸರ್ಕಾರ ಬ್ಯಾಂಕಿನಲ್ಲಿ ಠೇವಣಿ ಇಡುವ ಖಾತರಿಯನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.


ಮೊದಲ ಬಾರಿಗೆ CFO ಹುದ್ದೆಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ


ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ನಲ್ಲಿನ ಹಗರಣ ಬೆಳಕಿಗೆ ಬಂದ ನಂತರ ಆರ್‌ಬಿಐ ಸಹಕಾರಿ ಬ್ಯಾಂಕುಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತು. ಸಹಕಾರಿ ಬ್ಯಾಂಕಿನ ಮೇಲೆ ನಿಯಂತ್ರಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಆರ್‌ಬಿಐ ಸರ್ಕಾರದಿಂದ ಒತ್ತಾಯಿಸಿತ್ತು.


ಎಸ್‌ಬಿಐನಲ್ಲಿ ಕೇವಲ 100 ರೂಗಳಿಗೆ ಆರ್‌ಡಿ ಖಾತೆ ತೆರೆದು ಕಡಿಮೆ ಸಮಯದಲ್ಲಿ ಅಧಿಕ ಲಾಭ ಗಳಿಸಿ


ಹಗರಣ ಬೆಳಕಿಗೆ ಬಂದಾಗಿನಿಂದ ಹೂಡಿಕೆದಾರರ ವಿಶ್ವಾಸ ಅಲುಗಾಡುತ್ತಿತ್ತು. ಇದರಿಂದ ಲಕ್ಷಾಂತರ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಈಗ ಪಿಎಂಸಿ ಬ್ಯಾಂಕಿನ ಗ್ರಾಹಕರಿಗೆ 5 ಲಕ್ಷ ರೂಪಾಯಿಗಳ ಠೇವಣಿಯನ್ನು ವಿಮೆ ಮೂಲಕ ಭದ್ರಪಡಿಸಲಾಗಿದೆ.


ಗ್ರಾಹಕರು ತಮ್ಮ ಎಟಿಎಂ ಕಾರ್ಡ್‌ಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಇಲ್ಲಿದೆ ಮಾರ್ಗ


ಈ ಹಿಂದೆ ಎಸ್‌ಬಿಐ ಎಂಸಿಎಲ್‌ಆರ್‌ನಲ್ಲಿ ಶೇ 0.25 ರಷ್ಟು ಕಡಿತವನ್ನು ಘೋಷಿಸಿತು. ಈ ಕಡಿತವನ್ನು ಎಲ್ಲಾ ರೀತಿಯ ಸಾಲಗಳ ಮೇಲೆ ಮಾಡಲಾಗಿದೆ. ಹೊಸ ದರದ ನಂತರ ಎಸ್‌ಬಿಐನ ಎಂಸಿಎಲ್‌ಆರ್ 1 ವರ್ಷಕ್ಕೆ ಶೇಕಡಾ 7.00 ಕ್ಕೆ ಇಳಿದಿದೆ. ಈ ಮೊದಲು ಈ ದರವು ಒಂದು ವರ್ಷಕ್ಕೆ ಶೇಕಡಾ 7.25 ರಷ್ಟಿತ್ತು. ಹೊಸ ದರಗಳು 2020 ರ ಜೂನ್ 10 ರಿಂದ ಜಾರಿಗೆ ಬರುತ್ತವೆ.